ಮುದ್ದೆಬಿಹಾಲ್

ಪ್ರೀತಮ್ ಎನ್ ಟಿ ಮೇಲೆ ಪೋಲಿಸರ ಹಲ್ಲೆ ಖಂಡಿಸಿ ಕಲಾಪ ಬಹಿಷ್ಕಾರ

ಪ್ರೀತಮ್ ಎನ್ ಟಿ ಮೇಲೆ ಪೋಲಿಸರ ಹಲ್ಲೆ ಖಂಡಿಸಿ ಕಲಾಪ ಬಹಿಷ್ಕಾರ

ಮುದ್ದೇಬಿಹಾಳ 05: ಚಿಕ್ಕಮಗಳೂರ ನ್ಯಾಯವಾದಿ ಪ್ರೀತಮ್ ಎನ್ ಟಿ ಎನ್ನುವರ ಹೇಲ್ಮೇಟ ಧರಿಸಿಲ್ಲ ಎಂಬ ಕಾರಣಕ್ಕೆ ಅವರ ಮೇಲೆ ಅಲ್ಲಿನ ಪೋಲಿಸರು ಹಲ್ಲೆ ನಡೆಸಿ ಧೌರ್ಜನ್ಯ ಎಸಗಿದ್ದನ್ನು ಖಂಡಿಸಿ ಪಟ್ಟಣದ ತಾಲೂಕಾ ನ್ಯಾಯವಾದಿಗಳ ಸಂಘದವತಿಯಿಂದ ಒಂದು ದಿನದ ನ್ಯಾಯಾಲಯ ಕಲಾಪ ಬಹಿಸ್ಕರಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಪೋಲಿಸ್ ನೌಕರಿಯಿಂದ ವಜಾಗೊಳಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ನೂರಕ್ಕೂ ಹೆಚ್ಚು ಜನ ನ್ಯಾಯವಾದಿಗಳು ತಹಶಿಲ್ದಾರ ಬಲರಾಮ ಕಟ್ಟಿಮನಿಯವರ ಮುಖಾಂತರ ಮುಖ್ಯಮಂತ್ರಿ ಸಿದ್ರಾಮಯ್ಯನವರಿಗೆ ಮಂಗಳವಾರ ಮನವಿ ಸಲ್ಲಿಸಿದರು. 

ಈ ವೇಳೆ ತಾಲೂಕಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿಯವರು ಮಾತನಾಡಿ ಕಳೇದ ನಾಲ್ಕೈದು ದಿನಗಳ ಹಿಂದೆ ಚಿಕ್ಕಮಗಳೂರಿನ ನ್ಯಾಯವಾದಿ ಪ್ರೀತಮ್ ಎನ್ ಟಿ ಯವರು ತುರ್ತು ವಿಷಯಕ್ಕೆ ಸಂಬಂಧಿಸಿದಂತೆ ಹೇಲ್ಮೇಟ್ ಧರಿಸದೇ ದ್ವೀಚಕ್ರ ವಾಹನ ಒಡಿಸುತ್ತಿರುವುದೊಂದೆ ನೆಪ ಮಾಡಿ ಚಿಕ್ಕಮಗಳೂರಿನ ಪಿಎಸೈ ಸೇರಿದಂತೆ ಇತರೇ ಪೋಲಿಸ್ ಸಿಬ್ಬಂದಿಗಳು ನ್ಯಾಯವಾದಿ ಪ್ರೀತಮ್ ಎನ್ ಟಿ ಅವರನ್ನು ಬಾಯಿಗೆ ಬಂದದನ್ನು ಅವಾಶ್ಛ ಶಬ್ಧ ಗಳಿಂದ ನಿಂದಿಸಿದ್ದಲ್ಲದೇ ಮನಸೋ ಇಚ್ಚೆ ಮಾರಣಾಂತಿಕ ಹಲ್ಲೆ ನಡೆಸಿ ಕಾನೂನು ಕೈಗೆ ತೆಗೆದುಕೊಂಡು ಪೋಲಿಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. 

ಈ ಬಗ್ಗೆ  ಸ್ಥಳಿಯ ನ್ಯಾಯವಾದಿಗಳ ಸಂಘದ ವತಿಯಿಂದ ನ್ಯಾಯವಾದಿಗಳು ಪ್ರತಿಭಟನೆ ನಡೆಸಲು ಮುಂದಾದಾಗ ಅಲ್ಲಿನ  ಪೋಲಿಸ್ ಇಲಾಖೆ ಮೇಲಾಧಿಕಾರಿಗಳು ಈ ಪ್ರಕರಣವನ್ನು ಗಂಭಿರವಾರಗಿ ಪರಿಗಣಿಸದೇ ತಮ್ಮ ಇಲಾಖೆ ತಪ್ಪನ್ನು ಮುಚ್ಚಿಕೊಳ್ಳಲು ನ್ಯಾಯವಾದಿಗಳ ಪ್ರತಿಭಟನೆಯನ್ನು ಹತ್ತಿಕ್ಕಲು ಕಾರಣವಿಲ್ಲದೇ 18 ಜನ ವಕೀಲರ ಮೇಲೇಯೇ ಮೂರು ಪ್ರಕರಣ ದಾಖಲಿಸುವ ಮೂಲಕ ಸಂವಿಧಾನಿಕ ವಿರೋಧಿ ನಡೆ ಪ್ರದರ್ಶಿಸಿದ್ದಾರೆ. ಸಧ್ಯ ನ್ಯಾಯಾಲಯ ಆ ಪ್ರಕರಣಗಳಿಗೆ ತಡೆಯಾಜ್ಞೆ ನೀಡಿದೆ. 

ಈ ವೇಳೆ ವಕೀಲರೊಬ್ಬರ ಮೇಲೆ ಮಾರಣಾಂತಿಕ ಹಲ್ಯೆ ದೌರ್ಜನ್ಯ ನಡೆಸಿದ ಬಗ್ಗೆ ಈಗಾಗಲೇ ಪೋಲಿಸ್ ಪ್ರಕರಣ ದಾಖಲವಾಗಿದ್ದರೂ ಕೇವಲ ಒಬ್ಬನೇ ಒಬ್ಬ ಅಧಿಕಾರಿಗಳನ್ನು ಬಂಧಿಸಿ ಇನ್ನುಳಿದ ಸಿಬ್ಬಂದಿಗಳನ್ನು ಬಂಧಿಸದೇ ಕಾನೂನು ಉಲ್ಲಂಘಿಸುವ ಪ್ರಯತ್ನ ಮಾಡಿದ್ದಾರೆ ಇದರಲ್ಲಿ ಪೋಲಿಸ್ ಇಲಾಖೆಯ ಮೇಲಾಧಿಕಾರಿಗಳು ಸಹಿತ ಶಾಮಿಲಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ಕರ್ನಾಟಕ ರಾಜ್ಯ ಸರಕಾರ ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ಸಿಓಡಿ ತನಿಖೆಗೆ ಒಪ್ಪಿಸಿದೇ ಅದಕ್ಕೆ ಕರ್ನಾಟಕ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. 

 ಆದರೇ ತನಿಖೆ ನಡೆಸುವವರು ಕೂಡ ಪೋಲಿಸರೇ ಆಗಿದ್ದರಿಂದ ನಮಗೆ ನ್ಯಾಯ ಸಿಗುತ್ತದೆ ಎನ್ನುವ ವಿಸ್ವಾಸ ವಿಲ್ಲದಂತಾಗಿದೆ. ಕಾರಣ ಈಪ್ರಕರಣ ಬೇಧಿಸಲು ಮತ್ತು ಸಮರ​‍್ಕ ನ್ಯಾಯ ಒದಗಿಸಲು ರಾಜ್ಯದ ನಿವೃತ್ತ ನಾಯಾಧೀಶರನ್ನು ನೇಮಕ ಮಾಡಿ ಆ ಮೂಲಕ ತನಿಖೆಗೆ ಒಳಪಡಿಸಬೇಕು ಅಂದಾಗ ಮಾತ್ರ ನಮಗೆ ನಮ್ಮ ನ್ಯಾಯವಾದಿಗಳಿಗೆ ನ್ಯಾಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. 

ಈ ಘಟನೆಗೆ ಕಾರಣರಾದ ಪೋಲಿಸ್ ಇಲಾಖೆ ಅಧಿಕಾರಿಗಳನ್ನು ಈ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಅವರ ಸರಕಾರಿ ಪೋಲಿಸ್ ಸೇವೆಯಿಂದ ವಜಾಗೊಳಿಸಬೇಕು ಜೊತೆಗೆ ಇನ್ನು ಮುಂದೆ ರಾಜ್ಯಲ್ಲೆಡೆ ಈ ರೀತಿ ಘಟನೆಗಳು ನಡೆಯದಂತೆ  ನೋಡಿಕೊಳ್ಳಬೇಕು ಜೊತೆಗೆ ರಾಜ್ಯ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರಬೇಕು ಎಂದರು 

ಈ ವೇಳೆ ತಾಲೂಕಾ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎಚ್‌. ಈ ನಾಗೋಡ, ಪ್ರದಾನ ಕಾರ್ಯದರ್ಶಿ ಪಿ.ಬಿ ಗೌಡರ, ಸಹಕಾರ್ಯದರ್ಶಿ ಬಿ. ಪಿ ಮ್ಯಾಗೇರಿ, ಖಜಾಂಚಿ ಎಸ್‌. ಈ ಹಿರೇಮಠ, ನ್ಯಾಯವಾದಿಗಳಾದ ಎನ್‌. ಬಿ ಮುದ್ನಾಳ, ಎಸ್‌. ಎಂ ಚಿಲ್ಲಾಳಶೇಟ್ಟೆ, ಎಸ್‌. ಸಿ ಹಿರೇಮಠ, ಚೇತನ ಶಿವಶಿಂಪಿ, ಎನ್ ಐ ಕೆಸಾಪೂರ, ಎನ್ ಆರ್ ಮೋಕಾಶಿ,  ಪಿ ಎಂ ಪಾಟೀಲ, ರಶ್ಮೀ ಕುಲಕರ್ಣಿ, ಆರ್ ಎನ್ ದೊಡಮನಿ, ಬಿ.ಎಂ ಮುಂದಿನಮನಿ, ಎಸ್‌. ಎನ್ ಬಳುತಿ, ಎಸ್, ಎಂ ಬಾಗಲಕೋಟ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ