ಮುಸ್ಲಿಮರ 2ಬಿ ಮೀಸಲಾತಿ ರದ್ದತಿಗೆ ಖಂಡನೆ
ತಾಳಿಕೋಟಿ: ಸರಕಾರವು ಮುಸ್ಲಿಂರಿಗೆ ಕಲ್ಪಿಸಿದ್ದ 2ಬಿ ಮೀಸಲಾತಿ ರದ್ದುಪಡಿಸಿದ್ದನ್ನು ಖಂಡಿಸಿ ಅದನ್ನು ಮತ್ತೇ ಆರಂಭಿಸುವಂತೆ ಒತ್ತಾಯಿಸಿ ಮುಸ್ಲಿಂ ಸಮಾಜದ ಮುಖಂಡರು ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮುಸ್ಲೀಂ ಸಮಾಜದ ಮುಖಂಡ ಮಹಿಬೂಬಶ್ಯಾ ಮಕಾನದಾರ ಮಾತನಾಡಿ ಸರಕಾರದ ಈ ಅವೈಜ್ಞಾನಿಕ ನಿರ್ಣಯವನ್ನು ಖಂಡಿಸುತ್ತೇವೆ. 2ಬಿ ಅಡಿ ಇದ್ದ ಶೇ. 4 ಮೀಸಲಾತಿಯಿಂದ ಮುಸ್ಲೀಂರನ್ನು ಕೈಬಿಟ್ಟು ಆ ಮೀಸಲಾತಿಯನ್ನು ಬೇರೆ ಸಮುದಾಯಗಳಿಗೆ ಕೊಟ್ಟು ಮುಸ್ಲೀಮರನ್ನು ಆರ್ಥಿಕವಾಗಿ ಹಿಂದುಳಿದವರ ವರ್ಗದಲ್ಲಿ ಸೇರಿಸಿರುವುದು ಅಕ್ಷಮ್ಯ ಅನ್ಯಾಯವಾಗಿದೆ. ಇದೊಂದು ಚನಾವಣಾ ಗಿಮಿಕ್ ಆಗಿದ್ದು ಪರಸ್ಪರ ಸಹೋದರರಂತೆ ಕೂಡಿಬಾಳುವ ಎರಡು ಸಮುದಾಯಗಳ ಮಧ್ಯೆ ದ್ವೇಷ ಬಿತ್ತುವ ಹುನ್ನಾರವಾಗಿದೆ. ಇದಕ್ಕೆ ಕಾನೂನಿನಲ್ಲಿ ಯಾವುದೇ ಮನ್ನಣೆ ಇಲ್ಲ ಎಂದರು.
ಈ ಬಗ್ಗೆ ಈಗಾಗಲೇ ನಮ್ಮ ಸಮಾಜದಿಂದ ಕಾನೂನು ಹೋರಾಟ ನಡೆಸಲಾಗುತ್ತಿದೆ. ಈ ಕುರಿತು ಸರಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಇಲ್ಲವಾದಲ್ಲಿ ರಾಜ್ಯಪಾಲರೇ ಮುಂದಾಗಿ ಮೀಸಲಾತಿ ಬದಲಾವಣೆ ತಡೆಗಟ್ಟಬೇಕು ಎಂದು ಆಗ್ರಹಿಸಿದರು. ಈ ಸಮಯದಲ್ಲಿ ಸಾಮಾಜಿಕ ಹೋರಾಟಗಾರ ನದೀಂ ಕಡು, ಮೋದಿನಸಾ ನಗಾರ್ಚಿ, ಖ್ವಾಜಾ ಪಟೇಲ, ನಜೀರ ಚೋರಗಸ್ತಿ, ಅಯ್ಯಜ ಪಟೇಲ, ಆಶೀಫ ಹೊನ್ನಳ್ಳಿ, ಸಾಲವಾಡಗಿ, ಮತ್ತಿತರರು ಇದ್ದರು.