ಬಳ್ಳಾರಿ

ವರ್ಲ್ಡ್ ವಿಷನ್‍ದಿಂದ ಶಾಲೆಗೆ ಕಂಪ್ಯೂಟರ್ ದೇಣಿಗೆ

ವರ್ಲ್ಡ್ ವಿಷನ್‍ದಿಂದ ಶಾಲೆಗೆ  ಕಂಪ್ಯೂಟರ್ ದೇಣಿಗೆ

ಬಳ್ಳಾರಿ 17: ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯಗಳನ್ನು ನೀಡಿ, ಅಭಿವೃದ್ಧಿಗೆ ಶ್ರಮಿಸುತ್ತಿರುವ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ವರ್ಲ್ಡ್ ವಿಷನ್ ಸಂಸ್ಥೆಯ ಕೊಡುಗೆ ಅಪಾರವಾದದ್ದು ಎಂದು  ಕ್ಷೇತ್ರಶಿಕ್ಷಣಾಧಿಕಾರಿ ಟಿ.ಎಂ.ಸಿದ್ದಲಿಂಗಮೂರ್ತಿ ಶ್ಲಾಘಿಸಿದರು.

ವಿದ್ಯಾರ್ಥಿಗಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗಾಗಿ ಸತತವಾಗಿ ಶ್ರಮಿಸುತ್ತಿರುವ ಸ್ವಯಂಸೇವಾ ಸಂಸ್ಥೆಯಾದ ‘ವರ್ಲ್ಡ್ ವಿಷನ್ ಎಡಿಪಿ ವತಿಯಿಂದ ಸ.ಹಿ.ಪ್ರಾ.ಶಾಲೆ ಹಿರೇಹಡ್ಲಿಗಿ ಶಾಲೆಗೆ 5 ಗಣಕಯಂತ್ರಗಳನ್ನು ದೇಣಿಗೆಯಾಗಿ ನೀಡಲಾಯಿತು.

ವರ್ಲ್ಡ್ ವಿಷನ್ ಎಡಿಪಿ ಮ್ಯಾನೇಜರ್ ಪ್ರೇಮಲತಾ ಮಾತನಾಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯೇ ನಮ್ಮ ಸಂಸ್ಥೆಯ ಗುರಿ, ವಿದ್ಯಾರ್ಥಿಗಳ ಶ್ರೇಯೊಭಿವೃದ್ಧಿಗೆ ನಮ್ಮ ಗುರಿ ಎಂದು ತಿಳಿಸಿದರು.

ಶಾಲೆಯ ಮುಖ್ಯಗುರು ಮಹ್ಮದ್‍ಹನೀಫ್‍ಸಾಹೇಬ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಅತಿಥಿಗಳಾಗಿ ಇಸಿಓ ಗೂಳೆಪ್ಪ, ಹಿರೇಮಠ್, ಸಿಆರ್‍ಪಿ ಸಿದ್ಧೇಶ್ವರ್, ವಿಡಿಸಿ ಅಧ್ಯಕ್ಷ ರುದ್ರಗೌಡ, ಸ್ವಯಂ ಸೇವಕ ರಾಮಣ್ಣ, ಪ್ರೌಢಶಾಲೆಯ ಮುಖ್ಯಗುರು ಶೋಭಾ, ಬಸರಕೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರಿಯಮ್ಮ ಹಾಗೂ ಹಡ್ಲಿಗಿ ಗ್ರಾಮದ ಗ್ರಾಪಂ ಸದಸ್ಯರು, ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಕಾಂತಪ್ಪ, ಉಪಾಧ್ಯಕ್ಷ ತಿಮ್ಮಯ್ಯ ಹಾಗೂ ಸರ್ವಸದಸ್ಯರು, ಪ್ರೌಢಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಪಕ್ಕೀರಪ್ಪ ಹಾಗೂ ಸರ್ವಸದಸ್ಯರು ಭಾಗವಹಿಸಿದ್ದರು. ಶಿಕ್ಷಕರಾದ ಚಂದ್ರಶೇಖರ ನಿರೂಪಿಸಿದರು. ಕೇಶವರೆಡ್ಡಿ ಸ್ವಾಗತಿಸಿದರು. ಅಬ್ದುಲ್‍ಕಲಾಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಬರ್‍ಬಾಷಾ ವಂದಿಸಿದರು. ಶಾಲೆಯ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸುದ್ದಿ ಓದಿ