ತಾಳಿಕೋಟಿ

ಮುಷ್ಕರದಲ್ಲಿ ಕಡ್ಡಾಯವಾಗಿ ಭಾಗವಹಿಸಿ: ದೊಡಮನಿ

ಮುಷ್ಕರದಲ್ಲಿ ಕಡ್ಡಾಯವಾಗಿ ಭಾಗವಹಿಸಿ: ದೊಡಮನಿ
ತಾಳಿಕೋಟೆ ಪಟ್ಟಣದಲ್ಲಿ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸರಕಾರಿ ನೌಕರರ ಅನಿರ್ದಿಷ್ಠಾವಧಿ ಮುಷ್ಕರದ ಪ

ತಾಳಿಕೋಟೆ01: ಬುಧವಾರದಿಂದ ನಡೆಯಲಿರುವ ಸರಕಾರಿ ನೌಕರರ ಅನಿರ್ದಿಷ್ಠಾವಧಿ ಮುಷ್ಕರಕ್ಕೆ ಎಲ್ಲ ಸರಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವದು ಮೂಲಕ ಬೆಂಬಲವನ್ನು ನೀಡಬೇಕು. ರಾಜ್ಯ ಸರಕಾರಿ ನೌಕರರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ನಿಂಗನಗೌಡ ದೊಡಮನಿ ಹೇಳಿದವರು.

ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈಗಾಗಲೇ 7 ನೇ ವೇತನ ಆಯೋಗ ರಚನೆ ಮಾಡಿ ವರದಿ ಪಡೆದು ಅನುಷ್ಠಾನ ಮಾಡಬೇಕಿತ್ತು. ಅದನ್ನು ಸರಿಯಾದ ಸಮಯಕ್ಕೆ ಸರಕಾರ ಮಾಡಿಲ್ಲ. ಮೊದಲು ಸಹ ಇದೇ ರೀತಿ ಅನ್ಯಾಯವನ್ನು ಮಾಡುತ್ತಾ ಸಾಗಿದೆ. ಹಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರ ನಡುವೆ ವೇತನ ತಾರತಮ್ಯ ಇದೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ 7 ವೇತನ ಆಯೋಗದ ಮಧ್ಯಂತರ ವರದಿಯನ್ನು ಪಡೆದುಕೊಂಡು 1-07-2023 ರಿಂದ ಜಾರಿಗೆ ಬರುವಂಥೆ ಶೇ.40 ವೇತನ ಹೆಚ್ಚಳವನ್ನು ಮಾಡಬೇಕು. ಪಂಚಾಬ್, ರಾಜಸ್ಥಾನ, ಛತ್ತಿಘಡ, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳ ಮಾದರಿಯಲ್ಲಿ ಎನ್ಪಿಎಸ್ ರದ್ದುಪಡಿಸಿ ಓಪಿಎಸ್ ಜಾರಿಗೊಳಿಸುವಂತೆ ಒತ್ತಾಯಿಸಿ ಅನಿದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ಎಲ್ಲ ಸರಕಾರಿ ನೌಕರರು, ಅನುದಾನಿತ ಶಾಲೆ ಕಾಲೇಜುಗಳ ನೌಕರರು, ನಿಗಮ ಮಂಡಳಿಯ ನೌಕರರು ಭಾಗವಹಿಸಬೇಕು. ಯಾವುದೇ ಶಾಲೆಗಳು ತೆಗೆಯಬಾರದು, ಕಚೇರಿಗಳು ತೆಗೆಯಬಾರದು. ಒಂದು ವೇಳೆ ತೆಗೆದರೆ ಅವರಿಗೆ ಸಂಘಟನೆ ಗಮನಕ್ಕೆ ತನ್ನಿ ನಾವು ಹೋಗಿ ಅವರಿಗೆ ಮನವೊಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕೋರಲಾಗುವದು. ಹಿರಿಯ ಅಧಿಕಾರಿಗಳೂ ಸೇರಿದಂತೆ ರಾಜ್ಯ ಸರಕಾರದ ಎಲ್ಲ ನೌಕರರು ಈ ಮುಷ್ಕರದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ರಾಜ್ಯ ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ  ಶಿವರಾಜ ಚೌದ್ರಿ ಮಾತನಾಡಿ, ಬೇಡಿಕೆಗಳ ಈಡೇರಿಕೆ ಕುರಿತಂತೆ ಸರಕಾರದೊಂದಿಗೆ ಉನ್ನತ ಮಟ್ಟದಲ್ಲಿ ಚರ್ಚೆ  ನಡೆಯುತ್ತಿದೆ. ಬೇಡಿಕೆ ಈಡೇರುವವರೆಗೆ ನಿರ್ಧಾರದಿಂದ ಹಿಂದಡಿ ಇಡುವ ಮಾತೇ ಇಲ್ಲ ಎಂದು ನೌಕರರ ಸಂಘದ ರಾಜ್ಯಾಧ್ಯಕ್ಷರು ಹೇಳಿದ್ದಾರೆ. ರಾಜ್ಯ ಸಂಘಟನೆಯ ಸೂಚನೆಯಂತೆ ಹೋರಾಟದಲ್ಲಿ ಭಾಗವಹಿಸಿ. ಕಾಲ ಕಾಲಕ್ಕೆ ಬರುವ ಸಂದೇಶದಂತೆ ಹೋರಾಟದಲ್ಲಿ ಬಾಗವಹಿಸೋಣ ಎಂದರು.

ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಬಿ.ಟಿ.ವಜ್ಜಲ, ಎಸ್.ಬಿ.ಬೀರಗೊಂಡ, ಆರ್.ಜಿ.ರಾಠೋಡ, ವಾಯ್.ಬಿ.ಬಡಿಗೇರ, ಗಿ.ಪಿ.ಧನಪಾಲ, ಕೆ.ಎಸ್.ಸಜ್ಜನ. ಎಸ್.ಎಸ್.ಅಂಗಡಿ, ಮಹಾಂತಗೌಡ ಚೌದ್ರಿ, ಎಸ್.ಬಿ.ಗಂಗನಳ್ಳಿ, ರಶೀದ ಮೈತ್ರಿ, ಎಚ್.ಸಿ.ಕರಕಳ್ಳಿ, ಬಸನಗೌಡ ಚೌದ್ರಿ, ಕಂಠೀರವ ದೇಸಾಯಿ, ರಮೇಶ ಹಿಪ್ಪರಗಿ, ಟಿ.ಎಸ್.ಲಮಾಣಿ, ಬಿ.ಆಯ್.ಹಿರೇಹೊಳಿ ಸೇರಿದಂತೆ ಇತರರು ಇದ್ದರು.


ಸುದ್ದಿ ಓದಿ