ಪಟ್ಟಣವನ್ನು ಅಭಿವೃದ್ಧಿ ಪಡಿಸುವಲ್ಲಿ ಸಂಪೂರ್ಣ ವಿಫಲ: ಹಿರೇಮನಿ
ಲೋಕದರ್ಶನ ವರದಿ
ಮುಂಡರಗಿ 12: ಪುರಸಭೆ ವ್ಯಾಪ್ತಿಯಲ್ಲಿ ಬರುವ 23ನೇ ವಾರ್ಡಗಳಿಗೆ ಭೇಟಿ ನೀಡಿ ಪುರಸಭೆ ಹಾಗೂ ಪಟ್ಟಣವನ್ನು ಅಭಿವೃದ್ಧಿ ಪಡಿಸುವಲ್ಲಿ ಸಂಪೂರ್ಣ ವಿಫಲರಾದ ಪುರಸಭೆ ಅಭಿಯಂತರರನ್ನು ಕೂಡಲೇ ವರ್ಗಾವಣೆ ಮಾಡಿ, ಖಾಯಂ ಅಭಿಯಂತರರನ್ನು ನೇಮಕಮಾಡಬೇಕೆಂದು ಪುರಸಭೆ ಸದಸ್ಯ ಸಂತೋಷ ಹಿರೇಮನಿ ಒತ್ತಾಯಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಪಟ್ಟಣದಲ್ಲಿ ಪ್ರತಿಯೊಂದು ಅಭಿವೃದ್ಧಿ ಕೆಲಸಗಳಾಗಬೇಕಾದರೆ ಮುಖ್ಯವಾಗಿ ಮುಖ್ಯಾಧಿಕಾರಿ ಹಾಗೂ ಅಭಿಯಂತರರ ಕಾಳಜಿಯ ಕೆಲಸ ಪ್ರಮುಖವಾದುದು. ಆದರೆ ಅಭಿಯಂತರರು ಪುರಸಭೆ ಕಛೇರಿಗೆ ವಾರದಲ್ಲಿ ಒಂದು ಭಾರಿ ಮಾತ್ರ ಭೆೇಟಿ ನೀಡಿದರೆ ಪುರಸಭೆ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ನಿರಂತರವಾಗಿ ಪಟ್ಟಣದ ಎಲ್ಲಾ ವಾರ್ಡಗಳಿಗೆ ಭೆೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ಸಂಗ್ರಹಿಸಿ ಕೂಡಲೇ ಅವುಗಳ ಬಗ್ಗೆ ಕ್ರಮಕೈಕೊಳ್ಳುವುದು ಉತ್ತಮ ಆಡಳಿತವಾಗುತ್ತದೆ. ಅದು ಯಾವುದು ನಡೆಯುತ್ತಿಲ್ಲದಿರುವುದು ಬೇಸರದ ಸಂಗತಿ.
ವಾರದಲ್ಲಿ ಒಂದು ಭಾರಿ ಪುರಸಭೆ ಕಾರ್ಯಾಲಯಕ್ಕೆ ಬಂದರೆ, ಬರೀ ಮಾಹಿತಿ ನೋಡುವುದಾಗುತ್ತದೆ ಹೊರತು ಪಟ್ಟಣದ ಅಭಿವೃದ್ಧಿಪರ ಕೆಲಸವೂ ಸಂಪೂರ್ಣವಾಗುವುದಿಲ್ಲ. ಇದರಿಂದ ಜನಪ್ರತಿನಿಧಿಗಳಾದ ನಮಗೆ ನಮ್ಮ ವಾಡರ್ಿನ ಮತದಾರರು ನಮಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಈ ಕುರಿತು ಮುಖ್ಯಾಧಿಕಾರಿಗಳು ಹಾಗೂ ಅಭಿಯಂತರರಿಗೆ ಪೋನ್ ಕರೆ ಮಾಡಿದರೆ ಪೋನ್ ಕರೆಯನ್ನು ಸ್ವೀಕರಿಸುವುದಿಲ್ಲ. ಹಾಗಾದರೆ ನಾವು ಯಾರನ್ನು ಕೇಳಬೇಕು. ನಾನೊಬ್ಬ ಪುರಸಭೆ ಸದಸ್ಯನಾದರೂ ನನ್ನ ಪೋನ್ ಕರೆಯನ್ನು ಸ್ವೀಕರಿಸುವುದಿಲ್ಲ ಎಂದರೆ, ಇನ್ನು ಜನಸಾಮಾನ್ಯರಾದರೆ ಏನು ಗತಿ. ಹೀಗಾಗಿ ಇಂತಹ ಅಭಿಯಂತರರು ನಮ್ಮ ಪುರಸಭೆಗೆ ಬೇಡ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.
ಹಾಗೂ ಪುರಸಭೆ ಮುಖ್ಯಾಧಿಕಾರಿಗಳು ಸಹ ಪಟ್ಟಣದ ಅಭಿವೃದ್ಧಿಯತ್ತ ಗಮನ ಹರಿಸುತ್ತಿಲ್ಲ. ಮೊದಲು ಅವರಿಗೆ ಎಲ್ಲಾ ವಾಡರ್ಿನ ಬಗ್ಗೆ ಮಾಹಿತಿಯೇ ಇರುವುಲ್ಲ. ಅವರು ಹೇಗೆ ನಮ್ಮ ಪಟ್ಟಣವನ್ನು ಅಭಿವೃದ್ಧಿಗೊಳಿಸುತ್ತಾರೆ ಎಂಬ ನಂಬಿಕೆ ಇಟ್ಟುಕೊಳ್ಳಬೇಕು. ಹೀಗಾಗಿ ಮುಖ್ಯಾಧಿಕಾರಿಗಳನ್ನೂ ಕೂಡಾ ವಗರ್ಾಯಿಸಬೇಕು. ಮುಖ್ಯಾಧಿಕಾರಿಗಳು ಹಾಗೂ ಅಭಿಯಂತರರು ಸೇರಿ ಸಾರ್ವಜನಿಕರಿಗೆ ಕಣ್ಣುಮುಚ್ಚಾಲೆ ಆಟವನ್ನು ಆಡುತ್ತಿದ್ದಾರೆ. ಇದನ್ನು ಆಡಳಿತ ಮಂಡಳಿ ನೊಡುತ್ತಾ ಮೂಖಜಾಣರಂತೆ ಆಡಳಿತ ನಡೆಸುತ್ತಿದೆ.
ಹೀಗಾಗಿ ಇದರ ಬಗ್ಗೆ ಕ್ರಮಕೈಕೊಳ್ಳದಿದ್ದರೇ ಈಗ ಸಕರ್ಾರದ ನೀತಿ ಸಂಹಿತೆ ಇರುವುದರಿಂದ ನಾವು ಪ್ರತಿಭಟನೆಯನ್ನು ಹಮ್ಮಿಕೊಂಡಿಲ್ಲ. ನೀತಿ ಸಂಹಿತೆ ಮುಗಿದ ಬಳಿಕ ಕನರ್ಾಟಕ ರಕ್ಷಣಾ ವೇದಿಕೆ ಸ್ವಾಬಿಮಾನಿ ಬಣದ ಉಪಸ್ಥಿತಿಯಲ್ಲಿ ನಾವು ಪುರಸಭೆ ಮುಂದೆ ಉಗ್ರವಾದ ಹೋರಾಟ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷ ಗವಿಸಿದ್ದಪ್ಪ ಹ್ಯಾಟಿ, ತಾಲೂಕಾ ಅಧ್ಯಕ್ಷ ಮರಿಯಪ್ಪ ಅಳವಂಡಿ ಹಾಗೂ ಮೈಲಪ್ಪ ಮಾಯಮ್ಮನವರ ಪಾಲಗೊಂಡಿದ್ದರು