ಬಳ್ಳಾರಿ

ಕಂಪ್ಲಿ ಬಂದ್ ಪ್ರತಿಭಟನೆ: ಬಿಜೆಪಿ ಕಾರ್ಯಕರ್ತರು ಉದ್ದೇಶಪೂರ್ವಕ ಗಲಾಟೆ

ಕಂಪ್ಲಿ ಬಂದ್ ಪ್ರತಿಭಟನೆ: ಬಿಜೆಪಿ ಕಾರ್ಯಕರ್ತರು ಉದ್ದೇಶಪೂರ್ವಕ ಗಲಾಟೆ

ಲೋಕದರ್ಶನವರದಿ

ಕಂಪ್ಲಿ02:ಕಂಪ್ಲಿಯನ್ನು ವಿಜಯನಗರ ಜಿಲ್ಲೆಗೆ ಸೇರಬಾರದು ಎನ್ನುವ ದುರುದ್ದೇಶದಿಂದಲೇ ಬಿಜೆಪಿ ಕಾರ್ಯಕರ್ತರು ಸೋಮವಾರ ನಡೆದ ಕಂಪ್ಲಿ ಬಂದ್ ಪ್ರತಿಭಟನಾ ಮೆರವಣಿಗೆಯಲ್ಲಿ ಗಲಾಟೆ ಮಾಡಿಸಿದ್ದಾರೆ ಎಂದು ಪುರಸಭೆ ಸದಸ್ಯ ವೀರಾಂಜನೇಯಲು ಆರೋಪಿಸಿದರು. ಇಲ್ಲಿನ ಶಾಸಕರ ಕಚೇರಿ ಆವರಣದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿ ನೆರವೇರಿಸಿ ಮಾತನಾಡಿ, ಮಾಜಿ ಶಾಸಕ ಸುರೇಶ್ಬಾಬು ಅವರು ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ ಗರಡಿಯಲ್ಲಿ ಬೆಳೆಯುತ್ತಿರುವ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರಿಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಪೊಲೀಸ್ ಡಿಪಾಟರ್್ಮೆಂಟ್ ಮೂಲಕ ಪ್ರಕರಣ ದಾಖಲಿಸುವ ಬೆದರಿಕೆ ಹಾಕಿಸುತ್ತಿದ್ದಾರೆ. ಪೊಲೀಸರು ನಮಗೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಒತ್ತಾಯಿಸಿದರು.

ಪುರಸಭೆ ಸದಸ್ಯ ಕೆ.ಎಸ್.ಚಾಂದ್ಬಾಷ ಮಾತನಾಡಿ, ಮಾಜಿ ಶಾಸಕ ಸುರೇಶ್ಬಾಬು ಅವರು ಈತನಕ ಕಂಪ್ಲಿ ವಿಜಯನಗರ ಜಿಲ್ಲೆಗೆ ಸೇರಬೇಕು ಎಂದು ಪತ್ರಿಕಾ ಹೇಳಿಕೆ ನೀಡಿಲ್ಲ. ಬಿಜೆಪಿ ಮಂಡಲ ಅಧ್ಯಕ್ಷ ಅಳ್ಳಳ್ಳಿ ವೀರೇಶ್ ಅವರು ಕಂಪ್ಲಿ ಹಳೆಯ ಜಿಲ್ಲೆಯಲ್ಲಿದ್ದರೆ ಅಭಿವೃದ್ದಿ ಅಂತ ಹೇಳಿಕೆ ನೀಡಿದ್ದು, ಕಂಪ್ಲಿ ವಿಜಯನಗರ ಜಿಲ್ಲೆಗೆ ಸೇರುವುದು ಬಿಜೆಪಿಗರಿಗೆ ಇಷ್ಟವಿಲ್ಲ ಎಂದರು.  ಮುಖಂಡ ವೈ.ಅಬ್ದುಲ್ ಮುನಾಫ್ ಮಾತನಾಡಿ, ಕಂಪ್ಲಿ ಬಂದ್ ಹೋರಾಟವನ್ನು ಕೆಡಿಸುವುದೇ ಬಿಜೆಪಿಗರ ಷಡ್ಯಂತ್ರವಾಗಿತ್ತು. ಸುರೇಶ್ಬಾಬು ವಿರುದ್ಧ ಬಿಜೆಪಿ ಕಾರ್ಯಕರ್ತರೇ ಘೋಷಣೆ ಕೂಗಿ, ಅವರೇ ಗಲಾಟೆ ಎಬ್ಬಿಸಿದರು. ಆಸ್ತಿ ರಕ್ಷಣೆಗಾಗಿ ಸುರೇಶ್ಬಾಬು ಅವರು ಕಂಪ್ಲಿಯನ್ನು ವಿಜಯನಗರ ಜಿಲ್ಲೆಗೆ ಸೇರಿಸಲು ಇಚ್ಚಿಸುತ್ತಿಲ್ಲ. ಕಂಪ್ಲಿ ಬಂದ್ನಲ್ಲಿ ಪಾಲ್ಗೊಳ್ಳಲು ಇಚ್ಚಿಸದೆ ಸುರೇಶ್ಬಾಬು ಪಾಲ್ಗೊಂಡಿಲ್ಲ ಎಂದು ಆರೋಪಿಸಿದರು.ಪುರಸಭೆ ಸದಸ್ಯರಾದ ಹೊನ್ನೂರ್ವಲಿ, ಮೌಲ, ಪ್ರಮುಖರಾದ ಬಿ.ನಾರಾಯಣಪ್ಪ, ಎಂ.ರಾಘವೇಂದ್ರ, ಶ್ರೀನಿವಾಸ್, ಸತ್ಯಪ್ಪ, ಆಟೋ ರಾಘವೇಂದ್ರ, ಹಬೀಬ್ ರೆಹಮಾನ್, ಕರಿಬಸವನಗೌಡ, ಬಿ.ಜಾಫರ್, ಜಿ.ಸುಧಾಕರ, ಬಿ.ನಾಗರಾಜ ಇತರರಿದ್ದು ಮಾತನಾಡಿದರು. 


ಸುದ್ದಿ ಓದಿ