ವಿಜಯಪುರ

ರೈತರಿಗೆ ಪರಿಹಾರ: ಸರ್ಕಾರದ ವಿರುದ್ಧ ರೈತ ಸಂಘದ ಆಕ್ರೋಶ

ರೈತರಿಗೆ ಪರಿಹಾರ: ಸರ್ಕಾರದ ವಿರುದ್ಧ ರೈತ ಸಂಘದ ಆಕ್ರೋಶ


 ವಿಜಯಪುರ 25:  ಬರ ಪರಿಹಾರವಾಗಿ ಪ್ರತಿ ರೈತನ ಖಾತೆಗೆ ಕೇವಲ ?2,500 ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿದರು.  

 ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದ ರೈತ ಮುಖಂಡರು, ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಕನಿಷ್ಠ ಎಕರೆಗೆ ?25,000 ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.  

ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರೈತರ ಹೋರಾಟದ ಫಲವಾಗಿ ಸರ್ಕಾರ ಬರ ಘೋಷಣೆ ಮಾಡಿದ್ದರೂ, ಪರಿಹಾರದ ಮೊತ್ತ ರೈತರ ಸಂಕಷ್ಟಕ್ಕೆ ತಕ್ಕಂತೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿ ರೈತನ ಖಾತೆಗೆ ?2,500 ನೀಡುವುದು ರೈತರನ್ನು ಭಿಕ್ಷುಕರಂತೆ ಕಾಣಿಸಿದಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.  

 ಸರ್ಕಾರಕ್ಕೆ ರೈತರ ಹಿತ ಕಾಪಾಡುವ ಕಾಳಜಿ ಇದ್ದರೆ ಕನಿಷ್ಠ ಎಕರೆಗೆ ?25,000 ಪರಿಹಾರ ನೀಡಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.  

 ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಸಂಚಾಲಕ ಪಾಂಡು ಹಟ್ಟಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗುರುರಾಜ ಪಡಶೆಟ್ಟಿ, ಗುರುಲಿಂಗಪ್ಪ ಪಡಸಲಗಿ, ಶ್ರೀಶೈಲ ಕುರಣದ, ಶಿವಪ್ಪ ಮಾಳಗೌಡ, ಅಶೋಕ ಉಪ್ಪಲದಿನ್ನಿ ಸೇರಿದಂತೆ ಹಲವರು ಭಾಗವಹಿಸಿದ್ದರು. 


ಸುದ್ದಿ ಓದಿ