ಬಳ್ಳಾರಿ

ಸರ್ಕಾರದ ನಿರ್ಧಾರದ ಮೇಲೆ ಸಮುದಾಯದ ತೀರ್ಮಾನ

ಸರ್ಕಾರದ ನಿರ್ಧಾರದ ಮೇಲೆ ಸಮುದಾಯದ ತೀರ್ಮಾನ

ಹೊಸದುರ್ಗ ಭಗೀರಥ ಪೀಠದ ಡಾ. ಪುರುಷೋತ್ತಮಾ ನಂದಪುರಿ ಮಹಾಸ್ವಾಮಿ ಹೇಳಿಕೆ

ಹರಪನಹಳ್ಳಿ 02: ಮೀಸಲಾತಿ ಕುರಿತಾಗಿ ಸರ್ಕಾರದ ನಿರ್ಧಾರದ ಮೇಲೆ ನಮ್ಮ ಸಮುದಾಯದ ತೀರ್ಮಾನವಾಗಿದ್ದು ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದು ಹೊಸದುರ್ಗ ಭಗೀರಥ ಪೀಠದ ಡಾ. ಪುರುಷೋತ್ತಮಾ ನಂದಪುರಿ ಮಹಾಸ್ವಾಮಿ ಹೇಳಿದರು.

ಪಟ್ಟಣದ ಉಪ್ಪಾರ ಸಮುದಾಯ ಭವನದಲ್ಲಿ ಶುಕ್ರವಾರ ತಾಲೂಕು ಉಪ್ಪಾರ ಸಂಘ, ಉಪ್ಪಾರ ನೌಕರರ ಸಂಘ ಹಾಗೂ ಉಪ್ಪಾರ ಯುವಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.

ಧಾರ್ಮಿಕವಾಗಿ ಸಮಯ ಪ್ರಜ್ಞೆ, ಶಿಸ್ತನ್ನು ಅಳವಡಿಸಿಕೊಂಡಿದ್ದ ಸಂತ, ಶರಣರು, ದಾರ್ಶನಿಕರು ನಡೆದು ಬಂದಿದ್ದು, ಉಪ್ಪಾರ ಸಮುದಾಯ ಕೂಡ ಎಲ್ಲರ ಮನಸ್ಸನ್ನು ಗೆದ್ದಿರುವ ನೀವುಗಳು ಶಿಸ್ತುನ್ನು ರೂಢಿಸಿಕೊಂಡು, ಸಮಯ ಪ್ರಜ್ಞೆ ಮೇರೆದವರು ಎಲ್ಲಾ ರೀತಿಯ ಗೌರವದ ಸಾಧನೆಯನ್ನು ಮಾಡುತ್ತಿರುವುದನ್ನು ಕಾಣಬಹುದು. ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಸಂಸ್ಕಾರ ಬೆಳೆಸಿ ಎಂದರು.

ಶಾಸಕ ಜಿ. ಕರುಣಾಕರರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಯಾವುದೇ ವಸ್ತುಗಳನ್ನು ಕಳ್ಳತನ ಮಾಡಬಹುದು ಆದರೆ ವಿದ್ಯೆಯನ್ನು ಕದಿಯಲು ಸಾದ್ಯವಿಲ್ಲ ಆದ್ದರಿಂದ ವಿದ್ಯೆಯ ಮೂಲಕ ಉನ್ನತ ಹುದ್ದೆ ಪಡೆಯಲು ಸಾದ್ಯ ಎಂದ ಅವರು ಉಪ್ಪಾರ ಸಮಾಜ ಭವನಕ್ಕೆ ಸರ್ಕಾರದಿಂದ 2ಕೋಟಿ ರೂ.ಗಳನ್ನು ಅನುದಾನ ಬಿಡುಗಡೆಗೆ ಪ್ರಯತ್ನಿಸುವುದಾಗಿ ಹೇಳಿದರು.

ಉಪ್ಪಾರ ಸಮಾಜಕ್ಕೆ ಮುಂದಿನ ಜಿಪಂ, ತಾಪಂಗಳಲ್ಲಿ ಆದ್ಯತೆ ನೀಡುವುದಾಗಿ ಹೇಳಿದ ಅವರು ಸಮುದಾಯ ಅಭಿವೃದ್ಧಿ ಆಗಬೇಕು ಈ ನಿಟ್ಟಿನಲ್ಲಿ ಗಂಗಕಲ್ಯಾಣ, ಸಾಲ ವಿತರಣೆ ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನ ಮಾಡುವೇ ಎಂದರು.

ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೆ.ಗಿರೀಶ್ ಮಾತನಾಡಿ ರಾಜ್ಯದಲ್ಲಿ ರಾಜಕೀಯವಾಗಿ ಮೀಸಲಾತಿ ಅಗತ್ಯವಿದ್ದು, ನಮ್ಮ ಸಮುದಾಯ ಸಿ.ಪುಟ್ಟರಂಗಶೆಟ್ಟಿಯವರಿಗೆ ಉಪಮುಖ್ಯಮಂತ್ರಿ ಸ್ಥಾನ ನಿಡಬೇಕು ಎಂದ ಅವರು ನಮ್ಮ ಹಕ್ಕುಗಳನ್ನು ಪಡೆಯಲು ಸರ್ಕಾರಕ್ಕೆ ಸೆಡ್ಡು ಹೊಡೆದು ಕೇಳವಂತಾಗಲು ಎಲ್ಲರು ಒಗ್ಗಾಟ್ಟಾಗಬೇಕು ಇದಕ್ಕಾಗಿ ಮುಂದಿನ ದಿನಗಳಲ್ಲಿ ಬೀದರನಿಂದ ಚಾಮರಾಜನಗರದವರೆಗೂ ಸಂಘಟನೆಯನ್ನು ಸಂಘಟಿಸಲಾಗುವುದು ಎಂದರು.

ರಾಜ್ಯ ಕೆಪಿಸಿಸಿ ಓಬಿಸಿ ಘಟಕದ ಉಪಾಧÀ್ಯಕ್ಷ ಡಾ. ಉಮೇಶಬಾಬು ಮಾತನಾಡಿ ನಮ್ಮ ಸಮಾಜ ಉನ್ನತಮಟ್ಟದಲ್ಲಿ ಬೆಳೆಯಬೇಕಾಗಿದೆ ಆದರೆ ಸಂಘಟನೆಯ ಕೊರತೆ ಇದ್ದು ಮುಂದಿನ ದಿನಗಳಲ್ಲಿ ದ್ವೇಷ, ಅಸೂಯೆ ಬಿಟ್ಟು ಸಂಘಟಿತರಾಗಿ ಮುಂದಿನ ಮಕ್ಕಳ ಭವಿಷಕ್ಕಾಗಿ ಉತ್ತಮ ಶಿಕ್ಷಣ ಕೊಡಿಸಿ, ಶ್ರೀಗಳ ಮಾರ್ಗದರ್ಶನದಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಸಮಾಜದ 3ಜನ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಮುಂದಾಗುತ್ತೇನೆ ಎಂದರು.

ಸಾಹಿತಿ, ಶಿಕ್ಷಕಿ ಸುಭದ್ರ ಮಾಡ್ಲಿಗೇರಿ ಉಪ್ಪಾರ ಸಮುದಾಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. 2019-20ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ, ಕೋವಿಡ್‍ನಿಂದ ಮೃತಪಟ್ಟ ಕುಟುಂಬದವರಿಗೆ, ಸಮುದಾಯದ ನೂತನ ಗ್ರಾಪಂ ಸದಸ್ಯರಿಗೆ, ತಾಲೂಕಿನ ನೌಕರರಿಗೆ, ವಿಶೇಷ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ತಾಲೂಕು ಅಧ್ಯಕ್ಷ ಜಿ.ಹನುಂತಪ್ಪ, ಪುರಸಭೆ ಸದಸ್ಯ ಗೊಂಗಡಿ ನಾಗರಾಜ, ನೌಕರರ ಸಂಘದ ಅಧ್ಯಕ್ಷ ಎಂ.ರಮೇಶ, ಯುವಕ ಸಂಘದ ಅಧ್ಯಕ್ಷ ಎಸ್.ರಾಜೇಂದ್ರ, ಸಮುದಾಯದ ಮುಖಂಡ ಕೆ.ವೆಂಕಟೇಶ್, ಎನ್.ತಿಪ್ಪಣ್ಣ, ಎನ್.ಎಸ್.ಚಂದ್ರಪ್ಪ, ಎನ್.ಬಿ.ಲೋಕೇಶ್, ಈಶಪ್ಪ, ಪಿ.ಗಣೇಶ, ಹನುಮಂತಪ್ಪ, ಮಂಜುನಾಥ, ಶೇಖರಪ್ಪ ಟಿ.ತಿಮ್ಮಪ್ಪ, ಕೊಟ್ರೇಶ, ಸಮಾಜದ ಯುವಕರು, ವಿದ್ಯಾರ್ಥಿಗಳು, ಹಿರಿಯರು ಸೇರಿದಂತೆ ಉಪಸ್ಥಿತರಿದ್ದರು.

ಸುದ್ದಿ ಓದಿ