ಬಳ್ಳಾರಿ

ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಸಮುದಾಯ ಸಹಭಾಗಿದಾರರ ಅನುಸರಣಾ ಸಭೆ

ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಸಮುದಾಯ ಸಹಭಾಗಿದಾರರ ಅನುಸರಣಾ ಸಭೆ

ಲೋಕದರ್ಶನ ವರದಿ  

ಹಗರಿಬೊಮ್ಮನಹಳ್ಳಿ 23 :ತಾಲೂಕಿನ ಮೋರಗೇರೆಯಲ್ಲಿ  ರಾಜ್ಯ ಮಕ್ಕಳಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಪಂಚಾಯತ, ಜಿಲ್ಲಾಡಳಿತ ಬಳ್ಳಾರಿ, ತಾಲೂಕ ಪಂಚಾಯತ ಹೆಚ್ ಬಿ ಹಳ್ಳಿ, ಗ್ರಾಮ ಪಂಚಾಯತ ಮೋರಗೇರೆ, ಡಾನ್ ಬೋಸ್ಕೊ ಸಮಾಜ ಸೇವಾ ಸಂಸ್ಥೆ ಹೊಸಪೇಟೆ ಇವರ ಸಂಯುಕ್ತಾಶ್ರಯದಲ್ಲಿ ಮಕ್ಕಳ ಹಕ್ಕುಗಳು ಮತ್ತು ಕಾಯ್ದೆಗಳ ಕುರಿತು ಸಮುದಾಯ ಸಹಭಾಗಿದಾರರಿಗೆ ತರಬೇತಿ ಕಾರ್ಯಗಾರದ ಅನುಸರಣಾ ಸಭೆ ನಡೆಸಲಾಯಿತು. 

ಕಾರ್ಯಕ್ರಮದಲ್ಲಿ ಡಾನ್ ಬೋಸ್ಕೊ ಸಂಸ್ಥೆಯ ನಿರ್ದೇಶಕ ಫಾ.ಆನಂದ ಪ್ರಾಸ್ತಾವಿಕವಾಗಿ ಮಾತನಾಡಿ ಈ ಸಹಭಾಗಿದಾರರ ಸಭೆ ತುಂಭಾ ಪ್ರಮುಖವಾದ ಸಭೆಯಾಗಿದ ಹಿಂದೆ ಇದೆ ಗ್ರಾಮದಲ್ಲಿ ನಡೆದ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಸಮುದಾಯ ಸಹಭಾಗಿದಾರರ ಪಾತ್ರ ಕುರಿತು ನಡೆದ ತರಬೇತಿ ಕಾರ್ಯಗಾರದಲ್ಲಿ ಸಂಕಲ್ಪಮಾಡಿದ ಹಾಗೆ ನಾವೆಲ್ಲ ಮಕ್ಕಳ ಅಭಿವೃಧ್ಧಿಗಾಗಿ ಎನೆಲ್ಲಾ ಕಾರ್ಯವನ್ನು ಮಾಡಿದ್ದೇವೆ ಎನ್ನುವುದನ್ನು ವಿಶ್ಲೇಷಣೆ ಮಾಡುವಂತಹ ಸಭೆಯಾಗಿದೆ ಹಾಗೂ ನಮ್ಮ ಮೋರಗೇರೆ ಗ್ರಾಮ ಪಂಚಾಯಿತಿಯು ಮಕ್ಕಳ ಅಭಿವೃದ್ಧಿಯಲ್ಲಿ ಮಕ್ಕಳ ಸ್ನೇಹಿ ಪಂಚಾಯಿತಿಯಾಗಿ ಮಾದರಿಯಾಗಬೇಕೆನ್ನುವುದು ನಮ್ಮ ಆಶಯ ಎಂದು ಹೇಳಿದರು. 

ಪಂಚಾಯಿತಿ ಅಭಿವೃಧ್ಧಿ ಅಧಿಕಾರಿ  ನವಿನ್ ಕುಮಾರ್ ಮಕ್ಕಳ ರಕ್ಷಣೆಗಾಗಿ ಮಾಡಿರುವ  ಕಾರ್ಯಗಳ ಕುರಿತು ವರದಿ ಮಂಡಿಸಿದರು. ಕ್ರೀಮ್ ಯೋಜನೆಯ ಜಿಲ್ಲಾ ಸಂಯೋಜಕರಾದ ಶರಣಪ್ಪ ಜೆ ಮಾತನಾಡಿ ಮಕ್ಕಳ ಕಾವಲು ಸಮಿತಿಯ ರಚನೆ, ಕಾರ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. 

ಮೋರಗೇರೆ ಗ್ರಾಮ ಪಂಚಾಯಿತಿಯ ಸದಸ್ಯ ಕುಂಟೂರು ನಾಗರಾಜ ಮಾತನಾಡಿ ಬಾಲಕಾರ್ಮಿಕ ಮುಕ್ತ, ಬಾಲ್ಯವಿವಾಹ ಮುಕ್ತ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ಜಾಗೃತಿಯನ್ನು ಮೂಡಿಸುವುದು, ಶೇಕಡ ನೂರರಷ್ಟು ಮಕ್ಕಳು ಶಾಲೆಗೆ ಹಾಜರಾಗುವಂತೆ ಕ್ರಮಗಳನ್ನು ಕೈಗೊಳ್ಳುವುದು, ಅದೇರೀತಿ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸುವ ಗ್ರಂಥಾಲಯಗಳನ್ನಾಗಿ ರೂಪಿಸುವ ಕೆಲಸವನ್ನಾಗಿ ಮಾಡಬೇಕಾಗಿದೆ ಎಂದು ಹೇಳಿದರು. ಕ್ರೀಮ್ ಯೋಜನೆಯ ಜಿಲ್ಲಾ ಸಂಯೋಜಕರಾದ ಶರಣಪ್ಪ ಜೆ ನಿರೂಪಪಿಸಿದರು. ಗ್ರಾಮ ಪಂಚಾಯಿತಿ ಸಿಬ್ಬಂದಿ ಕೆ ಎನ್ ವೀಣಾ ಸ್ವಾಗತಿಸಿದರೆ, ಬಾಣದ ನಾಗರಾಜ ವಂದಿಸಿದರು. ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ದೇವರಮನಿ ನೀಲಮ್ಮ, ಸದಸ್ಯರಾದ ಉದಯ, ಅಂಜಿನಮ್ಮ, ನಿರ್ಮಲ, ಕವಿತ, ವೀಣಾ, ಗಿರಿಜಮ್ಮ, ಶೈಲಜಾ,ಪಿ ಅನುಮೇಶ, ಕೊಗಳಿ ಕರಿಬಸಪ್ಪ, ಶ್ರೀದರ್, ಪ್ರಾಥಮಿಕ ಮತ್ತು ಪ್ರೌಢಶಾಲೆ ಮುಖ್ಯೋಪಾಧ್ಯಾಯರು,ಸಹ ಶಿಕ್ಷಕರು, ಸ್ವ ಸಹಾಯ ಸಂಘದ ಮಹಿಳಾ ಪ್ರತಿನಿಧಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆಯವರು ಭಾಗವಹಿಸಿದ್ದರು. 


ಸುದ್ದಿ ಓದಿ