ಕ್ಷೇತ್ರದ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಬದ್ಧನಾಗಿರುವೆ: ಶಾಸಕ ಸೋಮನಗೌಡ
ತಾಳಿಕೋಟಿ: ದೇ. ಹಿಪ್ಪರಗಿ ಮತಕ್ಷೇತ್ರವನ್ನು ಒಂದು ಮಾದರಿ ಮತಕ್ಷೇತ್ರವನ್ನಾಗಿ ಮಾಡುವ ಗುರಿ ನನ್ನದಾಗಿದೆ. ಇದಕ್ಕಾಗಿ ಸರ್ಕಾರದಿಂದ ಸಾಕಷ್ಟು ಅನುದಾನವನ್ನು ತಂದು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಮತಕ್ಷೇತ್ರದ 124 ಗ್ರಾಮಗಳ ಅಭಿವೃದ್ಧಿಗೂ ನಾನು ಬದ್ಧನಾಗಿರುವೆ ಎಂದು ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ತಿಳಿಸಿದರು.
ಮತಕ್ಷೇತ್ರದ ಕುದರಿ ಸಾಲವಾಡಗಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತನ ಸನ್ 2019-20ನೇ ಸಾಲಿನ ಮಳೆ ಪರಿಹಾರ ಕಾರ್ಯಕ್ರಮದಡಿಯಲ್ಲಿ ಕುದರಿ ಸಾಲವಾಡಗಿ ಗ್ರಾಮದಿಂದ ಹುಲಬೆಂಚಿ ಗ್ರಾಮಕ್ಕೆ ರೂ.5ಕೋಟಿ ಮೊತ್ತದ ಕೂಡು ರಸ್ತೆ ಸುಧಾರಣೆ, 1ಕೋಟಿ ಮೊತ್ತದ ಸಿ.ಸಿ. ರಸ್ತೆ ಹಾಗೂ ರೂ.36ಲಕ್ಷ ಮೊತ್ತದ ವಿವಿಧ ಸಮಾಜಗಳ ಸಮುದಾಯ ಭವನಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಅಭಿವೃದ್ಧಿ ಕಾರ್ಯಗಳಲ್ಲಿ ನಾನೆಂದು ತಾರತಮ್ಯ ಮಾಡಿಲ್ಲ ಕ್ಷೇತ್ರದ ಎಲ್ಲ ಗ್ರಾಮಗಳ ಅಭಿವೃದ್ಧಿ ನನಗೆ ಮುಖ್ಯವಾಗಿದೆ. ಇದರಲ್ಲಿ ರಾಜಕೀಯ ಮಾಡುವ ಅಗತ್ಯ ಇಲ್ಲ ಈ ಗ್ರಾಮದೊಂದಿಗೆ ನನಗೆ ಅವಿನಾಭಾವ ಸಂಬಧ ಇದೆ. ನನ್ನ ತಂದೆಯವರಿಗೂ ತಾವು ರಾಜಕೀಯದಲ್ಲಿ ಸಾಕಷ್ಟು ಸಹಕಾರ ನಿಡಿದ್ದೀರಿ. ನಿಮ್ಮ ಈ ಋಣವನ್ನು ತಿರಿಸುವುದು ನನ್ನ ಕರ್ತವ್ಯವಾಗಿದೆ ನಿಮ್ಮ ಕೆಲಸಗಳು ಏನೇ ಇದ್ದರೂ ನಾನು ಮಾಡಿಕೊಡಲು ಜವಾಬ್ದಾರನಾಗಿದ್ದೇನೆ. ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಅಶೋಕಗೌಡ ಪಾಟೀಲ, ಸಂಗನಗೌಡ ಧನ್ನೂರ, ರಾಜೂಗೌಡ ನಾಡಗೌಡ(ಯಾಳವಾರ), ಮಂಜುಗೌಡ ವಡವಡಗಿ, ರಾಮನಗೌಡ ಬ್ಯಾಕೋಡ, ಭೀಮನಗೌಡ ಸಿದರಡ್ಡಿ, ಆದಮಸಾಬ ಡವಳಗಿ, ಬಾಬು ನದಾಫ, ಮಲ್ಲು ತಳವಾರ, ಹಸನಸಾಬ ಡವಳಗಿ, ಶರಣಗೌಡ ಹುಣಶ್ಯಾಳ, ಎಲ್ಲಪ್ಪ ಕೊಲಕಾರ, ಸಾಹೇಬಗೌಡ ಪಾಟೀಲ, ದಲಿತ ಮುಖಂಡ ಗುರುರಾಜ ಗುಡಿಮನಿ, ಮಹಾದೇವಪ್ಪ ಸಹುಕಾರ ಸಜ್ಜನ, ಎಇಇ ಆನಂದ ಮತ್ತಿತರರು ಉಪಸ್ಥಿರಿದ್ದರು.