ಕ್ರೀಡೆಗೆ ಸಿದ್ಧತೆ ಬದ್ಧತೆ ಮುಖ್ಯ: ಮುಸ್ತಫಾ ಎಸ್
ಹೂವಿನ ಹಡಗಲಿ 11: ಕ್ರೀಡೆಗೆ ಸಿದ್ಧತೆ ಬದ್ಧತೆ ಪರಿಶ್ರಮ ಮುಖ್ಯ ಎಂದು ತಾಲೂಕು ದೈಹಿಕ ಅಧೀಕ್ಷಕರಾದ ಮುಸ್ತಫಾ ಎಸ್ ಹೇಳಿದರು. ಪಟ್ಟಣದ ಜಿ ಪಿ ಜಿ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಪ್ರೌಢಶಾಲಾ ಖೋ ಖೋ ಆಟದಲ್ಲಿ ವಿಜೇತ ತಂಡಕ್ಕೆ ಟ್ರೋಫಿ ವಿತರಿಸಿ ಅವರು ಮಾತನಾಡಿದರು.
ತಾಲೂಕು ಮಟ್ಟದಲ್ಲಿ ವಿಜೇತ ತಂಡಗಳು ಜಿಲ್ಲಾ ವಿಭಾಗ ಮತ್ತು ರಾಜ್ಯ ಮಟ್ಟದಲ್ಲಿ ಯಶಸ್ಸು ಗಳಿಸಿರಿ ಎಂದರು.ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ ಹನುಮಂತಪ್ಪ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಓದಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು. ಕ್ರೀಡೆಗಳನ್ನು ಸಂಘಟಿಸುವಲ್ಲಿ ದೈಹಿಕ ಶಿಕ್ಷಕರ ಕೊಡುಗೆ ಗಮನಾರ್ಹವಾದುದು ಎಂದು ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಫಿ ಖವಾಸ್ ಹೇಳಿದರು. ಬಾಲಕರ ಖೊ ಖೊ ಪ್ರಥಮ ಸ್ಥಾನ ಪಡೆದ ಚಿಕ್ಕಿ ಚನ್ನಪ್ಪ ಅನುದಾನಿತ ಪ್ರೌಢಶಾಲೆ ಪ್ರೌಢಶಾಲೆ ಕುರುವತ್ತಿ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಸರ್ಕಾರಿ ಪ್ರೌಢಶಾಲೆ ಮಹಾಜನದಹಳ್ಳಿ ವಿದ್ಯಾರ್ಥಿಗಳಿಗೆ ಟ್ರೋಫಿ ವಿತರಿಸಿದರು.ಇದೇ ಸಂದರ್ಭದಲ್ಲಿ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸರ್ಕಾರಿ ಪ್ರೌಢಶಾಲೆ ಸೋಗಿ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಸರ್ಕಾರಿ ಪ್ರೌಢಶಾಲೆ ಹಿರೇಮಲ್ಲನಕೆರೆ ವಿದ್ಯಾರ್ಥಿನಿಯರಿಗೆ ಟ್ರೋಫಿ ವಿತರಿಸಲಾಯಿತು. ತಾಲೂಕು ದೈಹಿಕ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಶಿವಾನಂದಪ್ಪ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ ಶಿವಲಿಂಗಪ್ಪ, ಮುಖ್ಯ ಗುರುಗಳಾದ ಗುರು ಬಸವರಾಜ, ಸುರೇಶ ಅಂಗಡಿ, ಶೇಕ್ ಅಹ್ಮದ್, ದೈಹಿಕ ಶಿಕ್ಷಕರಾದಜೆ ಪ್ರಸನ್ನ ಕುಮಾರ್, ಸ್ವಾಮಿನಾಥ ರಾಮಸ್ವಾಮಿಬಾಷಾ ಕುರುವತ್ತಿ ಇತರರು ಉಪಸ್ಥಿತರಿದ್ದರು.