ಶಿಗ್ಗಾವ್

ಇರೋ ಕಿಡ್ಸ ಪ್ರೀ ಪ್ರೈಮರಿ ಶಾಲೆ ಪ್ರಾರಂಭ

ಇರೋ ಕಿಡ್ಸ ಪ್ರೀ ಪ್ರೈಮರಿ ಶಾಲೆ ಪ್ರಾರಂಭ

ಲೋಕದರ್ಶನ ವರದಿ

ಶಿಗ್ಗಾವಿ 12: ಇರೋ ಕಿಡ್ಸ ಸಂಸ್ಥೆ ಭಾರತದ ಉನ್ನತ ಶ್ರೇಣಿಯ ಶಿಕ್ಷಣ ನೀಡುವ ಸಂಸ್ಥೆಯಾಗಿದ್ದು ಅದರ ಸದುಪಯೋಗವನ್ನು ತಾಲೂಕಿನ ಜನತೆ ಪಡೆದುಕೊಳ್ಳಬೇಕು ಎಂದು ಸಂಸ್ಥೆ ಸಂಸ್ಥಾಪಕ ಹಾಗೂ ಮಕ್ಕಳ ತಜ್ಞ ವೈದ್ಯ ಡಾ. ಪ್ರಶಾಂತ ಹೇಳಿದರು.

ಪಟ್ಟಣದ ಹಳೇ ತಹಶೀಲ್ದಾರ ಕಚೇರಿಯ ಹತ್ತಿರ ಭಂಡಾರಿ ಮನೆಯಲ್ಲಿ ನೂತನ  ಇರೋ ಕಿಡ್ಸ ಪ್ರೀ ಪ್ರೈಮರಿ ಶಾಲೆ ಪ್ರಾರಂಭಿಸಿ ಮಾತನಾಡಿ ತಾಲೂಕಿನ ಮಕ್ಕಳು ಇರೋ ಕಿಡ್ಸ ಪ್ರೀ ಪ್ರೈಮರಿ ಶಾಲೆಯಲ್ಲಿ ವ್ಯಾಸಂಗ ಮಾಡಲು ಹಾವೇರಿ, ಹುಬ್ಬಳ್ಳಿಗೆ ಹೋಗಬೇಕಾಗಿತ್ತು ಅದನ್ನು ಮನಗಂಡು ತಾಲೂಕಿನ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಸ್ತಕ ಸಾಲಿನಲ್ಲಿ ಪ್ರಾರಂಭ ಮಾಡಲಾಗಿದೆ ಇದರ ವಿಶೇಷ ಏನೆಂದರೆ ಅಮೇರಿಕದಲ್ಲಿರುವ ಇರೋ ಕಿಡ್ಸ ವ್ಯವಸ್ಥೆಯನ್ನು ಶಿಗ್ಗಾವಿಯಲ್ಲಿಯೂ ಸಹಿತ ಕಾಣಬಹುದು ಹಾಗೂ ವಿಶ್ವದಾದ್ಯಂತ ಒಂದೇ ಶಿಕ್ಷಣ ವ್ಯವಸ್ಥೆ ಇರುತ್ತದೆ ಎಂದರು.

ಈ ಸಂದರ್ಭದಲ್ಲಿ ಬಬಿತಾ ಕೂಲೆ, ರಾಘವೇಂದ್ರ ದೇಶಪಾಂಡೆ, ರಾಯಚೂರ ಡಿವೈಎಸ್ಪಿ ಪ್ರಮಾನಂದ ಘೋರ್ಪಡೆ, ರಾಜೇಶ್ವರಿ, ಡಾ. ರಾಜಶೇಖರ ಕಂಬಾಳಿಮಠ, ಡಾ.ಜ್ಯೋತಿ, ಡಾ.ಬಿ.ವಿ.ಹನುಮೇಶ. ಆಡಳಿತಾಧಿಕಾರಿ ವಿಶ್ವನಾಥ, ಮೇಲ್ವಿಚಾರಕ ಶೇಖಪ್ಪ ಸೇರಿದಂತೆ ಪಾಲಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

ಭಾಕ್ಸ ಸುದ್ದಿ: ಇರೋ ಕಿಡ್ಸ ಪ್ರೀ ಪ್ರೈಮರಿ ಶಾಲೆಯ ಉದ್ಘಾಟನೆಯನ್ನು ಡಾ. ಪ್ರಶಾಂತ ಮಗ ಸಾಯಿ ಶ್ಲೋಕ ನೇತೃತ್ವದಲ್ಲಿ ವೃಷಾಂಕ, ತ್ರಿಷಾ, ಭೃಂದಾ, ಸಮರ್ಥ, ವಿರೇಶ, ಚಿನ್ಮಯಿ, ಖುಷಿ ನೇರವೇರಿಸಿದರು 

ಸುದ್ದಿ ಓದಿ