ಆದರ್ಶ ಹಿರಿಯರ ವೃದ್ಧಾಶ್ರಮದಲ್ಲಿ ಪುನೀತ್ ರಾಜಕುಮಾರ್ರವರ ಮೊದಲನೇ ವರ್ಷದ ಪುಣ್ಯಸ್ಮರಣೆ ಆಚರಣೆ
ಬಳ್ಳಾರಿ 31: ಜೈ ಹನುಮಾನ್ ಸರ್ಜಾ ಅಭಿಮಾನಿಗಳ ಸಂಘದ ವತಿಯಿಂದ ದಿ. 30ರಂದು ಜಿಲ್ಲಾಧ್ಯಕ್ಷ ಎಂಜಿ ಕನಕ ಅವರ ನೇತೃತ್ವದಲ್ಲಿ ಕನ್ನಡಿಗರ ಅಚ್ಚುಮೆಚ್ಚಿನ ನಟ, ರಾಷ್ಟ್ರಪ್ರಶಸ್ತಿ ಪುರಸ್ಕೃತ, ಕರ್ನಾಟಕ ರತ್ನ, ಕೋಟ್ಯಂತರ ಅಭಿಮಾನಿಗಳ ಆರಾಧ್ಯದೈವ ಡಾ. ಪುನೀತ್ ರಾಜಕುಮಾರ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆಯನ್ನು ಬಳ್ಳಾರಿ ತಾಲೂಕಿನ ಸಂಗನಕಲ್ ಗ್ರಾಮದ ಆದರ್ಶ ಹಿರಿಯರ ವೃದ್ರಾಶ್ರಮದಲ್ಲಿರುವ ಹಿರಿಯರಿಗೆ ಹಣ್ಣು ಹಂಪಲು ಹಾಗೂ ಬ್ರೆಡ್-ಬಿಸ್ಕೆಟ್ಗಳನ್ನು ವಿತರಣೆ ಮಾಡುವ ಮೂಲಕ ಹಿರಿಯರೊಂದಿಗೆ ನಮನ ಸಲ್ಲಿಸಿದರು.
ನಂತರ ಎಂ.ಜಿ.ಕನಕ ಮಾತನಾಡಿ ಎಲೆಮರೆ ಕಾಯಿಯಂತೆ ಸಮಾಜ ಸೇವೆಯಲ್ಲಿ ತೊಡಗಿಕೊಂಡು, ತೆರೆಯ ಮೇಲಷ್ಟೇ ಅಲ್ಲದೆ ನಿಜ ಜೀವನದಲ್ಲೂ ರಾಜಕುಮಾರನಂತೆ ಬಾಳಿ ಬದುಕಿದ ನಮ್ಮೆಲ್ಲರ ಪ್ರೀತಿಯ ಡಾ. ಪುನೀತ್ ರಾಜಕುಮಾರ್ ಅವರ ಮೊದಲನೇ ಪುಣ್ಯ ಸ್ಮರಣೆಯಂದು ಅವರಿಗೆ ನನ್ನ ಗೌರವ ಪೂರ್ವಕ ನಮನಗಳು. ಹಾಗೂ ಅವರು ನಡೆದು ಬಂದ ಹಾದಿಯಲ್ಲಿ ನಾವು ಸಹ ನಡೆಯಬೇಕು ಸಮಾಜ ಸೇವೆಯನ್ನು ಮಾಡಬೇಕು ಆಗ ನಮ್ಮ ಜನ್ಮ ಸಾರ್ಥಕವಾಗುತ್ತದೆ. ಹಾಗೂ ಕೋಟ್ಯಂತರ ಕನ್ನಡಿಗರ ಹೃದಯ ಗೆದ್ದ ಅಪ್ಪು ನೆನಪು ಚಿರಾಯು ಹಾಗೂ ಅಪ್ಪು ಇಂದಿನ ಯುವಕರಿಗೆ ಪ್ರೇರಣಾ ಶಕ್ತಿಯಾಗಿದ್ದಾರೆ ಎಂದರು.
ಅವರ ಕುಟುಂಬದವರಿಗೆ ಬಳ್ಳಾರಿಯ ಆದಿ ದೇವತೆ ಕನಕದುರ್ಗಮ್ಮ ದೇವಿ ಸುಖ, ಸಂತೋಷ, ಆಯಸ್ಸು, ಆರೋಗ್ಯ ಮತ್ತು ಯಶಸ್ಸು ಕೊಟ್ಟು ಕಾಪಾಡಲೆಂದು ಭಗವಂತನಲ್ಲಿ ಪ್ರಾರ್ಥಿ ಸುವಂತೆ ಹಿರಿಯರಲ್ಲಿ ಮನವಿ ಮಾಡಿಕೊಂಡರು.ಈ ಸಂದರ್ಭದಲ್ಲಿ ವಕೀಲರಾದ ಜೋಗಿನ್ ಚಂದ್ರಪ್ಪ, ಮುಖಂಡರಾದ ಶಿವಕುಮಾರ್, ಆಂಜನೇಯ, ಡಾ. ವಿಷ್ಣುವರ್ಧನ್ ಅವರ ಅಭಿಮಾನಿ ಆಪ್ತಮಿತ್ರ ಭಾಷಾ, ಉದಯ್, ನವೀನ್ ಶಂಕರ್, ನಗರಧ್ಯಕ್ಷರಾದ ಉಮಾರ್ ಫಾರೂಕ್, ಸಂಘಟನಾ ಕಾರ್ಯದರ್ಶಿ ಯಾದ ವೈ.ಅರುಣ್ ಕುಮಾರ್ ಪದಾಧಿಕಾರಿಗಳಾದ ಶ್ರೀರಾಮ್, ವಿಶ್ವಮಿತ್ರ, ಯೋಗೇಶ್, ಶೇಷು, ಪ್ರಣೇಶ್, ಸುರೇಶ್ ಉದಯ್ ಸೇರಿದಂತೆ ಇನ್ನೂ ಅನೇಕ ಧ್ರುವಸರ್ಜಾ ಅವರ ಅಭಿಮಾನಿಗಳು ಉಪಸ್ಥಿತರಿದ್ದರು