ಪಂಚಾಕ್ಷರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ: ಸಾಧಕರಿಗೆ ಪ್ರಶಸ್ತಿ ಪ್ರದಾನ
ಲೋಕದರ್ಶನ ವರದಿ
ವಿಜಯಪುರ 07 : ಗಾನಭವನ ಆಯೋಜಿಸಿದ್ದ ಪೂಜ್ಯ ಪಂಚಾಕ್ಷರ ಶಿವಯೋಗಿಗಳ 82ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವು ಜುಲೈ 2ರಂದು ಗಾನಭವನದಲ್ಲಿ ಭಕ್ತಿ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ನಡೆಯಿತು. ಕಾರ್ಯಕ್ರಮವನ್ನು ಮಣಿಪ್ರಭು ಸಿದ್ದರಾಮ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ಪಂಚಾಕ್ಷರ ಶಿವಯೋಗಿಗಳ ಸಂಗೀತ ಸೇವೆ ಹಾಗೂ ಸಾಂಸ್ಕೃತಿಕ ಕೊಡುಗೆಯನ್ನು ಸ್ಮರಿಸಿದರು. ಅವರ ಮಾರ್ಗದರ್ಶನದಲ್ಲಿ ಬೆಳೆದ ಶಿಷ್ಯರು ದೇಶ-ವಿದೇಶಗಳಲ್ಲಿ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು. ಇಂತಹ ಸ್ಮರಣೋತ್ಸವಗಳು ಅವರ ಆದರ್ಶ ಮತ್ತು ಸೇವೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವೈದ್ಯ ವಿಕ್ರಮ ಹಾಗೂ ಸ್ವರ ಸುಹಾಸಿನಿ ಪ್ರಶಸ್ತಿಗಳನ್ನು ಕ್ರಮವಾಗಿ ಡಾ. ಸಿದ್ದು ಸೋನ್ನದ ಮತ್ತು ಲತಾ ಜಹಾಗೀರದಾರ ಅವರಿಗೆ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಭಿಷೇಕ್ ಕನ್ನೂರ, ಅನಿಲ್ ಕನಮಡಿ ಹಾಗೂ ಸಿ.ಬಿ. ನಾಟಿಕಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕೊನೆಯಲ್ಲಿ ಗಾನಭವನದ ಸಂಸ್ಥಾಪಕರಾದ ಪಂಡಿತ ತೋಟದಾರ್ಯ ಕವಿಗವಾಯಿಗಳಿಗೆ ವಂದನಾರೆ್ಣ ಸಲ್ಲಿಸುವ ಮೂಲಕ ಕಾರ್ಯಕ್ರಮ ಸಮಾಪ್ತಿಯಾಯಿತು.