ಲಿಂ.ಗುರುಶಾಂತ ಸ್ವಾಮಿಜಿಯವರ ಸಂಸ್ಮರಣ ಮಹೋತ್ಸವ
ಶಿಗ್ಗಾವಿ 21: ಕಳೆದ 25 ವರ್ಷಗಳಿಂದ ಮಠದ ಪೀಠಾಧಿಪತಿಗಳಾದ ಮಹಾಂತ ಸ್ವಾಮಿಗಳು ಪ್ರತಿ ತಿಂಗಳು ಮಠದಲ್ಲಿ ಶಿವಾಭವ ಕಾರ್ಯಕ್ರಮ, ಅಲ್ಲದೆ ಕಲೆ, ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ರಂಗಕ್ಕೇ ತಮ್ಮದೇಯಾದ ಕೊಡುಗೆ ನೀಡುತ್ತಾ ಬಂದಿದ್ದಾರೆ ಎಂದು ಸವಣೂರ ವಿಧ್ಯಾಭಾರತಿ ಶಿಕ್ಷಣ ಸಮಿತಿ ಅಧ್ಯಕ್ಷ ಮೋಹನ ಮೆಣಸಿನಕಾಯಿ ಹೇಳಿದರು.
ತಾಲೂಕಿನ ಬಂಕಾಪುರ ಪಟ್ಟಣದ ದೇಸಾಯಿಮಠದ ಲಿಂ.ಗುರುಶಾಂತ ಸ್ವಾಮಿಜಿಯವರ ಸಂಸ್ಮರಣ ಮಹೋತ್ಸವ, ಗುರುಶಾಂತೇಶ್ವರ ಸಭಾಭವನ ಉದ್ಘಾಟನೆ, ಸತ್ಸಂಗ, ಉಚಿತ ವಿವಾಹ ಕಾರ್ಯಕ್ರಮವನ್ನುದ್ದೇಸಿಸಿ ಮಾತನಾಡಿದ ಅವರು, ತಂದೆ ಇಲ್ಲದ ಮಕ್ಕಳ ವಿವಾಹವನ್ನು ತಾವೇ ಸ್ವತ: ತಂದೆ, ತಾಯಿ ಸ್ಥಾನದಲ್ಲಿದ್ದುಕೊಂಡು ಸಂಪ್ರದಾಯದಂತೆ ಉಡುಗೆ, ತೊಡುಗೆ, ಪಾತ್ರೆ, ಪಗಡೆ, ಹಾಸಿಗೆ ಸೇರಿದಂತೆ ಇತರೆ ಅಗತ್ಯವಸ್ತುಗಳನ್ನು ನೀಡಿ ತಮ್ಮದೇ ಯಾದ ಕಲ್ಯಾಣ ಮಂಟಪದಲ್ಲಿ ಉಚಿತ ವಿವಾಹ ಮಹೋತ್ಸವವನ್ನು ಮಾಡಿಕೊಡುವ ಶ್ರೀಗಳವರ ಓದಾರ್ಯ ಗುಣ ಇತರ ಮಠಾಧೀಶರಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.
ಸಿ.ಬಿ.ಯಲಿಗಾರ ಸೇವಾಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಮಾತನಾಡಿ, ವಿಶ್ವವೇ ಸತ್ಸಂಗ್ದಿಂದ ದೂರವಾಗಿ ದೃಶ್ಯ ಮಾದ್ಯಮದ ಗುಲಾಮರಾಗುತ್ತಿರುವುದು ಖೇದಕರ ಸಂಗತಿಯಾಗಿದೆ. ಮಠ,ಮಾನ್ಯಗಳ ಮಠಾದೀಶರು ಸಮಾಜದಲ್ಲಿ ಸಂಸ್ಕೃತಿ ಸಂಸ್ಕಾರಗಳನ್ನು ಧಾರೆಎರೆಯದೇ ಇದ್ದರೆ ಮಾನವ ಸಂಕುಲನ ಅವನತಿಯತ್ತ ಸಾಗುತ್ತಲಿತ್ತು ಎಂದು ಹೇಳಿದರು.
ಧಾರವಾರ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಜಿ ಮಾತನಾಡಿ, ಮನುಷ್ಯನನ್ನು ಮಹದೇವನಾಗಿ ಮಾಡುವ ಶಕ್ತಿ ಸತ್ಸಂಗದಲ್ಲಿದ್ದರೆ, ದುತ್ಸಂಗ ಮನುಷ್ಯನನ್ನು ಅವನತಿಯತ್ತ ಕೋಂಡೋಯ್ಯಲಿದೆ ಎಂದು ಹೇಳಿದರು.
ಶಿಕ್ಷಕ ಸಿ.ಜಿ.ಹಿರೇಮಠ ಮಾತನಾಡಿದರು. ಕಾರ್ಯಕ್ರಮದಲ್ಲಿ ಚೆನೈ ಅಣ್ಣಾದೊರೈ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ ಪದವಿ ಪುರಸ್ಕೃತರಾದ ಹುಬ್ಬಳ್ಳಿ ಹೊಸಮಠದ ನಿರಂಜನ ಶಿವಯೋಗಿ ರಾಜೇಂದ್ರ ಸ್ವಾಮಿಜಿ ಹಾಗು ನೀಟ್ ಪರೀಕ್ಷೆಯಲ್ಲಿ ದೇಶಕ್ಕೆ 4 ನೇ ರಾ್ಯಂಕ್ ಪಡೆದ ವಿದ್ಯಾರ್ಥಿನಿ ಹರ್ಷಿತಾ ನೆಗಳೂರ ರವರನ್ನು ಶ್ರೀಮಠದಿಂದ ಸನ್ಮಾನಿಸಿ ಗೌರವಿಸಲಾಯಿತು.
ಮಠದ ಪೀಠಾಧಿಪತಿ ಮಹಾಂತ ಸ್ವಾಮಿಜಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸವಣೂರ ಅಡವಿಸ್ವಾಮಿ ಮಠದ ಕುಮಾರ ಸ್ವಾಮಿಜಿ, ಸದಾಶಿವಪೇಟೆ ವೀರಕ್ತಮಠದ ಗದಿಗೇಶ್ವರ ಸ್ವಾಮಿಜಿ, ಬಸವಂತರಾವ್ ಮಾಮ್ಲೇದೇಸಾಯಿ, ಎಸ್.ಎಂ.ಗಡೆಪ್ಪನವರ, ಸಿದ್ದಪ್ಪ ಹಾವಣಗಿ, ಲಲಾಟೆಪ್ಪ ದೇಸಾಯಿಮಠ, ಗಿರಿರಾಜ ದೇಸಾಯಿ, ಅನೀಲ್ ದೇಸಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಬಿ.ಎಸ್.ಗಿಡ್ಡಣ್ಣವರ ಸ್ವಾಗತಿಸಿದರು. ಜಿ.ಎಸ್.ದೇಸಾಯಿ ನಿರೂಪಿಸಿದರು.