ಶಿಗ್ಗಾವ್

ಬಯಲು ವಸ್ತು ಸಂಗ್ರಹಾಲಯದ ಪ್ರದರ್ಶನಕ್ಕೆ ಬೇಕಾದ ವಸ್ತುಗಳ ಸಂಗ್ರಹ

ಬಯಲು ವಸ್ತು ಸಂಗ್ರಹಾಲಯದ ಪ್ರದರ್ಶನಕ್ಕೆ ಬೇಕಾದ ವಸ್ತುಗಳ ಸಂಗ್ರಹ

ಶಿಗ್ಗಾವಿ 09:  ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಗ್ರಾಮ ಕರ್ನಾಟಕ ಬಯಲು ವಸ್ತು ಸಂಗ್ರಹಾಲಯದ ಪ್ರದರ್ಶನಕ್ಕೆ ಬೇಕಾದ ವಸ್ತುಗಳನ್ನು ಸಂಗ್ರಹಿಸಲಾಗುತ್ತಿದೆ. ಕರ್ನಾಟಕದ ಎಲ್ಲ ಪ್ರದೇಶದ, ಎಲ್ಲ ವರ್ಗಗಳ, ಎಲ್ಲಕಾಯಕ ಜೀವಿಗಳು ಬಳಸುತ್ತಿದ್ದ ವಸ್ತುಗಳನ್ನು ಸಂಗ್ರಹಿಸಬೇಕು. ಇದಕ್ಕಾಗಿ ರಜೆ ದಿನಗಳಲ್ಲಿ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಕ್ಷೇತ್ರಕಾರ್ಯ ಮಾಡುತ್ತಿದ್ದೇವೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ ಭಾಸ್ಕರ್ ಅವರು ಹೇಳಿದರು.  

ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಗ್ರಾಮ ಕರ್ನಾಟಕ ಬಯಲು ವಸ್ತು ಸಂಗ್ರಹಾಲಯದ ಪ್ರದರ್ಶನಕ್ಕಾಗಿ ರವಿವಾರ ಹಾವೇರಿ ಜಿಲ್ಲೆಯ ಕಾಲ್ವೆಕಲ್ಲಾಪುರ ಗ್ರಾಮದಲ್ಲಿ ಕ್ಷೇತ್ರಕಾರ್ಯ ಮಾಡಿ, ಪುರಾತನ ವಸ್ತುಗಳನ್ನು ಸಂಗ್ರಹಿಸಿ ಅವರು ಮಾತನಾಡಿದರು. 

ಗ್ರಾಮದಲ್ಲಿ ದುರುಗ ಮುರಗಿ ಸಮುದಾಯದವರು ತಮ್ಮ ಕಲೆ ಮತ್ತು ವೃತ್ತಿಗಾಗಿ ಬಳಸುತ್ತಿದ್ದ ಭೂತಪ್ಪನ ಮುಖವಾಡ ಹಾಗೂ ರುಮ್ಮಿಯನ್ಮು ಹನುಮಂತಪ್ಪ ಗಿಡ್ಡಪ್ಪ ದುರುಗಮುರಗಿ ಅವರು ದಾನವಾಗಿ ಕೊಟ್ಟರು. 

ಗ್ರಾಮದ ಹನುಮಂತಪ್ಪ ದುರಗ ಮುರಗಿ ಅವರು ಮಾತನಾಡಿ ಭೂತಪ್ಪನ ಮುಖಮೂರ್ತಿ ಸುಮಾರು 250 ವರ್ಷಗಳಿಂದ ನಮ್ಮ ಮನೆಯ ಕಾಯಕದಲ್ಲಿ ಬಳಸುತ್ತಿದ್ದೇವೆ. ನಮ್ಮ ಮುತ್ತಾತ, ತಾತ, ಅಪ್ಪ, ನಾವು ಧರಿಸಿಕೊಂಡು ಭಿಕ್ಷಾಕಾಯಕ ಮಾಡಿದ ದೈವವಿದು ಎಂದರು. 

ಯಲ್ಲಪ್ಪ ದುರಗಮುರಗಿ ಅವರು ಮಾತನಾಡಿ ರುಮ್ಮಿಯ ಪಡುಗವು ಸಹ ಇವರ ಕಾಯಕದ್ದೆ. ಇದು ಸುಮಾರು ನೂರೈವತ್ತು ವರ್ಷಗಳ ಹಿಂದಿನದು. ಇದನ್ನು ಕ್ಯಾದಿಗೆ ಮರದಿಂದ ಮಾಡಿದ್ದೇವೆ. ಇಂತಹ ಪಡುಗವನ್ನು ಮಾಡುವುದಕ್ಕೆ ಬೇಕಾದ ಕ್ಯಾದಿಗೆ ಮರ ಎಲ್ಲಿದೆ ಎಂದರು. 

ಇವುಗಳಲ್ಲದೆ ಗ್ರಾಮದವರಿಂದ ಜಯದಾರು ಹತ್ತಿ ಬಿತ್ತುವಕೂರಿಗೆ ಬಟ್ಟಲು, ವಡೆಕಲ್ಲು, ತೊಗರಿ ಬೀಸುವ ಕಲ್ಲು, ಒರಳಕಲ್ಲು ಮುಂತಾದ ಪ್ರಾಚೀನ ವಸ್ತುಗಳನ್ನು ವಸ್ತು ಸಂಗ್ರಹಾಲಯಕ್ಕೆ ದಾನವಾಗಿ ಕೊಟ್ಟರು. 

ಗ್ರಾಮದ ಕಲಾವಿದ ಮಧುಕುಮಾರ ಹರಿಜನ, ವೀರೇಶ ಮಹಾದೇವಪ್ಪ ಮರುಡಿ, ಗದ್ದಿಗಯ್ಯ ಶಿವಲಿಂಗಯ್ಯ ಹಿರೇಮಠ, ಜಯರೆಡ್ಡಿ ಸಣ್ಣಮ್ಮನ್ನವರ್ ಹಾಗೂ ವಿಶ್ವವಿದ್ಯಾಲಯದ ಜನಪದ ಕಲೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರ​‍್ಪ ಸೊಬಟಿ ಸೇರಿದಂತೆ ಗ್ರಾಮದ ಮುಖಂಡರು ಜೊತೆಗಿದ್ದರು. 


ಸುದ್ದಿ ಓದಿ