ಮುಂದಗೋಡ

ನಾಗರಹಾವು ಸುರಕ್ಷಿತವಾಗಿ ಕಾಡಿಗೆ

ನಾಗರಹಾವು ಸುರಕ್ಷಿತವಾಗಿ ಕಾಡಿಗೆ

ಮುಂಡಗೋಡ: ಪಟ್ಟಣದ ಬಂಕಾಪುರ ರಸ್ತೆಯ ಸಂಗಮೇಶ್ವರ ಪ್ರೊವಿಜನ್ ಸ್ಟೋರ​‍್ಸ‌ ಬಳಿ ಸೋಮವಾರ ಕಾಣಿಸಿಕೊಂಡ ನಾಗರಹಾವನ್ನು ಅರಣ್ಯ ರಕ್ಷಕ ಶ್ರೀಧರ ಭಜಂತ್ರಿ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟರು. 

ಪ್ರೊವಿಜನ್ ಸ್ಟೋರ​‍್ಸ‌ನ ಪಕ್ಕದಲ್ಲಿ ಇಟ್ಟಿದ್ದ ಇಟ್ಟಿಗೆಗಳಲ್ಲಿ ನುಸುಳಿಕೊಂಡಿದ್ದ ನಾಗರಹಾವನ್ನು ನೋಡಿದ ಸ್ಟೋರ​‍್ಸ‌ನ ಮಾಲೀಕ ಸಂಗನಗೌಡ ಪಾಟೀಲ ಅರಣ್ಯ ರಕ್ಷಕ ಶ್ರೀಧರ ಭಜಂತ್ರಿ ಅವರಿಗೆ ಮಾಹಿತಿ ನೀಡಿದ್ದಾರೆ. ಗಸ್ತು ಅರಣ್ಯ ಪಾಲಕರಾದ ಮುಸ್ತಾಕ್ ಒಂಟಿ, ಸಾಗರ ಕೊಣ್ಣೂರ ಮತ್ತು ಅಮಿತ ಸಣ್ಣಕ್ಕಿ ಹಾವು ಹಿಡಿಯಲು ಸಹಾಯ ಮಾಡಿದರು. 


ಸುದ್ದಿ ಓದಿ