ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ
Cluster level primary schools sports meet
ತಾಳಿಕೋಟಿ 14: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಪ್ರಾಥಮಿಕ ಶಾಲೆಯ 14 ವರ್ಷದ ಒಳಗಿನ ವಿದ್ಯಾರ್ಥಿಗಳು ತಾಳಿಕೋಟಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ 2025-26 ನೇ ಸಾಲಿನ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆದುಕೊಂಡು ಹೋಬಳಿ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವೈಯಕ್ತಿಕ ಸ್ಪರ್ಧೆಯಲ್ಲಿ 1) ವಿವೇಕ ಹೂಗಾರ 400 ಮೀಟರ ಮತ್ತು 600 ಮೀಟರ್ ಓಟ ಪ್ರಥಮ ಸ್ಥಾನ.2) ಮಹಮ್ಮದರಸೂಲ ಯಕ್ಕೆಲಿ, ಗುಂಡು ಎಸೆತ ಪ್ರಥಮ3) ಮಹಮ್ಮದರಸೂಲ ಯಕ್ಕೆಲಿ ಚಕ್ರ ಎಸೆತ ಪ್ರಥಮ 4) ಮೊಹಮ್ಮದ ಅಪಾನ ಮಕಾನದಾರ ಗುಂಡು ಎಸೆತ ದ್ವಿತೀಯ ಸ್ಥಾನ 5) ಅರ್ಜುನ ಮನಹಳ್ಳಿ ಚಕ್ರ ಎಸೆತ ತೃತೀಯ 6) ಅಮೃತಾ ಚಿನಗುಡಿ, 100 ಮೀಟರ ಓಟ ತೃತೀಯ7) ಅಭಿಲಾಶ ಕುಂಬಾರ, 400 ಮೀಟರ್ ಓಟ ತೃತೀಯ ಸ್ಥಾನ ಗುಂಪು ಸ್ಪರ್ಧೆಯಲ್ಲಿ 1) ಬಾಲಕರ ವಾಲಿಬಾಲ -ತಂಡ ಪ್ರಥಮ ಸ್ಥಾನ 2) ಬಾಲಕಿಯರ ವಾಲಿಬಾಲ-ತಂಡ ಪ್ರಥಮ ಸ್ಥಾನ 3) ಬಾಲಕರ ತ್ರೋಬಾಲ್ -ತಂಡ ಪ್ರಥಮ ಸ್ಥಾನ 4) ಬಾಲಕರ ವಾಲಿಬಾಲ- ತಂಡ ದ್ವಿತೀಯ ಸ್ಥಾನ5) ಬಾಲಕರ ರಿಲೇ, ತಂಡ ತೃತೀಯ ಸ್ಥಾನ. 6) ಬಾಲಕಿಯರ ರಿಲೇ ತಂಡ ತೃತೀಯ ಸ್ಥಾನ. ಇವರೆಲ್ಲರೂ ಕ್ಲಸ್ಟರ್ ಮಟ್ಟದಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ, ಸ್ಥಾನವನ ಪಡೆದು ಹೋಬಳಿ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರ, ಮುಖ್ಯಗುರುಗಳಾದ ಸಂತೋಷ ಪವಾರ, ರಾಜು ಜವಳಗೇರಿ, ದೈಹಿಕ ಶಿಕ್ಷಕರಾದ ಬಸವರಾಜ ಚಳ್ಳಗಿ,ಶಾಂತಗೌಡ ಬಿರಾದಾರ, ಮತ್ತು ಸರ್ವ ಸಿಬ್ಬಂದಿ ಗುರುಬಳಗದವರು ವಿದ್ಯಾರ್ಥಿಗಳಿಗೆ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ 