ಬೆಟಗೇರಿ ಕಿತ್ತೂರ ಚನ್ನಮ್ಮ ಉದ್ಯಾನವನ ಸ್ವಚ್ಚತಾ ಕಾರ್ಯ ಪ್ರಾರಂಭ ಗಣೇಶಸಿಂಗ್ ಬ್ಯಾಳಿ ಸ್ವಾಗತ
ಲೋಕದರ್ಶನ ವರದಿ
ಬೆಟಗೇರಿ 1 : ಬಹು ವರ್ಷಗಳ ಇತಿಹಾಸ ಹೊಂದಿರುವ ಬೆಟಗೇರಿಯ ಪಿ.ಬಿ. ರಸ್ತೆಯಲ್ಲಿರುವ ಕಿತ್ತೂರು ಚೆನ್ನಮ್ಮ ಉದ್ಯಾನವನ ಗಬ್ಬು ನಾರುತ್ತಿದ್ದು ಅದರಿಂದ ಸಾರ್ವಜನಿಕರ ಆರೋಗ್ಯಕ್ಕೆ ತೀವ್ರವಾದ ತೊಂದರೆಯಾಗುತ್ತಿದೆ ಎಂದು ಗದಗ ಬೆಟಗೇರಿ ನಗರಸಭೆ ಗಮನಕ್ಕೆ ಬೆಟಗೇರಿ ರೇಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಆಗ್ರಹಿಸಲಾಗಿತ್ತು.
ಅದಕ್ಕೆ ಸ್ಪಂದಿಸಿ ಉದ್ಯಾನವನದಲ್ಲಿರುವ ಗ್ರಂಥಾಲಯ ಎಡಭಾಗದಲ್ಲಿ (ಜಿಮ್) ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದು ಅದರಿಂದ ಗಬ್ಬುವಾಸನೆ ಕಡಿಮೆಯಾಗಿದೆ. ಅದಕ್ಕಾಗಿ ನಗರಸಭೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಅದರಂತೆ ಉದ್ಯಾನವನದ ಒಳಗಡೆಯೂ ಸ್ವಚ್ಛಗೊಳಿಸಬೇಕೆಂದು ಬೆಟಗೇರಿ ರೇಲ್ವೆ ಹೋರಾಟ ಸಮಿತಿ ಪರವಾಗಿ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಮನವಿ ಮಾಡಿದ್ದಾರೆ.