ನೆಹರು ಯುವ ಕೇಂದ್ರದಿಂದ ಸ್ವಚ್ಛಾತಾ ಅರಿವು ಮತ್ತು ಶ್ರಮದಾನ ಕಾರ್ಯಕ್ರಮ
ಬಳ್ಳಾರಿ 27: ನೆಹರು ಯುವ ಕೇಂದ್ರ, ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಅಂಕಿ ಅಂಶ ಕಚೇರಿ, ಲಿಯೋ ಸೊಸೈಟಿ, ಗೃಹರಕ್ಷಕ ದಳ, ಕೌಲ್ ಬಜಾರ ಪೋಲೀಸ್ ಠಾಣೆ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರದಂದು ಕ್ಲಿನ್ ಇಂಡಿಯಾ 2.0 (ಸ್ವಚ್ಛಾತಾ ಅರಿವು ಮತ್ತು ಶ್ರಮದಾನ) ಕಾರ್ಯಕ್ರಮವನ್ನು ಕೌಲ್ಬಜಾರ್ನಿಂದ ಬೆಳಗಲ್ ಕ್ರಾಸ್ನವರೆಗೆ ಹಮ್ಮಿಕೊಳ್ಳಲಾಗಿತ್ತು.
ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮೊಂಟು ಪಾತರ್ ಅವರು ಮಾತನಾಡಿ, ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವಾಗಬೇಕು. ಬದಲಾಗಿ ಬಟ್ಟೆ ಚೀಲಗಳನ್ನು ಬಳಸಬೇಕು, ಇದರಿಂದ ಪರಿಸರವನ್ನು ಸ್ವಚ್ಛವಾಗಿಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಜಾಥಾದಲ್ಲಿ ರಸ್ತೆಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ನ್ನು ಸಂಗ್ರಹಿಸಿ ವಿಲೇವಾರಿ ಮಾಡುವಂತೆ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಹನುಮಂತಪ್ಪ, ಎನ್.ಎಸ್.ಒ ಎನ್.ಎಸ್.ಪಟೇಲ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಹರಿಸಿಂಗ್ ರಾಥೋಡ್, ಸಂಸ್ಕಾರ ಆಶ್ರಮದ ಸಂಸ್ಥಾಪಕರಾದ ಡಾ.ವಿರುಪಾಕ್ಷಯ್ಯ, ಕಲ್ಯಾಣ ಕರ್ನಾಟಕ ಜಿಲ್ಲಾಧ್ಯಕ್ಷ ಈಶ್ವರ ರೆಡ್ಡಿ, ಕಲಾವಿದ ಹುಲುಗಪ್ಪ ಸೇರಿದಂತೆ ಮತ್ತಿತರರು ಇದ್ದರು.