ಪೌರಕಾರ್ಮಿಕರಿಂದ ಕೆರೆಯ ಸ್ವಚ್ಛತಾ ಕಾರ್ಯ
ಶಿಗ್ಗಾವಿ 27: ಪಟ್ಟಣದ ನಾಗನೂರ ಕೆರೆಗೆ ಬೆಳಗಿನ ಸಮಯದಲ್ಲಿ ಪುರಸಭೆ ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಸದಸ್ಯ ಜಾಫರಖಾನ ಪಠಾಣ, ಸುಧೀರ ಮಾಳವಾದೆ ಪೌರ ಕಾರ್ಮಿಕರು ಸೇರಿ ಕೆರೆಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ಕೆರೆಯ ಆವರಣದ ಸುತ್ತಲೂ ಬೆಳೆದ ಸಸಿಗಳನ್ನು ಕತ್ತರಿಸಿ ತೆಗೆದು ಸಾಗಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ಆರೋಗ್ಯಾಧಿಕಾರಿ ಶಿವಕುಮಾರ ಕಮದೋಡ, ವಿ.ಎಸ್. ಪಾಟೀಲ, ಶೈಲಜಾ ಪಾಟೀಲ, ಪೌರ ಕಾರ್ಮಿಕರು ಉಸಪಸ್ಥಿತರಿದ್ದರು.