ಬಳ್ಳಾರಿ ಸ್ವಚ್ಛ ಸುಂದರ ಮಾಡವಲ್ಲಿ ನಾಗರಿಕರ ಸಹಕಾರ ಮುಖ್ಯ: ಗೆಹ್ಲೋಟ್
ಬಳ್ಳಾರಿ 02: ಬಳ್ಳಾರಿ ಒಂದು ಸ್ವಚ್ಛ ಮತ್ತು ಸುಂದರ ನಗರವನ್ನು ಮಾಡಿಸುವ ಕನಸಲ್ಲಿ ಬಳ್ಳಾರಿ ನಗರದ ನಿವಾಸಿಗಳಾದ ನಿಮ್ಮೆಲ್ಲರ ಸಹಕಾರ ಮುಖ್ಯವಾದುದು ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತೆ ಪ್ರೀತಿ ಗೆಹ್ಲೋಟ್ ಹೇಳಿದರು.
ಮಹಾನಗರ ಪಾಲಿಕೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಬಳ್ಳಾರಿ, ಮತ್ತು ನೋಪಾಸನ ಸಂಸ್ಥೆ ಹಾಗೂ ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್ ಫೆಲೋಷಿಪ್ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ದಿ.01ರಂದು ಸಂಜೆ 5 ಗಂಟೆಗೆ ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ ಅಭಿಯಾನ ನಿಮಿತ್ಯ ಸ್ವಚ್ಛ ಬಳ್ಳಾರಿ ಕಾರ್ಯಕ್ರಮದಲ್ಲಿ ಹಸಿ ಕಸ ಮತ್ತು ವಣ ಕಸ ಕಾಂಪೋಸ್ಟಿಂಗ್ ಬಗ್ಗೆ ಬಳ್ಳಾರಿಯ ರೈಲ್ವೆ ಸ್ಟೆಷನ್ ಹಿಂಭಾಗದಲ್ಲಿ ಇರುವ ರೈಲ್ವೆ ಕಾಲೋನಿಯ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ರೈಲ್ವೆ ಕಾಲೋನಿಯ ನಿವಾಸಿಗಳಿಗೆ ಮತ್ತು ಅಧಿಕಾರಿ ವಗರ್Àದವರಿಗೆ ಹಸಿ ಕಸ ಮತ್ತು ಒಣ ಕಸವನ್ನು ಹೇಗೆ ನಾವು ನಮ್ಮ ಕಾಲೋನಿಗಳಲ್ಲಿ ಅದನ್ನು ಕಾಂಪೋಸ್ಟ್ ಗೊಬ್ಬರನ್ನು ಮಾಡಿಕೊಳ್ಳುವ ವಿಧಾನದ ಬಗ್ಗೆ ವಿವರಿಸಿದರು, ಮತ್ತು ಕಾಂಪೋಸ್ಟಿಂಗ್ ಪಿಟ್ಗೆ ಚಾಲನೆ ನೀಡಿದರು, ತಯಾರಾದ ಗೊಬ್ಬರವನ್ನು ಮನೆಗಳಲ್ಲಿನ ಗಿಡಗಳಿಗೆ ಮತ್ತು ನಿಮ್ಮ ಕಾಲೋನಿಯ ಪಾರ್ಕ್ಗಳಿಗೆ ಉಪಯೋಗಿಸಲು ತಿಳಿಸಿದರು. ಮತ್ತು ಸುತ್ತ ಮುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿ ಮತ್ತು ಸುಂದರವಗಿ ಇಟ್ಟುಕೊಂಡು ಆರೋಗ್ಯವಾಗಿರಲು ಹೇಳಿದರು.
ಪ್ರೀತಿ ಗೆಹ್ಲೋಟ್, ಎಂ.ಎ. ಷಕೀಬ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು, ಡಾ. ಹನುಮಂತಪ್ಪ , ಆರೋಗ್ಯ ಅಧಿಕಾರಿಗಳು, ಮಹಾನಗರ ಪಾಲಿಕೆ ಬಳ್ಳಾರಿ, ಡಾ. ವಿಶ್ವನಾಥ್ ಆರೋಗ್ಯಾಧಿಕಾರಿಗಳು ರೈಲ್ವೆ ಕಾಲೋನಿ ಬಳ್ಳಾರಿ, ಶೇಷಾದ್ರಿ ಸ್ಟೇಶನ್ ಮ್ಯನೇಜರ್ ಬಳ್ಳಾರಿ, ಹಾಗೂ ಸಿಬ್ಬಂದಿ ವರ್ಗದವರು ಮತ್ತು ಮಹಾನಗರ ಪಾಲಿಕೆಯ ಸಿಬ್ಬಂದ್ದಿ ವರ್ಗದವರು ಹಾಗೂ ಪೋಲಾ ವಿಕ್ರಮ್ ಅಧ್ಯಕ್ಷರು ಸ್ಕೌಟ್ಸ್ ಮತ್ತು ಗೈಡ್ಸ್ ಫೆಲೋಷಿಪ್ನ ಸದಸ್ಯರುಗಳಾದ ಸುಮ ಹಾಗೂ ವಿರುಪಾಕ್ಷಯ್ಯ ಮತ್ತು ಮೆಹಬೂಬ್ ಭಾಷ ಮತ್ತು ಶಮೀಮ್ ಜಕಾಲಿ, ಫರೀಧಾ, ಹಾಗೂ ಖಾಜಾ ಮೈನೂದ್ದೀನ್ ಇನ್ನೂ ಇತರರು ಭಾಗವಹಿಸಿದ್ದರು.