ತುಂಗಭದ್ರಾ ಪ್ರೌಢಶಾಲೆಯಲ್ಲಿ ತರಗತಿ ಪ್ರಾರಂಭೋತ್ಸವ
ಲೋಕದರ್ಶನ ವರದಿ
ಹೂವಿನ ಹಡಗಲಿ 25: ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಗೆ ವಿಶಿಷ್ಟ ಚಟುವಟಿಕೆ ಬೋಧನೆ ಮೂಲಕ ಸ್ಪಂದಿಸಿರಿ ಎಂದು ವಿದ್ಯೆ ಸಂಸ್ಥೆಯ ಕಾರ‌್ಯದರ್ಶಿ ಡಾ.ಮಂಜುನಾಥ ಹೇಳಿದರು.
ಇಲ್ಲಿನ ತುಂಗಭದ್ರಾ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ‌್ಯಕ್ರಮದಡಿಯಲ್ಲಿ ಮಾತನಾಡಿದರು.ಕೋವಿಡ್ ನಿಂದ ಮಕ್ಕಳ ಕಲಿಕಾ ಮಟ್ಟ ಕುಂಠಿತವಾಗಿದೆ. ನಿರಂತರವಾಗಿ ಓದು ಬರಹ ಬೋಧನೆಯಲ್ಲಿ ತೊಡಗಿಸಿಕೊಳ್ಳಿರಿ ಎಂದರು.ಮುಖ್ಯ ಗುರು ಸುರೇಶ ಅಂಗಡಿ, ಕಲಾ ಶಿಕ್ಷಕ ದ್ವಾರಕೇಶ್ ರೆಡ್ಡಿ ವಿದ್ಯಾರ್ಥಿಗಳಿಗೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು.ದೈಹಿಕ ಶಿಕ್ಷಕ ಸ್ವಾಮಿನಾಥ ರಾಮಸ್ವಾಮಿ ಧರ್ಮಲ್ ಸ್ಕ್ಯಾನಿಂಗ್ ಮೂಲಕ ತಪಾಸಣೆ ನಡೆಸಿದರು. ಶಿಕ್ಷಕರಾದ ಕೆ.ಬಸವರಾಜ, ಜಿ.ಆನಂದ, ಲಂಬಾಣಿ ಗಿಡ್ಡಾನಾಯ್ಕ, ಕುಮಾರ ಸೊಪ್ಪಿನಮ ಆಕ್ಷರ ದಾಸೋಹ ಸಹಾಯಕ ಗಂಗಮ್ಮ ಹಮ್ಮಿಗಿ, ಪಿಂಜಾರ ಮಹಾಬುನ್ನಿ, ಕೆ.ಲಲಿತಮ್ಮ, ಎಂ.ಪಿ.ಎಂ.ವೀರಭದ್ರಯ್ಯ ಇದ್ದರು.