ಬಳ್ಳಾರಿ

ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಚೌಧರಿ ಆಯ್ಕೆ

ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಚೌಧರಿ ಆಯ್ಕೆ

ಬಳ್ಳಾರಿ. 25: ಬಳ್ಳಾರಿ ನಗರದ ಕೌಲ್‍ಬಜಾರ್ ಕೇಬಲ್ ಆಪರೇಟರ್ ಮತ್ತು ಜಿಲ್ಲಾ ಕೇಬಲ್ ಆಪರೇಟರ್ ಅಸೋಷಿಯೇಶನ್ ಅಧ್ಯಕ್ಷ ರುದ್ರಯ್ಯ ಚೌಧರಿ ರಾಜ್ಯ ಕೇಬಲ್ ಆಪರೇಟರ್ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಕೋರಮಂಗಲದಲ್ಲಿ ರಾಜ್ಯ ಕೇಬಲ್ ಆಪರೇಟರ್ಸ್ ಸಂಘದ ಕಛೇರಿಯನ್ನು ಗುರುವಾಗ ಮಾಜಿ ಮಂತ್ರಿ ರಾಮಲಿಂಗಾರೆಡ್ಡಿಯವರು ಉದ್ಘಾಟನೆ ಮಾಡಿದರು. 

ಕೇಬಲ್ ಆಪರೇಟರ್‍ಗಳು ಡಿಜಿಟಲ್ ಸೇವೆಗಳು ಅತ್ಯಂತ ಉತ್ತಮವಾಗಿ ಸಾರ್ವಜನಿಕರ ಸೇವೆಯನ್ನು ಮಾಡುತ್ತಿದ್ದಾರೆ ಎಂದು ಅಭಿನಂದನೆಗಳನ್ನು ತಿಳಿಸಿದರು. ಪ್ರತಿಯೊಬ್ಬ ಕೇಬಲ್ ಆಪರೇಟರ್‍ಗೆ ಒಂದು ಲಕ್ಷ ರೂಪಾಯಿ ವಿಮಾ ಸೌಲಭ್ಯವನ್ನು ಕಲ್ಪಿಸಿಕೊಡುವುದಾಗಿ ಹೇಳಿದರು. 

ನಂತರ ಬಳ್ಳಾರಿ ಜಿಲ್ಲಾ ಅಧ್ಯಕ್ಷ ರುದ್ರ ಚೌಧರಿ ಕೇಬಲ್ ಸೇವೆಗಳನ್ನು ಪರಿಗಣಿಸಿ ಸನ್ಮಾನಿಸಿದರು. 

ಕರ್ನಾಟಕ ರಾಜ್ಯ ಕೇಬಲ್ ಆಪರೇಟರ್ ಸಂಘದ ರಾಜ್ಯಾಧ್ಯಕ್ಷ ಹ್ಯಾಟ್ರಿಕ್ ರಾಜು ಮತ್ತು ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿ ಓದಿ