ಚೋಟುಮಹಾರಾಜ್ ಸಿನೇಮಾಸ್ ಚಲನಚಿತ್ರ ಮಂದಿರ ಪ್ರಾರಂಭ
ಮುಂಡರಗಿ,14: ಆ.16 ರಂದು ಮುಂಡರಗಿ ಪಟ್ಟಣದಲ್ಲಿ ಚೋಟುಮಹಾರಾಜ್ ಶ್ರೀ ಸಿನೇಮಾಸ್ ಚಲನಚಿತ್ರ ಮಂದಿರದ ಉದ್ಘಾಟನಾ ಸಮಾರಂಭ ಜರುಗುವುದು ಎಂದು ಚಲನಚಿತ್ರ ಮಂದಿರದ ಮಾಲಿಕರಾದ ರವೀಂದ್ರ ಹಾಗೂ ಶ್ರೀನಿವಾಸ ಉಪ್ಪಿನಬೆಟಗೇರಿ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗಸ್ಟ್.16 ರಂದು ಮುಂಜಾನೆ 11:30 ಗಂಟೆಗೆ ಪಟ್ಟಣದ ಬ್ಯಾಲವಾಡಗಿ ಕ್ರಾಸ್ನಲ್ಲಿರುವ ಚೋಟುಮಹಾರಾಜ್ ಶ್ರೀ ಸಿನೇಮಾಸ್ ಚಲನಚಿತ್ರ ಮಂದಿರವನ್ನು ಪ್ರಾರಂಭಿಸಲಾಗುವುದು. ಅಂದಿನ ಕಾರ್ಯಕ್ರಮದಲ್ಲಿ ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ. ಚಿತ್ರ ಮಂದಿರದ ಉದ್ಘಾಟನೆಯನ್ನು ಕಾನೂನು, ನ್ಯಾಯ ಮಾನವ ಹಕ್ಕುಗಳು, ಸಂಸದಿಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್ ಮಾಡಲಿದ್ದಾರೆ.
ಹಾಗೂ ಉದ್ಘಾಟನೆಯ ದಿನದಂದು ಮೊದಲನೆಯದಾಗಿ ಕನ್ನಡ ಚಲನಚಿತ್ರ ಖ್ಯಾತ ನಟರಾದ ದುನಿಯಾ ವಿಜಯ ಅಭಿನಯದ ಭೀಮ್ ಚಿತ್ರವನ್ನು ಪ್ರದರ್ಶಿಸುವ ಮೂಲಕ ಚಲನ ಚಿತ್ರ ಪ್ರಾರಂಭೊತ್ಸವವನ್ನು ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದ ಬಸವರಾಜ ಬೊಮ್ಮಾಯಿಯವರು ಮಾಡಲಿದ್ದಾರೆ. ಈ ವೇಳೆ ಮಾಜಿ ಸಚಿವರಾದ ಬಿ.ಶ್ರೀರಾಮುಲು, ಸಿ.ಸಿ.ಪಾಟೀಲ ಜ್ಯೋತಿ ಬೆಳಗುವ ಕಾರ್ಯಕ್ರಮ ನಡೆಸುವರು. ಅಧ್ಯಕ್ಷತೆಯನ್ನು ಮಾಜಿ ಸಚಿವರಾದ ಕಳಕಪ್ಪ ಬಂಡಿಯವರು ವಹಿಸಲಿದ್ದಾರೆ. ಹಾಗೂ ಮುಖ್ಯ ಅತಿಥಿ ರೋಣ ಶಾಸಕ ಜಿ.ಎಸ್.ಪಾಟೀಲ, ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಶಾಸಕ ಎಸ್.ವಿ.ಸಂಕನೂರ. ಶಿರಹಟ್ಟಿ ಮಾಜಿ ಶಾಸಕರಾದ ರಾಮಣ್ಣ ಲಮಾಣಿ ಮತ್ತು ರಾಮಕೃಷ್ಣ ದೊಡ್ಡಮನಿ, ಧಾರವಾಡ ಕೆಸಿಸಿ ಬ್ಯಾಂಕ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಹಾಗೂ ಉಪ್ಪಿನಬೆಟಗೇರಿ ಸಹೋದರರು ಹಾಗೂ ಸ್ನೇಹ ಬಳಗದವರು ಭಾಗವಹಿಸುವರು.