ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್ (ರೈಫಲ್) ಪಂದ್ಯಾವಳಿಗೆ ಚಿನ್ನರಾಜ ಆಯ್ಕೆ
ಬಳ್ಳಾರಿ 13: ಇತ್ತೀಚಿಗೆ ಅಂದರೆ ಸೆ. 19ರಿಂದ 24ರವರೆಗೆ ತಮಿಳುನಾಡಿನ ತಿರುಚಿನಾಪಲ್ಲಿಯಲ್ಲಿ ನಡೆದ ದಕ್ಷಿಣ ವಲಯ ಶೂಟಿಂಗ್ (ರೈಫಲ್) ಚಾಂಪಿಯನ್‌ಷಿಪ್ 10ಟ ಚಿಡಿ ಡಿಜಿಟಜ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್ (ರೈಫಲ್) ಪಂದ್ಯಾವಳಿಗೆ ಚಿನ್ನರಾಜ ಸಿಡಿ ಆಯ್ಕೆಯಾಗಿದ್ದಾರೆ.
ಇವರು ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಮೆಟಿ ಗ್ರಾಮ ನಿವಾಸಿಯಾಗಿದ್ದು ಸಧ್ಯ ಬೆಂಗಳೂರಿನಲ್ಲಿ ಇಂಧನ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.