ಚಿಕ್ಕೋಡಿ

ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ ಕಾರ್ಯ ಮಾದರಿ: ಹುಕ್ಕೇರಿ

ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ ಕಾರ್ಯ ಮಾದರಿ: ಹುಕ್ಕೇರಿ
ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ ಷಷ್ಠಿಪೂರ್ತಿ ಹಾಗೂ ಪಟ್ಟಾಧಿಕಾರ ರಜತ ಮಹೋತ್ಸವ ಮತ್ತು ಕನ್ನಡಪ್ರಭು ಗ್ರಂಥವನ್ನು ಮಾಜಿ

ಚಿಕ್ಕೋಡಿ 16: ಗಡಿ ಭಾಗದಲ್ಲಿ ಧಾರ್ಮಿಕ, ಸಾಮಾಜಿಕ ಕಾರ್ಯದ ಜೊತೆಗೆ ಕನ್ನಡ ಬೆಳೆಸುವ ಕೈಂಕರ್ಯಕ್ಕೆ ಕೈಜೋಡಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ ಕಾರ್ಯ ಮಾದರಿಯಾಗಿದೆ ಎಂದು ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಹೇಳಿದರು.

ತಾಲೂಕಿನ ಚಿಂಚಣಿ ಗ್ರಾಮದ ಅಲ್ಲಮಪ್ರಭು ಸಿದ್ಧಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ ಷಷ್ಠಿಪೂರ್ತಿ ಹಾಗೂ ಪಟ್ಟಾಧಿಕಾರ ರಜತ ಮಹೋತ್ಸವ ಮತ್ತು ಕನ್ನಡಪ್ರಭು ಗ್ರಂಥ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. 

ಚಿಂಚಣಿ ಗ್ರಾಮದ ಅಲ್ಲಮಪ್ರಭು ಸಿದ್ಧಸಂಸ್ಥಾನ ಪ್ರಗತಿಗೆ ಸ್ವಾಮೀಜಿ ಕೊಡುಗೆ ಅಪಾರವಾಗಿದೆ. ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕುಗಳ ಗಡಿ ಭಾಗದ ಅಭಿವೃದ್ಧಿ ಮಾಡಬೇಕೆಂದು ಸೂಚನೆ ಕೊಟ್ಟಾಗ ಸ್ವಾಮೀಜಿ ಮಾರ್ಗದರ್ಶನದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಒಳ್ಳೆಯ ಕೆಲಸ ಮಾಡಿದಾಗ ಬೆನ್ನು ತಟ್ಟಿ ಮತ್ತು ತಪ್ಪಿದ್ದಲ್ಲಿ ತಿದ್ದಿ ಹೇಳು ಸ್ವಾಮೀಜಿ ಗಡಿ ಭಾಗದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದರು.

ಕೊರೊನಾ ಎರಡನೆ ಅಲೆ ಹವ್ಯಾಹತವಾಗಿ ಹಬುತ್ತಿದೆ. ಹೀಗಾಗಿ ಜನರು ಆರೋಗ್ಯವಾಗಿ ಇರುವುದು ಸೂಕ್ತವಾಗಿದೆ. ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಪಾಡಿಕೊಂಡು ಮೊಕಕ್ಕೆ ಮಾಸ್ಕ ಬಳಕೆ ಮಾಡಬೇಕು. ಅವಶ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರಗೆ ಹೋಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿ ಅನುಸರಿಸಬೇಕು ಎಂದು ಸಲಹೆ ನೀಡಿದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ನಾಗೇಶ ಕಿವಡ ಮಾತನಾಡಿ, ಚಿಂಚಣಿ ಅಲ್ಲಮಪ್ರಭು ಸಿದ್ಧಸಂಸ್ಥಾನ ಮಠವು ಇಡೀ ರಾಜ್ಯಕ್ಕೆ ಪರಿಚಯ ಮಾಡಿಕೊಟ್ಟವರು ಅಲ್ಲಮಪ್ರಭು ಸ್ವಾಮೀಜಿಗಳು. ನೆಲ.ಜಲ.ಭಾಷಾ ವಿಷಯ ಬಂದಾಗ ಕನ್ನಡಪರ ಸಂಘಟನೆ ನೇತೃತ್ವವನ್ನು ವಹಿಸಿ ಗಡಿಯಲ್ಲಿ ಕನ್ನಡ ಗಟ್ಟಿಯಾಗಿ ಉಳಿಯಲು ಸ್ವಾಮೀಜಿ ಕಾರ್ಯ ದೊಡ್ಡದಿದೆ ಎಂದರು.

ಸ್ವಾಮೀಜಿ ಕುರಿತು ರಚನೆಯಾದ ಕನ್ನಡಪ್ರಭು ಗ್ರಂಥದ ಕುರಿತು ಹಿರಿಯ ಸಾಹಿತಿ ಹಾಗೂ ಗ್ರಂಥದ ಪ್ರಧಾ£ಸಂಪಾದಕ ಪ್ರೊ.ಚಂದ್ರಶೇಖರ ವಸ್ತ್ರದ, ಸಂಪಾದಕ ಶಿವನಗೌಡ ಗೌಡರ, ಪ್ರಕಾಶ ಗಿರಿಮಲ್ಲನವರ ಮಾತನಾಡಿದರು. 

ಸಾನಿದ್ಯವನ್ನು ನಿಡಸೋಸಿ ಸಿದ್ಧಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ವಹಿಸಿದ್ದರು. ಸಾನಿದ್ಯವನ್ನು ಬೆಳಗಾವಿ ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ವಹಿಸಿದ್ದರು. ವೇದಿಕೆ ಮೇಲೆ ಸಂಪಾದನ ಸ್ವಾಮೀಜಿ, ಶೇಗುಣಸಿ ಮಹಾಂತ ದೇವರು, ಬೆಂಡವಾಡ ಸ್ವಾಮೀಜಿ ಮುಂತಾದವರು ಇದ್ದರು. 

ಸಹಕಾರ ಮಹಾಮಂಡಳದ ರಾಜ್ಯ ಉಪಾಧ್ಯಕ್ಷ ಜಗದೀಶ ಕವಟಗಿಮಠ, ಜಿಪಂ ಮಾಜಿ ಸದಸ್ಯ ಮಹೇಶ ಭಾತೆ ಅಲ್ಲಮಪ್ರಭು ಸ್ವಾಮೀಜಿಯ ತುಲಾಭಾರ ನಡೆಸಿದರು.

ಸುದ್ದಿ ಓದಿ