ಜವಾಹರಲಾಲ್ ನೆಹರೂ ತತ್ವಾದರ್ಶ ಪಾಲಿಸಿ
ಬಳ್ಳಾರಿ 14: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾನ್ಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಜಿ.ಎಸ್.ಮಹಮ್ಮದ್ ರಫೀಕ್ ಅಧ್ಯಕ್ಷತೆಯಲ್ಲಿ ದೇಶದ ಮೊದಲ ಪ್ರಧಾನಿ ಪಂಡಿತ ಜವಹರ್ಲಾಲ್ ನೆಹರು ಅವರ ಜನ್ಮದಿನದ ನಿಮಿತ್ತ ಮಕ್ಕಳ ದಿನ ಆಚರಿಸಲಾಯಿತು.
ಮಹಾತ್ಮರು ದೇಶಕ್ಕೆ ನೀಡಿದ ಕೊಡುಗೆ ಸ್ಮರಿಸಲಾಯಿತು. ಅವರ ಶಾಂತಿಯುತ, ಅಹಿಂಸಾತ್ಮಕ ಜೀವನ ಸಿದ್ಧಾಂತಗಳನ್ನು ಪಾಲಿಸಲು ಮನವಿ ಮಾಡಲಾಯಿತು.
ಜಿ.ಎಸ್.ಮಹಮ್ಮದ್ ರಫೀಕ್ ಮಾತನಾಡಿ, ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಸಿದ್ದರು. ಅವರ ಪ್ರತಿಂಯೊಂದು ನಡೆ-ನುಡಿಗಳು ಮತ್ತು ಘೋಷಣೆಗಳು ಇಂದು ನಮಗೆ ಸ್ಪೂರ್ತಿಯನ್ನು ನೀಡುವಂತಹವು. ಇಂತಹ ಮಹಾತ್ಮರು ಮತ್ತೇ ನಮ್ಮ ಭಾರತ ಮಾತೆಯ ಮಡಿಲಲ್ಲಿ ಜನ್ಮ ಪಡೆಯಲೆಂದರು.
ಶುಕ್ರವಾರ ಹೃದಾಯಘಾತದಿಂದ ಮರಣ ಹೊಂದಿದ ಪ್ರಖ್ಯಾತ ಬರಹಗಾರರು, ಲೇಖಕರು, ಸಾಹಿತಿಗಳು ಅದರಲ್ಲೂ ಮೂಲತಃ ನಮ್ಮ ಬಳ್ಳಾರಿ ಜಿಲ್ಲೆಯವರಾದ ರವಿ ಬೆಳೆಗೆರೆ ಅÀವರನ್ನು ಸ್ಮರಿಸುತ್ತಾ ಅವರು ಪತ್ರಕರ್ತರಾಗಿ ಅನೇಕ ಕ್ರಿಮಿನಲ್ ಮೊಕದ್ದಮ್ಮೆಗಳನ್ನು ಬಹಿರಂಗ ಪಡಿಸುವಲ್ಲಿ ಅವರು ಪಟ್ಟ ಶ್ರಮವನ್ನು ಸ್ಮರಿಸಿದರು. ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆಯನ್ನು ಮಾಡಲಾಯಿತು.
ಆಚರಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕಲ್ಲುಕಂಭ ಪಂಪಾಪತಿ, ಉಪಾಧ್ಯಕ್ಷರಾದ ಕಂದರಿ ನಾಗರಾಜ, ಉಪಾಧ್ಯಕ್ಷರಾದ ಯತೀಂದ್ರ ಗೌಡ, ಉಪಾಧ್ಯಕ್ಷರಾದ ಎಂ.ಕುಮಾರಮ್ಮ, ಮೋಕ ರೂಪನಗುಡಿ ಬ್ಲಾಕ್ ಅಧ್ಯಕ್ಷರಾದ ಅಸುಂಡಿ ನಾಗರಾಜ ಗೌಡ, ಬ್ರೂಸ್ ಪೇಟ್ ಬ್ಲಾಕ್ ಅಧ್ಯಕ್ಷರಾದ ಹರ್ಷದ್ ಅಹಮ್ಮದ್ ಗಣಿ, ಪ್ರಧಾನ ಕಾರ್ಯದರ್ಶಿಗಳಾದ ಡಿ.ಅಯಾಜ್ ಅಹಮ್ಮದ್, ಕಾಂತಿ ನೋಹ ವಿಲ್ಸನ್, ಕೆ.ಬಿ.ಗೋಪಿಕೃಷ್ಣ, ಕಾರ್ಯದರ್ಶಿಗಳಾದ ವೈ.ಶ್ರೀನಿವಾಸುಲು, ಎಂ.ಶಾಂತಮ್ಮ, ಕೆ.ತಾಯಪ್ಪ, ಜೈ ಕುಮಾರ್ ನಾಯುಡು, ಅಲಿವೇಲು ಸುರೇಶ್, ಗೋಣಾಳ್ ನಾಗಭೂಷಣ ಗೌಡ, ಜಿ.ಹಮೀದ್ ಭಾಷ, ಶಮೀಮ್ ಜಕ್ಲಿ, ಸಂಘಟನಾ ಕಾರ್ಯದರ್ಶಿಗಳಾದ ಬಿ.ಎಂ.ಸೂರ್ಯನಾರಾಯಣ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಹನುಮ ಕಿಶೋರ್, ಎಸ್.ಸಿ.ಘಟಕದ ಆದ್ಯಕ್ಷರಾದ ಎಂ.ಪಿ.ಎರುಕಾಲ್ಸ್ವಮಿ, ಸೇವದಳ ಅಧ್ಯಕ್ಷರಾದ ಡಿ.ಮೊರಾರ್ಜಿರೆಡ್ಡಿ, ಮಹಾನಗರಪಾಲಿಕೆ ಮಾಜಿ ಸದಸ್ಯರಾದ ಪರ್ವಿನ್ ಭಾನು, ಕಾ.ಕಾ.ಸ ಸದಸ್ಯರು ಡಿ.ಲಕ್ಷ್ಮಿ ದೇವಿ, ಮುಖಂಡರಾದ ಪಿ.ರಂಗಸ್ವಾಮಿ, ಕೆ.ಮೂರ್ತಿ, ಬಿ.ಎ.ಪದ್ಮಾವತಿ, ಮತ್ತು ಎಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.