ಲೇಖನಗಳು

ಸೂಕ್ತ ಚಿಕಿತ್ಸೆಯ ಮೂಲಕ ಚಿಕ್ಕಮಕ್ಕಳ ಕ್ಯಾನ್ಸರ್ ಗುಣಪಡಿಸಬಹುದು : ದೃತಿಗೆಡಬೇಡಿ

ಸೂಕ್ತ ಚಿಕಿತ್ಸೆಯ ಮೂಲಕ ಚಿಕ್ಕಮಕ್ಕಳ ಕ್ಯಾನ್ಸರ್ ಗುಣಪಡಿಸಬಹುದು : ದೃತಿಗೆಡಬೇಡಿ

ಅಂತರಾಷ್ಟ್ರೀಯ ಬಾಲ್ಯ ಕ್ಯಾನ್ಸರ ದಿನಾಚರಣೆಯನ್ನು ಫೆಬ್ರುವರಿ 15ರಂದು ಆಚರಿಸಲಾಗುತ್ತದೆ. ಇದೊಂದು ಜಾಗತಿಕ ಸೌಹಾರ್ದತೆಯ ಪ್ರಚಾರವಾಗಿದ್ದು ಇದರಿಂದ ಪ್ರತಿಯೊಂದು ಕ್ಯಾನ್ಸರ ಪೀಡಿತ ಮಕ್ಕಳು ಹಾಗೂ ಪೋಷಕರಲ್ಲಿ ಸಹಾಯಹಸ್ತ ಒದಗಿಸಲು ಇದು ಸಹಕಾರಿಯಾಗುತ್ತದೆ. ಜಗತ್ತಿನಾದ್ಯಂತ 3.ಲಕ್ಷಕ್ಕೂ ಹೆಚ್ಚು ಮಕ್ಕಳು ಪ್ರತಿವರ್ಷ ಕ್ಯಾನ್ಸರ ರೋಗಕ್ಕೆ ತುತ್ತಾಗುತ್ತಾರೆ. ಭಾರತವೊಂದರಲ್ಲಿ ಮಾತ್ರ 75ಸಾವಿರಕ್ಕೂ ಹೆಚ್ಚು ಮಕ್ಕಳು ಕ್ಯಾನ್ಸರ ಪೀಡಿತರು ಎಂದು ದೃಢಪಟ್ಟಿದೆ. ಸರಿಯಾದ ಸಮಯದಲ್ಲಿ ಮಕ್ಕಳ ಕ್ಯಾನ್ಸರ ರೋಗವನ್ನು ಪತ್ತೆ ಹಚ್ಚುವುದರಿಂದ ಕ್ಯಾನ್ಸರ ಚಿಕಿತ್ಸಾ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ಪಡೆದರೆ ಬಾಲ್ಯ ಕ್ಯಾನ್ಸರ ರೋಗವನ್ನು ಸಂಪೂರ್ಣವಾಗಿ ವಾಸಿಮಾಡಬಹುದು.  

ಪಾಶ್ಚಿಮಾತ್ಯ ದೇಶದಲ್ಲಿ ಸರಿಸುಮಾರು 80ಅ ರಷ್ಟು ಮಕ್ಕಳು ಗುಣಮುಖರಾಗುತ್ತಿದ್ದಾರೆ. ಅಭಿವೃದ್ದಿ ಹೊಂದುತ್ತಿರುವ ದೇಶಗಳ ಪೈಕಿ ಭಾರತ ಸೇರಿ 60ಅ ಕಡಿಮೆ ಮಕ್ಕಳು ಗುಣಮುಖರಾಗುತ್ತಿದ್ದಾರೆ. ರೋಗ ನಿರ್ಣಯ ವಿಳಂಬ, ಕೈಗೆಟುಕದ ಚಿಕಿತ್ಸಾ ಕೇಂದ್ರಗಳು, ಅನಿಯಮಿತ ಚಿಕಿತ್ಸೆ (ಪರಿತ್ಯಾಗ) ಇತ್ಯಾದಿ ಕಾರಣಗಳನ್ನು ಗಮನಿಸಬಹುದು. ಇವೆಲ್ಲದಕ್ಕೂ ಪ್ರಥಮ ಹೆಜ್ಜೆ ಜನರಲ್ಲಿ ಜಾಗೃತಿ ಮೂಡಿಸುವದು.  

- ಮೊದಲ ಹಂತದಲ್ಲಿ ಪತ್ತೆಹಚ್ಚಬಹುದಾದ ಬಹುಮುಖ್ಯ ಲಕ್ಷಣಗಳು.  

85ಅರಷ್ಟು ಮಕ್ಕಳು ಈ ಕೆಳಗಿನ ಯಾವುದಾದರು ಗುಣಲಕ್ಷಣಗಳನ್ನು ಹೊಂದಿರುತ್ತಾರೆ. 

1) ಬಹುದಿನಗಳ ಜ್ವರ.  

2) ಹೊಟ್ಟೆ ಗಂಟು, ದೇಹದ ಯಾವು ಒಂದು ಭಾಗ ಊತಕ್ಕೆ ಒಳಗಾಗುವುದು. 

3) ವಿವರ್ಣತೆ, ಶಕ್ತಿಹೀನತೆ, ತೂಕ ಕಡಿಮೆಯಾಗುವಿಕೆ. 

4) ನಿರಂತರವಾದ ಮೂಳೆ ನೋವು, ತಲೆನೋವು ಮತ್ತು ವಾಂತಿ. 

5) ಚರ್ಮದಡಿ ರಕ್ತ ಹೆಪ್ಪುಗಟ್ಟಿ ನೀಲಿ ಬಣ್ಣವಾಗುವದು. 

6) ಕಣ್ಣು ಮಂಜು ಮತ್ತು ಕಣ್ಣಲ್ಲಿ ಬಿಳಿ ಚುಕ್ಕೆ. 

ಈ ಮೇಲ್ಕಂಡ ಗುಣಲಕ್ಷಣಗಳು ಕಂಡುಬಂದಲ್ಲಿ ಚಿಕ್ಕಮಕ್ಕಳ ತಜ್ಞರನ್ನು  ಬೆಟ್ಟಿಮಾಡಿ. ಒಂದು ಸಾರಿ ಮಕ್ಕಳಲ್ಲಿ ಕ್ಯಾನ್ಸರ ಪತ್ತೆಹಚ್ಚಿದ ಮೇಲೆ ವಿಶೇಷವಾದ ಕ್ಯಾನ್ಸರ ಚಿಕಿತ್ಸಾ ಕೇಂದ್ರಕ್ಕೆ ಹಸ್ತಾಂತರಿಸುವುದು ಅತಿ ಮುಖ್ಯವಾದ ಕೆಲಸ. ಚಿಕಿತ್ಸೆಗೆ ಒಳಗಾದ ಮೇಲೆ ಉತ್ತಮ ಫಲಿತಾಂಶವು ವಯಸ್ಕರಿಗಿಂತ ಚಿಕ್ಕಮಕ್ಕಳಲ್ಲಿ ಬಹು ತೀಕ್ಷ-್ಣವಾಗಿರುತ್ತದೆ. ವಯಸ್ಕರಿಗೂ ಹಾಗೂ ಚಿಕ್ಕ ಮಕ್ಕಳಿಗೆ ಬೇರೆ ಬೇರೆ ಚಿಕಿತ್ಸೆ ಅವಶ್ಯಕತೆ ಇರುವುದರಿಂದ ಪಾಲಕರ ಹಾಗೂ ಸಮಾಜದ ತಲೆಯಲ್ಲಿರುವ ಕ್ಯಾನ್ಸರ ಬಗ್ಗೆ ಇರುವ ಮೂಢನಂಬಿಕೆಗಳನ್ನು ನಾಶಪಡಿಸಿ ನಿಜಾಂಶದ ಜಾಗೃತಿ ಮೂಡಿಸುವುದರಲ್ಲಿ ಸರಕಾರದ ಜೊತೆಗೆ ಭಗೀರತ ಪ್ರಯತ್ನ ನಮ್ಮದಾಗಬೇಕು. 

* ಜಾಗೃತಿ ಹಾಗೂ ನಿಯಂತ್ರಣಾ ಕ್ರಮಗಳು : 

* ಜನಸಾಮಾನ್ಯರಲ್ಲಿ ಬಾಲ ಕ್ಯಾನ್ಸರ ಕುರಿತಂತೆ ಜಾಗೃತಿ ಮೂಡಿಸಬೇಕು. 

* ಆರೋಗ್ಯ ಸಿಬ್ಬಂದಿಗಳಿಗೆ ಗುಣಮಟ್ಟದ ತರಬೇತಿ ಹಾಗೂ ಸೂಕ್ತ ಉಪಕರಣಗಳನ್ನು ಒದಗಿಸುವದು. 

* ಜಿಲ್ಲಾ, ತಾಲೂಕಾ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸುವದು ಮತ್ತು ಕ್ಯಾನ್ಸರ ಚಿಕಿತ್ಸಾ ಸಂಪನ್ಮೂಲಗಳನ್ನು ಹೆಚ್ಚಿಸಬೇಕು. 

* ಮಕ್ಕಳಲ್ಲಿ ಕ್ಯಾನ್ಸರ ಕಾಣುವುದು ಅತೀ ವಿರಳವಾದರೂ ನವಜಾತ ಶಿಶುಗಳು ಸೇರಿದಂತೆ ಯಾವುದೇ ವಯಸ್ಸಿನ ಮಕ್ಕಳಲ್ಲಿ ಪರಿಣಾಮ ಬಿರುತ್ತದೆ. 

* ಕೆಲವು ಕ್ಯಾನ್ಸರ ಹೊರತುಪಡಿಸಿ ಎಲ್ಲಾ ಕ್ಯಾನ್ಸರ ರೋಗಗಳು ಅನುವಂಶಿಕವಲ್ಲ. 

* ಸೊಂಕುರಹಿತ ರೋಗ, ಸ್ಪರ್ಶ, ಆಲಿಂಗನ ಹಾಗೂ ಆಹಾರ ಹಂಚಿಕೊಳ್ಳುವುದರಿಂದ ಹರಡುವುದಿಲ್ಲ. 

* ಕಿಮೋಥೆರಪಿ ವಿಶೇಷವಾದ ಓಷಧೀಯ ಗುಣ ಹೊಂದಿರುವ ಕಾರಣ ಕ್ಯಾನ್ಸರ ಜೀವಕೋಶಗಳನ್ನು ನಾಶಪಡಿಸುತ್ತದೆ. ಚಿಕಿತ್ಸೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಮಕ್ಕಳಲ್ಲಿ ಹೆಚ್ಚಾಗಿರುತ್ತದೆ. 

* ಕ್ಯಾನ್ಸರ ಪ್ರಥಮ ಹಂತದಲ್ಲಿ ಸೂಕ್ತ ಚಿಕಿತ್ಸೆಗೆ ಒಳಪಟ್ಟಲ್ಲಿ ಪ್ರತಿಶತ 70ರಷ್ಟು ಮಕ್ಕಳಲ್ಲಿನ ರೋಗ ಗುಣಪಡಿಸಬಹುದು. 

* ಸಾಮಾನ್ಯವಾಗಿ ಚಿಕ್ಕಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ ರೋಗಗಳು : 

ರಕ್ತ (ಐಜಣಞಜಟಚಿ) ಕ್ಯಾನ್ಸರ,  ದುಗ್ದರಸ ಗ್ರಂಥಿಗ (ಐಥಿಟಠಿ ರಟಚಿಟಿ) ಕ್ಯಾನ್ಸರ,  

ಮೆದುಳಿನ ಗೆಡ್ಡೆ (ಃಡಿಚಿಟಿ ಖಿಣಟಠ) ಕ್ಯಾನ್ಸರ, ಕಿಡ್ನಿ (ಘಟ ಖಿಣಟಠ) ಕ್ಯಾನ್ಸರ  

ಹಾಗೂ ಮೂಳೆ(ಎಲಬು) (ಖಚಿಡಿಛಿಠಚಿ) ಕ್ಯಾನ್ಸರ. ....ಇತ್ಯಾದಿ      

 ಗ್ರಾಮೀಣ ಪ್ರದೇಶದಲ್ಲಿ 80ಅಕಿಂತಲೂ ಹೆಚ್ಚು ಕ್ಯಾನ್ಸರ ಪೀಡಿತ ಮಕ್ಕಳು ಸರಿಯಾದ ಚಿಕಿತ್ಸೆಯಿಂದ ವಂಚಿತರಾಗಿರುತ್ತಾರೆ ಆದ್ದರಿಂದ ಸರಕಾರಿ ಯೋಜನೆಗಳು ಮತ್ತು ಓಉಓಗಳ ಅಡಿಯಲ್ಲಿ ಕ್ಯಾನ್ಸರ ಚಿಕಿತ್ಸೆ ಫಲಕಾರಿಯಾಗುವುದರಲ್ಲಿ ತಮ್ಮದೇ ಪಾತ್ರವನ್ನು ವಹಿಸುತ್ತಿವೆ.  

ಬಡ, ಹಿಂದುಳಿದ ಪ್ರತಿಯೊಬ್ಬರಿಗೂ ಉತ್ತಮ ಚಿಕಿತ್ಸೆ ನೀಡುವ ಸದುದ್ದೇಶದಿಂದ ನಮ್ಮ ಕೆ.ಎಲ್‌.ಇ. ಸಂಸ್ಥೆಯ ಡಾ. ಪ್ರಭಾಕರ ಕೋರೆ ಚಾರಿಟೆಬಲ್ ಆಸ್ಪತ್ರೆಯ, ಮಕ್ಕಳ ಅಂಕೋಲಾಜಿ ವಿಭಾಗ ಕಳೆದ 5 ವರ್ಷಗಳ ಹಿಂದೆ ಆರಂಭವಾಗಿದ್ದು. ನೂತನ ವೈದ್ಯಕೀಯ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಅನುಭವಿ ವೈದ್ಯರ, ಶುಶ್ರೂಕಿಯರ, ಓಷಧಿಕಾರರ, ಆಹಾರ ತಜ್ಞರ ಹಾಗೂ ಸಾಮಾಜಿಕ ಕಾರ್ಯಕರ್ತರ ಸಹಕಾರದಲ್ಲಿ ಇದುವರೆಗೂ ಸರಿಸುಮಾರು 200ಕ್ಕೂ ಹೆಚ್ಚು ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು. 70ಕ್ಕಿಂತಲೂ ಹೆಚ್ಚು ಮಕ್ಕಳು ಗುಣಮುಖರಾಗಿದ್ದಾರೆ ಹಾಗೂ ಎಲ್ಲ ಮಕ್ಕಳು ಉತ್ಸುಕತೆಯಿಂದ ಜೀವನ ನಡೆಸುತ್ತಿದ್ದಾರೆ.  

ಡಾ. ಪ್ರಭಾಕರ ಕೋರೆ ಅವರ ಮಾರ್ಗದರ್ಶನದಂತೆ ನಮ್ಮ ಕೆ.ಎಲ್‌.ಇ. ಸಂಸ್ಥೆಯ ಹಿರಿಯ ನುರಿತ ವೈದ್ಯರಾದ ಡಾ. ಎನ್‌. ಎಸ್‌. ಮಹಾಂತಶೆಟ್ಟಿ, ಡಾ. ವಿ. ಡಿ. ಪಾಟೀಲ, ಡಾ. ವ್ಹಿ. ಎ. ಕೋಟಿವಾಲೆ, ಡಾ. ಎಂ. ವ್ಹಿ. ಜಾಲಿ, ಡಾ. ದಯಾನಂದ ಎಂ., ಡಾ. ಅರೀಪ್ ಮಾಲದಾರ ಇವರ ಬೆಂಬಲ, ಸಹಕಾರ ಹಾಗೂ ಸರಕಾರರೇತರ ಸಂಸ್ಥೆಗಳಾದ ಕ್ಯಾನ್ಕಿಡ್ಸ, ಲೂಕೇಮಿಯಾ, ಕ್ರೂಸೇಡರ್ಸ, ಕಡ್ಲಸ್ ಪೌಂಡೇಶನ ಮತ್ತು ಸ್ಥಳೀಯ ಸಂಸ್ಥೆಗಳಾದ ಇನ್ನರವ್ಹಿಲ್ ಕ್ಲಬ್ ಮತ್ತು ರೋಟರಿ ಕ್ಲಬಗಳ ಸಹಾಯದಿಂದ ಯಶಸ್ಸು ಸಾಧ್ಯವಾಗಿದೆ. 

ರೋಗಿಗಳಲ್ಲಿ ಗುಣಮುಖರಾಗುತ್ತೇವೆ ಎಂಬ ಭರವಸೆ ನಮ್ಮ ಚಿಕಿತ್ಸೆಯನ್ನು ಇನ್ನಷ್ಟು ಉತ್ತಮಗೊಳಿಸುವುದರಿಂದ ಅತಿಹೆಚ್ಚು ಕ್ಯಾನ್ಸರ ಪೀಡಿತ ಮುಗ್ದ ಮಕ್ಕಳನ್ನು ಗುಣಪಡಿಸಬಹುದು. 

ಹೆದರದಿರಿ...., ಸಹಕಾರ ಮತ್ತು ಸರಕಾರದ ಸೌಕರ್ಯದ ಜೊತೆಗೆ ನಾವಿದ್ದೇವೆ. 

- ಡಾ. ಅಭಿಲಾಷಾ ಎಸ್‌. 

ಚಿಕ್ಕಮಕ್ಕಳ ಕ್ಯಾನ್ಸರ ತಜ್ಞರು, ಕೆ.ಎಲ್‌.ಇ. ಸಂಸ್ಥೆ, 

ಡಾ. ಪ್ರಭಾಕರ ಕೋರೆ ಆಸ್ಪತ್ರೆ, ಬೆಳಗಾವಿ 

- * * * - 


ಸುದ್ದಿ ಓದಿ