ಬಳ್ಳಾರಿ

ಜಿಲ್ಲಾ ಪ್ರಧಾನ ಸಂಚಾಲಕರಾಗಿ ಚಿಕ್ಕಗಾದಿಲಿಂಗಪ್ಪ ಆಯ್ಕೆ

ಜಿಲ್ಲಾ ಪ್ರಧಾನ ಸಂಚಾಲಕರಾಗಿ ಚಿಕ್ಕಗಾದಿಲಿಂಗಪ್ಪ ಆಯ್ಕೆ
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ವಾದ) ಜಿಲ್ಲಾ ಸಮಿತಿ ಸರ್ವ ಸದಸ್ಯರ ಸಭೆ ಹಾಗು ಜಿಲ್ಲಾ ಪದಾಧಿಕಾರಿಗಳ ಪುನರ್ರ

ಬಳ್ಳಾರಿ01:ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ವಾದ) ಜಿಲ್ಲಾ ಸಮಿತಿ ಸರ್ವ ಸದಸ್ಯರ ಸಭೆ ಹಾಗು ಜಿಲ್ಲಾ ಪದಾಧಿಕಾರಿಗಳ ಪುನರ್ರಚನಾ ಸಭೆಯು ನಗರದ ಮೆಚರ್ಡ್ ಸಭಾಂಗಣದಲ್ಲಿ ನಡೆಯಿತು. 

ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ವಾದ) ರಾಜ್ಯ ಸಮಿತಿ ಸದಸ್ಯ ದುರುಗಪ್ಪ ತಳವಾರ ಮಾತನಾಡುತ್ತಾ ಸಂಘಟನೆಯ ಬಲವರ್ಧನೆಗೆ ಹಾಗು ಶೋಷಿತ ಸಮುದಾಯಗಳಿಗೆ ಧ್ವನಿಯಾಗಬೇಕಾದರೆ, ನಾವು ಮೊದಲು ಸಂವಿಧಾನದ ಅಂಶಗಳನ್ನು ಮತ್ತು ಆಶಯಗಳನ್ನು ಮುಖ್ಯವಾಗಿ ಅರಿತುಕೊಳ್ಳಬೇಕಾಗಿದೆ. ಆನಂತರವೇ ನಾವು ಶೋಷಿತರು ಸಮುದಾಯಗಳು, ಶೂದ್ರರ, ಬಡವರ, ಅಲ್ಪಸಂಖ್ಯಾತರ, ಹಿಂದುಳಿದವರನ್ನು ಜಾಗೃತಿಯೆಡೆಗೆ ಕರೆದುಕೊಂಡು ಹೋಗಲು ಸಾಧ್ಯವಾಗುತ್ತದೆ.

  ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಮುಖಂಡರು ಸಂವಿಧಾನವನ್ನು ಓದುವುದು ಸೇರಿದಂತೆ ಬಾಬಾ ಸಾಹೇಬ್ ಅಂಬೇಡ್ಕರ್, ಬುದ್ಧ, ಬಸವಣ್ಣ, ಪುಲೆ, ಪೆರಿಯಾರ್, ನಾರಾಯಣ ಗುರು ಸೇರಿದಂತೆ ಇತರೆ ಮಹನೀಯರ ಬದುಕು ಮತ್ತು ಬರಹಗಳನ್ನು ತಿಳಿದುಕೊಳ್ಳುವ ಮುಖಾಂತರ ಹೋರಾಟವನ್ನು ಯಶಸ್ವಿಗೊಳಿಸಲು ಸಾಧ್ಯವಾಗುತ್ತದೆ ಎಂದು ಸಭೆಯಲ್ಲಿ ನೆರೆದ ಮುಖಂಡರಿಗೂ ಮತ್ತು ಕಾರ್ಯಕರ್ತರಿಗೆ ಕರೆ ನೀಡಿದರು. 

ಸಭೆಯ ಅಧ್ಯಕ್ಷತೆಯನ್ನು ಸಮಿತಿ ರಾಜ್ಯ ಉಪ ಪ್ರಧಾನ ಸಂಚಾಲಕ ನಾಗಣ್ಣ ಬಡಿಗೇರ್ ಅವರು ವಹಿಸಿದ್ದರು. ಸಭೆಯಲ್ಲಿ ವಿಭಾಗೀಯ ಸಂಚಾಲಕರಾದ ರಾಮಣ್ಣ ಕಲ್ಲದೇವನಹಳ್ಳಿ, ರಾಜ್ಯ ಸಂಘಟನಾ ಸಚಾಲಕರಾದ ಪಿ.ತಾಯಪ್ಪ, ವಿಭಾಗೀಯ ಸಂಘಟನಾ ಸಂಚಾಲಕರಾದ ಎ.ಕೆ. ಗಂಗಾಧರ, ಖಜಾಂಚಿ ಕೆ. ಮೆಹಬೂಬ್, ಮಾಜಿ ಪ್ರಧಾನ ಸಂಚಾಲಕರಾದ ಹೆಚ್. ಹುಸೇನಪ್ಪ, ಎಸ್. ಕೆಂಚಪ್ಪ, ಚಿದಾನಂದಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಹೆಚ್ ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. 

ಜಿಲ್ಲಾ ಪದಾಧಿಕಾರಿಗಳ ಅವಿರೋಧ ಆಯ್ಕೆ: 

ಈ ಸಭೆಯಲ್ಲಿ :ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅವರ ಆದೇಶದ ಮೇರೆಗೆ ಜಿಲ್ಲಾ ಸಮಿತಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 

ಜಿಲ್ಲಾ ಪ್ರಧಾನ ಸಂಚಾಲಕರಾಗಿ ಹೆಚ್. ಚಿಕ್ಕಗಾದಿಲಿಂಗಪ್ಪ, ಜಿಲ್ಲಾ ಸಂಘಟನಾ ಸಂಚಾಲಕರಾಗಿ ಡಿ.ಇ.ವೀರೇಶ್, ಹೆಚ್. ಕುಮಾರಸ್ವಾಮಿ, ಹೆಚ್. ಈರಪ್ಪ, ಹೆಚ್. ಲಾಲೆಪ್ಪ, ಕಂಪ್ಲಿ ಪ್ರಾನ್ಸೀಸ್ ಹಾಗು ಖಜಾಂಚಿಯಾಗಿ ಕಚರ್ೇಡು ಪ್ರಕಾಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. 

ಸಭೆಯಲ್ಲಿ ಮುಖಂಡ ಚಂದ್ರ ನಾಗರಾಜ್, ಕೆ. ರಾಮಚಂದ್ರ, ಹೆಚ್. ಗಂಗಪ್ಪ ವಕೀಲರು, ಹೆಚ್. ಹನುಮಂತಪ್ಪ ವಕೀಲರು, ಹಂಪಣ್ಣ, ನರಸಿಂಹಲು, ಶೇಖಣ್ಣ, ರಾಚೋಟೆಪ್ಪ, ರಾಜಶೇಖರ, ಯಂಕಪ್ಪ, ಆಂಜನೇಯ, ದುರುಗಣ್ಣ, ಸಿದ್ದಪ್ಪ. ಶಂಕರ್,  ಗುಂಡಪ್ಪ, ಗೋನಾಳ್ ಗಾದಿಲಿಂಗಪ್ಪ, ಗೋನಾಳ್ ರಮೇಶ್, ನಾಗಭೂಷಣ, ವೀರೇಶ್ ಕುಮಾರ್, ಆನಂದ್ ಕುಮಾರ, ನಾಗೇಶ್, ಕಂಪ್ಲಿ ಕೃಷ್ಣ ಸೇರಿದಂತೆ  ಇತರರು ಭಾಗವಹಿಸಿದ್ದರು. 


ಸುದ್ದಿ ಓದಿ