ನಟ ಪುನೀತ್ ಹಠಾತ್ ನಿಧನಕ್ಕೆ ಮುಖ್ಯಮಂತ್ರಿ ಸ್ಟಾಲಿನ್ ದಿಗ್ಭ್ರಮೆ
ಚೆನ್ನೈ, ಅ. 29: ಕನ್ನಡ ಚಲನಚಿತ್ರ ನಟ ಪುನೀತ್ ರಾಜ್ಕುಮಾರ್ ಅವರ ಹಠಾತ್ ನಿಧನದ ಸುದ್ದಿ ಕೇಳಿ ದಿಗ್ಭ್ರಮೆಯಾಯಿತು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಹೇಳಿದ್ದಾರೆ.
ಪುನೀತ್ ಅಗಲಿಕೆಯಿಂದ ಕನ್ನಡ ಸಿನಿ ಉದ್ಯಮವು ತನ್ನ ಸಮಕಾಲೀನ ಶ್ರೇಷ್ಠ ಪ್ರತಿಮೆಗಳಲ್ಲಿ ಒಬ್ಬನನ್ನು ಕಳೆದುಕೊಂಡಿದೆ ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಜ್ ಕುಟುಂಬಕ್ಕೆ ತಮ್ಮ ಕುಟುಂಬ ಹತ್ತಿರವಾಗಿತ್ತು. ಹೀಗಾಗಿ ತಮಗೆ ವೈಯಕ್ತಿಕ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಪುನೀತ್ ಸ್ಟಾರ್ಡಮ್ ಹೊರತಾಗಿಯೂ ವಿನಮ್ರ ವ್ಯಕ್ತಿ. ಕನ್ನಡ ಸಿನಿ ಉದ್ಯಮವು ಸಮಕಾಲೀನ ಶ್ರೇಷ್ಠ ಕಲಾವಿದರಲ್ಲಿ ಒಬ್ಬರನ್ನು ಕಳೆದುಕೊಂಡಿದೆ ಕರ್ನಾಟಕದ ಜನತೆಗೆ ಭರಿಸಲಾಗದ ನಷ್ಟವಾಗಿದೆ ಎಂದಿರುವ ಸ್ಟಾಲಿನ್ ಸಂತಾಪ ವ್ಯಕ್ತಪಡಿಸಿದ್ದಾರೆ.