ಎದೆ ನೋವಿಗೆ ನಿರ್ಲಕ್ಷ್ಯ ಬೇಡ...!
ಉತ್ತರ ಕರ್ನಾಟಕ ಎಂದಾಕ್ಷಣ ಹಳ್ಳಿ ಮಂದಿಯ ವೇಶ ಭೂಷಣ ನಿಮ್ಮ ಕಣ್ಣುಂದೆ ಬರಬಹುದು, ಅಂಗಿ, ಧೊತ್ರ, ತಲೆಗೆ ರೇಶ್ಮೆ ಪೇಟ್ಗ, ಮುಖದ ಮೇಲೆ ಮೀಸೆ ಮತ್ತು ಅವರ ಊಟ ಕೂಡ ವಿಭಿನ್ನವಾದದು. ಜೋಳದ ರೊಟ್ಟಿ, ಪುಂಡಿ ಪಲ್ಲೆ ಮತ್ತು ತರ, ತರದ ಚಟ್ನಿ, ಹಸಿ ಮೆಣಸಿನಕಾಯಿ, ಉಳ್ಳಾಗಡ್ಡಿ ಸ್ಪಲ್ಪ ಅನ್ನ ಸಾಂಬರ ಜೊತೆಗೆ ಮೊಸರು ಅಂತೂ ಊಟದಲ್ಲಿ ಇರಲೇಬೇಕು. ಒಂದು ಸಲ ಊಟಕ್ಕೆ ಕುಳಿತರೆ ಕಡಿಮೆ ಅಂದರೂ 8 ರಿಂದ 10 ರೊಟ್ಟಿ ತಿನ್ನುವ ಹಳ್ಳಿ ಮಂದಿ ಅವರ ನಾಷ್ಟಾ ಹಬ್ಬ-ಹರಿ ದಿನಗಳಲ್ಲಿ ಮಾತ್ರ. ಮೂರು ಹೊತ್ತು ರೊಟ್ಟಿನೇ ಬೇಕು.
ಊರಗೌಡ ತನ್ನ ಮಗಳನ್ನು ಪಕ್ಕದ ಊರಿಗೆ ಮದುವೆ ಮಾಡಿ ಕೊಟ್ಟಿದ್ದ. ಮಗಳ ಜೀವ ನೆನಸಾಕತಿತ್ತು, ನೊಡಬೇಕೆನ್ನುವ ಆಶೆ, ಹಾಗೆ ಎಂದ ಮಾತ್ರಕ್ಕೆ ಖಾಲಿ ಕೈಯಲ್ಲಿ ಹೇಗೆ ಹೋಗುವುದು? ತನ್ನ ಮಡದಿಗೆ ಹೇಳಿ ರೊಟ್ಟಿ ತರ-ತರದ ಚಟ್ನಿ ಮತ್ತು ಸ್ವಿಟ್ ಮಾಡಿಸಿಕೊಂಡು, ಮಾರನೇ ದಿನ ಮಗಳ ಊರಿಗೆ ಹೋಗಲು ರೆಡಿಯಾದ. ಬೆಳಗ್ಗೆ ಬೇಗ ಎದ್ದು, ಜಳಕ ಮಾಡಿ ಅಂಗಿ ಧೊತ್ರ ಹಾಕೊಂಡು ತಲೆಗೆ ಪೇಟ್ಗ ಸುತಕೊಂಡು, ಕೈಯಲ್ಲಿ ಕೊಡೆ ಹಿಡಿದು ಮೀಸೆ ಮೇಲೆ ಕೈ ತಿರುಗಿಸಿ, ಮಡಿದಿಗೆ ಊಟ ಬಡಿಸಲು ಹೇಳಿದ. 8 ರೊಟ್ಟಿ, ಪುಂಡಿ ಪಲ್ಲೆ ಮತ್ತು ತರ ತರದ ಚಟ್ನಿ, ಹಸಿ ಮೆಣಸಿನಕಾಯಿ, ಉಳ್ಳಾಗಡ್ಡಿ ಸ್ಪಲ್ಪ ಅನ್ನ ಸಾಂಭಾರ ಜೊತೆಗೆ ಮೊಸರು ತಿಂದು ಊಟ ಮುಗಿಸಿದ. ರೊಟ್ಟಿ ತರ-ತರದ ಚಟ್ನಿ ಮತ್ತು ಸ್ವಿಟ್ ಮಾಡಿಸಿ ಕಟ್ಟಿದ ಗಂಟನ್ನು ತನ್ನ ಆಳ ತಲೆ ಮೇಲೆ ಹೊರಸಿ ಕೈಯಲ್ಲಿ ಕೊಡೆ ಹಿಡಿದು ಮೀಸೆ ತಿರುಗಿಸಿಕೊಂಡು ಬಸ್ಸ್ಯಾ-್ಟಂಡ ಕಡೆಗೆ ಹೊರಟ.
ಬಸ್ಸಲ್ಲಿ ಹತ್ತಿ ಕುಳಿತ ಗೌಡರು ಇನ್ನೂ ಸ್ವಲ್ಪ ಸಮಯದಲ್ಲಿ ತನ್ನ ಮಗಳನ್ನು ನೋಡುವ ಖುಷಿಯಲ್ಲಿದ್ದ. ತನ್ನ ಮಗಳು ತನ್ನ ಕೈಯಲ್ಲಿ ಆಡಿ ಬೆಳೆದ ಚಿತ್ರಣಗಳು ಕಣ್ಣುಂದೆ ಬರತೊಡಗಿದವು. ಅಷ್ಟರಲ್ಲೇ ನಿದ್ರೆಗೆ ಜಾರಿದರು ಸ್ವಲ್ಪ ಹೊತ್ತಿಗೆ ಯಾಕೋ ಎದೆ ನೋವು, ವಿಪರಿತ ಬೆವರು, ಸುಸ್ತಾಗಿತ್ತು, ಎಡಗೈ ರಟ್ಟೆ ವಿಪರಿತ ನೋವು, ಎದೆ ಕಿವುಚಿದಂತೆ ಆಗುತ್ತಿತ್ತು. ಮಗಳನ್ನು ನೋಡುವ ಖುಷಿಯಲ್ಲಿ ಇದನ್ನೇಲ್ಲ ಯಾರಿಗೂ ಹೇಳಲಿಲ್ಲ. ಮಗಳ ಊರು ಬಂತು, ಕಷ್ಟ ಪಟ್ಟು ಬಸ್ಸ್ ಇಳಿದ. ಬಿಗರು ಬರುವುದು ಗೊತ್ತಾಗಿ ಮಗಳ ಮನೆಯಿಂದ ಆಳ ಮನುಷ್ಯನೂ ಬಂದು ನಿಂತಿದ್ದ. ಗೌಡರನ್ನು ನೋಡಿ ಓಡಿ ಬಂದು ಗಂಟನ್ನು ತಲೆಯ ಮೇಲೆ ಎತ್ತಿಕೊಂಡು ಎರಡು ಹೆಜ್ಜೆ ನಡೆಯುವಷ್ಟರಲ್ಲಿ ಗೌಡರು ಕುಸಿದು ಕೆಳಗೆ ಬಿದ್ದರು. ಅಕ್ಕ ಪಕ್ಕ ಇದ್ದ ಜನ ದವಡಾಯಿಸಿ, ತಕ್ಷಣ ಹತ್ತಿರದ ಆಸ್ಪತ್ರೆ ಸೇರಿಸಿದರು. ಅಷ್ಟೋತ್ತಿಗೆ ಗೌಡರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ವೈದ್ಯರು ಪರೀಕ್ಷಿಸಿ ಹಾರ್ಟ್ ಅಟ್ಯಾಕ್ ಆಗಿದೆ ಅಂತ ಹೇಳಿ ಡೆತ್ತ್ ಡಿಕ್ಲೆರ್ ಮಾಡಿ, ಬಾಡಿ ಮನೆಗೆ ತಗೆದುಕೊಂಡು ಹೋಗಲು ಹೇಳಿದರು. ಗೌಡರ ಸಾವು ಯಾರಿಗೂ ನಂಬಲಾಗಲಿಲ್ಲ, ಎಲ್ಲರು ಒಬ್ಬರಮುಖನೊಬ್ಬರು ಗಾಬರಿಯಿಂದ ನೊಡತೊಡಗಿದರು.
ಬೇರೆ ಎಲ್ಲ ಕಾಯಿಲೆಗಳಿಗೆ ಚಿಕಿತ್ಸೆ ಹೊಂದಲು ಸಮಯವಿರುತ್ತದೆ, ಆದರೆ ಹೃದಯ ಕಾಯಿಲೆಗೆ ಹಾಗಲ್ಲ ಕೆಲಮ್ಮೆ ಒಂದು ನಿಮಿಷ ಕೂಡ ಸಮಯ ನೀಡುವುದಿಲ್ಲ. ತಕ್ಷಣ ಸಾವು ಸಂಭವಿಸಬಹುವುದು. ಹೃದಯಾ-ಘಾತದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು, ಗ್ಯಾಸ್ಟ್ರಿಕ್ನಿಂದ ಎದೆನೋವು ಎಂದು ಭಾವಿಸಿ ಮುಂದೊಡಬಾರದು ಎಷ್ಟೊ ಜನಕ್ಕೆ ಹೃದಯಾಘಾತದ ಲಕ್ಷಣ, ಮುನ್ಸೂಚನೆ ಅರಿವೂ ಆಗುವುದಿಲ್ಲ. ಮನೆಯವರಿಗೂ ಹೇಳುವುದಿಲ್ಲ ಹಾಗಾಗಿ ಹೆಚ್ಚು ಜನ ಸಾಯುತ್ತಿದ್ದಾರೆ. ಹೃದಯಾಘಾತವಾದ ಮೊದಲು ಒಂದು ಘಂಟೆಯನ್ನು ಗೊಲ್ಡನ್ ಹವರ ಎಂದು ಕರೆಯಲಾಗುತ್ತದೆ. ಸಮಯ ವ್ಯರ್ಥ ಮಾಡದೇ ತಕ್ಷಣ ಆಸ್ಪತ್ರೆಗೆ ಸೇರಿಸಬೇಕು.
ನಾಲ್ವತ್ತು ವರ್ಷದ ನಂತರ ಪ್ರತಿಯೊಬ್ಬರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆಶ್ಚರ್ಯವೆಂದರೆ ಎಷ್ಟೊ ಜನಕ್ಕೆ ಇ.ಸಿ.ಜಿ ಮತ್ತು ಎಕೊಗ್ರಾಮ್ ಮಾಡಿದಾಗ ಹೃದಯ ಕಾಯಿಲೆ ಇರುವುದು ತಿಳಿಯುವುದಿಲ್ಲ, ಟಿ.ಎಂ.ಟಿ ಪರೀಕ್ಷೆ ಮಾಡಿದಾಗ ಸ್ವಲ್ಪ ಪ್ರಮಾಣದಲ್ಲಿ ಪತ್ತೆ ಹಚ್ಚಲಾಗುತ್ತದೆ. ಅಂಜಿಯೋಗ್ರಾಮ್ ಪರೀಕ್ಷೆಯಲ್ಲಿ ನಿಖರವಾಗಿ ಗೊತ್ತಾಗುತ್ತದೆ ಹೃದಯದ ನರಗಳಲ್ಲಿ ಕ್ಲಾಟ್ (ರಕ್ತ ಹೆಪ್ಪುಗಟುವಿಕೆ) ಪತ್ತೆಯಾಗುತ್ತದೆ ಎಂದು ತಜ್ಞ ವೈದ್ಯರು ಹೇಳುತ್ತಾರೆ.
ಸಾವಿಗೆ ಹೆದರಬಾರದು, ಆದರೆ ಅವಶ್ಯವಾಗಿ ಮುಂಜಾಗ್ರತೆ ತೆಗೆದುಕೊಳ್ಳಬೇಕು. ನಮ್ಮ ಆರೋಗ್ಯಕ್ಕೆ ಮಹತ್ವ ಕೊಡಬೇಕು. ದಿನ ನಿತ್ಯ ನಡಿಗೆ, ಯೋಗ ಪ್ರಾಣಾಯಾಮ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಹಸಿರು ತಪ್ಪಲ ಸೇವಿಸಬೇಕು, ಮದ್ಯ, ತಂಬಾಕುವಿನಿಂದ ದೂರವಿರಬೇಕು. ಮಾಂಸಾಹಾರ ಮತ್ತು ಕರಿದಿದ್ದ ಪದಾರ್ಥವನ್ನು ಕಡಿಮೆಗೊಳಿಸಬೇಕು. ಅಡುಗೆಗೆ ಶುದ್ಧ ಎಣ್ಣೆ ಬಳಸುವುದು. ಹೃದಯದ ರಕ್ತ ನಾಳದಲ್ಲಿ ಕ್ಲಾಟ್ ಇದ್ದರೂ ಸರಿಯಾದ ಆಹಾರ ಕ್ರಮ, ನಿದ್ರೆ, ಮತ್ತು ಚಿಂತೆ ಮುಕ್ತ ಸರಳ ಜೀವನ ನಡೆಸುವುದರಿಂದ ಹೃದಯದ ತೊಂದರೆ ಬೇಗ ಬರುವುದಿಲ್ಲ.
ಹೃದಯದ ಕಾಯಿಲೆ ಹೊಂದಿರುವರು ಒಬ್ಬರೆ ಹೊರಗಡೆ ಹೋಗದಿದ್ದರೆ ಒಳ್ಳೆಯದು. ಅವಶ್ಯವಿದ್ದರೆ ಜೊತೆಗೆ ನೀರಿನ ಬಾಟಲಿ, ಸ್ವಲ್ಪ ಹಣ, ಮೊಬೈಲ್, ಯಾವುದಾದರೊಂದು ಐಡಿ ಕಾರ್ಡ ನಿಮ್ಮ ಮನೆಯವರ ಪೋನ್ ನಂಬರ ಬರೆದಿಟ್ಟುಕೊಳ್ಳುವುದು ಇವುಗಳು ತುರ್ತು ಸಮಯದಲ್ಲಿ ಸಹಾಯವಾಗುತ್ತದೆ.
ನಮ್ಮ ನೀರೀಕ್ಷೆಯಲ್ಲಿ ನಮ್ಮ ಕುಟುಂಬ ಇದೆ. ಆರೋಗ್ಯದ ಬಗ್ಗೆ ಜಾಗೃತೆಯಿಂದ ಇದ್ದು, ಇನ್ನಷ್ಟು ದಿನಗಳ ಕಾಲ ನಮ್ಮ ಪ್ರೀತಿ ಪಾತ್ರರವವರಿಗಾಗಿ ಸರಳ ಜೀವನ ನಡೆಸುವ ಆಶಾಭಾವನೆ ಹೊಂದೋಣ.
ಹೃದಯ ಸಂಬಂಧಿತ ಕಾಯಿಲೆಗಳಿಗೆ ಸಂರಿ್ಕಸಬೇಕಾದ ಡಾಕ್ಟರ್:
ಹೃದ್ರೋಗ ತಜ್ಞರು: (ಅಚಿಡಿಜಠಠಣ)
ಸಂರಿ್ಕಸಬೇಕಾದ ಆಸ್ಪತ್ರೆಗಳು;
ಕರ್ನಾಟಕದ ಎಲ್ಲ ಜಿಲ್ಲಾ ಆಸ್ಪತ್ರೆಗಳು ಮತ್ತು ಎಲ್ಲ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಹೃದ್ರೋಗ ತಜ್ಞರು ಲಭ್ಯ ಇರುತ್ತಾರೆ
ಜಯದೇವ ಆಸ್ಪತ್ರೆ ಬೆಂಗಳೂರು.
ಫೋನ್ ನಂಬರ್ 080-22977202 /679/235
ಆರೋಗ್ಯ ಸಾಹಾಯವಾಣಿ 104 ಮತ್ತು ಆಂಬ್ಯುಲೆನ್ಸ್ಗಾಗಿ 108ಕ್ಕೆ ಸಂರಿ್ಕಸಿ;
- ಶರಣಪ್ಪ ಮಾಳಗಿಮನಿ
ಧಾರವಾಡ