ಏ.1ರಿಂದ ಚದುರಂಗ ತರಬೇತಿ ಶಿಬಿರ
ಬಳ್ಳಾರಿ 25: ಪ್ರಥಮ ಬಾರಿಗೆ ಐದು ದಿನಗಳ ಚದುರಂಗ ತರಬೇತಿ ಶಿಬಿರವನ್ನು ಅಂತರರಾಷ್ಟ್ರೀಯ ಶ್ರೇಯಾಂಕ ಹೊಂದಿರುವ ಮತ್ತು ಐ.ಟಿ ಕಾಪೆರ್Çರೇಟ್ ಚಾಂಪಿಯನ್ ಆಗಿರುವ ಶ್ರೀಪಾದ್ ಕೆ ವಿ ಯವರು ನಡೆಸಿಕೊಡಲಿದ್ದಾರೆ.
ಈ ತರಬೇತಿ ಶಿಬಿರವು 1 ಏಪ್ರಿಲ್ನಿಂದ 5 ಏಪ್ರಿಲ್ ವರೆಗೆ ನಡೆಯಲಿದ್ದು, ಪ್ರತಿ ದಿನ ಬೆಳಿಗ್ಗೆ 9 ರಿಂದ 10.30 ತನಕ ಇರುತ್ತದೆ. ಬಳ್ಳಾರಿಯ ರಾಘವೇಂದ್ರ ಟಾಕೀಸ ಪಕ್ಕದಲ್ಲಿರುವ ಸಿಂದಿಗಿ ಕಾಂಪೌಂಡ್ನಲ್ಲಿ ಏರ್ಪಡಿಸಲಾಗಿದೆ.
ಶಿಬಿರದಲ್ಲಿ ಚದುರಂಗ ಕಲಿಯುವಿಕೆ, ಫಿಡೆ ಅಂತರರಾಷ್ಟ್ರೀಯ ನಿಯಮಾವಳಿಗಳು, ಸ್ಪರ್ಧೆಯ ತಯಾರಿಕೆ, ಆಟದ ವಿವಿಧ ಹಂತದ ತಿಳುವಳಿಕೆ, ಸ್ಪರ್ಧೆಯ ವಿವಿಧ ಆಯಾಮಗಳು, ಮತ್ತು ಆಟದಲ್ಲಿ ಬಳಕೆಯಾಗುವ ತಂತ್ರಾಜ್ಞ್ಯನದ ಕುರಿತು ಹೇಳಿಕೊಡಲಾಗುವುದು.
ಆಸಕ್ತ ಕ್ರೀದಾಪಟುಗಳು ಹೆಸರನ್ನು ನೋಂದಾಯಿಸಲು, 9886497747 ರಲ್ಲಿ ಸಂಪರ್ಕಿಸಲು ಕೋರಲಾಗಿದೆ