ಮಕ್ಕಳ ನರರೋಗ ತಜ್ಞರಿಂದ ತಪಾಸಣೆ
ಬಳ್ಳಾರಿ 18: ನಗರದ ಹೊಸಪೇಟೆ ರಸ್ತೆಯಲ್ಲಿನ ಡಾ.ಸುಬ್ಬಾರಾವ್ (ಎಸ್ ಆರ್) ಆಸ್ಪತ್ರೆಯಲ್ಲಿ ಪ್ರತಿ ತಿಂಗಳ ಎರಡನೇ ಶನಿವಾರದಂದು ರೇನ್ಬೋ ಮಕ್ಕಳ ಆಸ್ಪತ್ರೆ, ಮಾರ್ಥಹಳ್ಳಿ, ಬೆಂಗಳೂರು ಇವರ ಸಹಯೋಗದೊಂದಿಗೆ ಮಕ್ಕಳ ವಿವಿಧ ನರರೋಗಗಳ ಬಗ್ಗೆ ತಪಾಸಣೆಯನ್ನು ಖ್ಯಾತ ನರರೋಗ ತಜ್ಞ ಡಾ. ಪ್ರಬ್ಜೋತ್ ಕೌರ್, ನವದೆಹಲಿ ಇವರಿಂದ 1 ತಿಂಗಳಿಂದ 18 ವರ್ಷದೊಳಗಿನ ಮಕ್ಕಳಿಗೆ ಸಂಬಂಧಿಸಿದ ವಿಳಂಬ ಬೆಳವಣಿಗೆ, ಮಾನಸಿಕ ಅಸಮರ್ಥತೆ, ಫಿಟ್ಸ್, ಇದ್ದಕ್ಕಿದ್ದಂತೆ ಬಿದ್ದುವಿಡುವುದು, ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವುದು, ಯಾವಾಗಲೂ ದುಖಃದಲಿರುವುದು ಅಥವಾ ಹೈಪರಾಕ್ಟಿವ್ ಮತ್ತು ಅಸಹಜ ವರ್ತನೆಯಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಯನ್ನು ಕೇವಲ ಐದು ನೂರು ರೂಪಾಯಿಗಳ ಶುಲ್ಕದಲಿ ಇಂದಿನಿಂದ ಪ್ರಾರಂಭಿಸಲಾಗಿದೆ. ಇದು ಪ್ರತಿದಿನ ಚಿಕಿತ್ಸೆ ಲಭ್ಯವಿರುತ್ತದೆ. ಎರಡನೇ ಶನಿವಾರ ಮಾತ್ರ ರೇನ್ಬೋ ಆಸ್ಪತ್ರೆಯ ನರರೋಗ ತಜ್ಞರು ಚಿಕಿತ್ಸೆಯನ್ನು ನೀಡುತ್ತಾರೆ.
ಇದಕ್ಕೂ ಮುಂಚೆ ಮಕ್ಕಳ ವಿವಿಧ ನರರೋಗದ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗ ಬೇಕಾಗಿತ್ತು ಆದರೆ ಈಗ ಬಳ್ಳಾರಿಯ ಎಸ್ ಆರ್ ಆಸ್ಪತ್ರೆಯಲ್ಲೆ ತಮ್ಮ ಮಕ್ಕಳಿಗೆ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ. ಜಿಲ್ಲೆಯ ಚಿಕ್ಕ ಮಕ್ಕಳ ಪೋಷಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಎಸ್.ಆರ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಕಾರ್ತಿಕ್ರವರು ಸಾರ್ವಜನಿಕ ರಲ್ಲಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಡಾ.ಲಕ್ಷ್ಮಿ ಪಾವನಿ, ಡಾ. ಕಾರ್ತಿಕ, ನಿರ್ದೇಶಕರಾದ ಸುಬ್ಬರಾವ್ ಅಸ್ಪತ್ರೆ, ಬಳ್ಳಾರಿ, ಡಾ.ಬಾಬು ರೇನ್ಬೋ ಅಸ್ಪತ್ರೆ,ಬೆಂಗಳೂರು, ಡಾ.ಸುಭಾಸ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.