ಬಳ್ಳಾರಿ

ಚಾರ್ಟರ್ಡ್‌ ಅಕೌಂಟೆಂಟ್ಸ್‌ ದಿನಾಚರಣೆ

ಚಾರ್ಟರ್ಡ್‌ ಅಕೌಂಟೆಂಟ್ಸ್‌ ದಿನಾಚರಣೆ

ಬಳ್ಳಾರಿ 01: ದಿ ಇನ್ಸ್‌ಟಿಟ್ಯೂಟ್ ಆಫ್ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಆಫ್ ಇಂಡಿಯಾ ಸಂಸ್ಥೆಯ ಬಳ್ಳಾರಿ ಶಾಖೆ ವತಿಯಿಂದ ಜುಲೈ 1ರಂದು ಸಿಎ ದಿನಾಚರಣೆ ಹಮ್ಮಿಕೊಳ್ಳಲಾಯಿತು. 

ದಿ ಇನ್ಸ್‌ಟಿಟ್ಯೂಟ್ ಆಫ್ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಆಫ್ ಇಂಡಿಯಾ ಸಂಸ್ಥೆ 1949ರ ಜುಲೈ 1 ರಂದು ಭಾರತದ ಸಂವಿಧಾನದಡಿ ಆಸ್ತಿತ್ವಕ್ಕೆ ಬಂದಿತು. ಅಂದಿನಿಂದ ಜುಲೈ 1ಅನ್ನು ಸಿಎ ದಿನವಾಗಿ ಆಚರಿಸಲಾಗುತ್ತಿದೆ. ಅಂತೆಯೇ ಈ ಸಾಲಿನಲ್ಲೂ ಸಿಎ (ಸನ್ನದು ಲೆಕ್ಕಿಗ) ದಿನದ ಆಚರಣೆ ದೇಶದಾದ್ಯಂತ ಇರುವ ಐಸಿಎಐ ಶಾಖೆಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಅದೇ ರೀತಿ ಬಳ್ಳಾರಿಯಲ್ಲೂ ಕಾರ್ಯಕ್ರಮ ರೂಪಿಸಲಾಗಿದ್ದು, ರಾಷ್ಟ್ರಮಟ್ಟದ ಕಾರ್ಯಕ್ರಮ ದೆಹಲಿಯಲ್ಲಿ ನಡೆಯಲಿದೆ ಎಂದು ವಿವರಿಸಿದರು.  

ಬಳ್ಳಾರಿ ಶಾಖೆಯ ಅಧ್ಯಕ್ಷ ಸಿಎ ಧ್ವಜಾರೋಹಣವನ್ನು ನೆರವೇರಿಸಿ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಘೋಘಿಸಿದರು. ಇದೇ ಸಂದರ್ಭದಲ್ಲಿ ಶಾಖೆಯ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ದಕ್ಷಿಣ ಭಾರತ ಪ್ರಾಂತಿಯ ಪರಿಷತ್ತಿನ ಸಿಎ ಎಸ್‌. ಪನ್ನರಾಜ್ ಅವರು ಮಾತನಾಡಿ ಸಿಎ ದಿನಾಚರಣೆ ವಿಶೇಷತೆಯ ಬಗ್ಗೆ ವಿವರಿಸಿದರು. 

ಈ ಸಂದರ್ಭದಲ್ಲಿ ಬಳ್ಳಾರಿ ಶಾಖೆಯ ಉಪಾಧ್ಯಕ್ಷ ಸಿಎ. ಬಾಗ್ರೇಚ, ಕಾರ್ಯದರ್ಶಿ ಸಿಎ. ಕೆ. ಹೊನ್ನೂರ ಸ್ವಾಮಿ, ಮಾಜಿ ಅಧ್ಯಕ್ಷರುಗಳು, ಸದಸ್ಯರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ