ಚನ್ನಪ್ಪ ಕುನ್ನೂರ ಆಂಗ್ಲ ಮಾಧ್ಯಮ ಎಸ್ಎಸ್ಎಲ್ಸಿ ಫಲಿತಾಂಶ ಶೇ. 100ರಷ್ಟು
ಲೋಕದರ್ಶನ ವರದಿ
ಶಿಗ್ಗಾವಿ 20: ಪಟ್ಟಣದ ಚನ್ನಪ್ಪ ಕುನ್ನೂರ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿಭಾಗದ 2021-22 ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಶೇಕಡಾ 100 ರಷ್ಟು ಆಗಿದ್ದು ಡಿಸ್ಟಿಂಕ್ಷನ್ 12, ಪ್ರಥಮ ದಜರ್ೆ 21, ದ್ವಿತೀಯ ದಜರ್ೆ 03, ವಿದ್ಯಾರ್ಥಿಗಳು ಸೇರಿ ಒಟ್ಟು 36 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಶಾಲೆಗೆ ಪ್ರಥಮ ಸ್ಥಾನ ಪವನ ಕರಡಿ 94 ರಷ್ಟು, ದ್ವಿತೀಯ ಸ್ಥಾನ ವೈಷ್ಣವಿ ಮಲ್ಲೂರ 93.44 ರಷ್ಟು, ತೃತೀಯ ಸ್ಥಾನ ಮಧುರಾ ಮುಖಾಶಿ 92.32 ರಷ್ಟು, ಚತುರ್ಥ ಸ್ಥಾನ ಶಶಾಂಕ ಹೊಟ್ಟಿಗೌಡರ 90.56ರಷ್ಟು, ಪಂಚಮ ಸ್ಥಾನ ಸಂಗಮೇಶಗೌಡ ಪಾಟೀಲ 90.24 % ಪ್ರತಿಶತ ಪಡೆದು ವಿಧ್ಯಾಲಯಕ್ಕೆ ಕೀತರ್ಿ ತಂದಿದ್ದಾರೆ.
ಸಂಸ್ಥೆಯ ಸಂಸ್ಥಾಪಕ ಮಾಜಿ ಸಂಸದ ಮಂಜುನಾಥ ಕುನ್ನೂರ, ಗೌರವ ಕಾರ್ಯದಶರ್ಿ ರಾಜು ಎಂ ಕುನ್ನೂರ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು, ಮುಖ್ಯೋಪಾಧ್ಯಾಯ ಎಸ್.ಹೆಚ್.ಹಾವೇರಿ ಸೇರಿದಂತೆ ಶಿಕ್ಷಕರು ಹಾಗೂ ಸಿಬ್ಬಂದಿಗಳು ವಿದ್ಯಾಥರ್ಿಗಳಿಗೆ ಅಭಿನಂದಿಸಿದ್ದಾರೆ