ಶಿಗ್ಗಾವ್

ಧಾನ ಧರ್ಮದಲ್ಲಿ ಮಾಡುವದರಲ್ಲಿ ಸಿಗುವ ಸುಖ ಸಂಪತ್ತು ಕೂಡಿಡುವುದರಲ್ಲಿ ಸಿಗುವುದಿಲ್ಲ : ಶಶಿಧರ ಯಲಿಗಾರ

ಧಾನ ಧರ್ಮದಲ್ಲಿ ಮಾಡುವದರಲ್ಲಿ ಸಿಗುವ ಸುಖ ಸಂಪತ್ತು ಕೂಡಿಡುವುದರಲ್ಲಿ ಸಿಗುವುದಿಲ್ಲ : ಶಶಿಧರ ಯಲಿಗಾರ

ಶಿಗ್ಗಾವಿ 23: ಧಾನ ಧರ್ಮ ಮಾಡುವದರಲ್ಲಿನ ಸುಖ ಸಂಪತ್ತು ಕೂಡಿಡುವದರಿಂದ ಸಿಗುವದಿಲ್ಲ, ನಾವು ಮಾಡುವ ಕೆಲಸ ಮತ್ತೊಬ್ಬರಿಗೆ ಸ್ಪೂರ್ತಿಯಾದರೆ ನಮ್ಮ ಕೆಲಸ ಸಾರ್ಥಕತೆಯನ್ನು ಪಡೆದಂತೆ  ಎಂದು ಸಿಬಿ ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಹೇಳಿದರು.

ತಾಲೂಕಿನ ಗಂಗೇಬಾವಿಯಲ್ಲಿನ ಅವರ ಹೋಮ್ ಸ್ಟೇನಲ್ಲಿ ದಿ ಚನ್ನಬಸಪ್ಪ ಬಸವಣ್ಯೆಪ್ಪ ಯಲಿಗಾರ ಇವರ ಪ್ರಥಮ ವರ್ಷದ ಸ್ಮರಣೋತ್ಸವದ ಅಂಗವಾಗಿ ಸಿ ಬಿ ಯಲಿಯಾರ ಸೇವಾ ಸಂಸ್ಥೆ ಗಂಗೇಭಾವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾವೇರಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಾರ್ಯಾಲಯ ಹಾವೇರಿ, ತಾಲೂಕಾ ಆಸ್ಪತ್ರೆ ಶಿಗ್ಗಾವಿ, ತಾಲೂಕಾ ವೈಧ್ಯಾಧಿಕಾರಿಗಳ ಕಾರ್ಯಾಲಯ ಶಿಗ್ಗಾವಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ ಅಂಗವಾಗಿ 1000 ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರ ಡಬ್ಬ ವಿತರಣೆ ಹಾಗೂ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೊರೊನಾ ಬಂದು ಪುನರಜನ್ಮ ಪಡೆದಿದ್ದೇನೆ ಅಂದಿನಿಂದ ಸನ್ಮಾನ, ಸಹಾಯ ಮಾಡುವ ಕಾರ್ಯವನ್ನು ಮಾಡುತ್ತಿದ್ದೇನೆ ಬಿಟ್ಟು ಹೋಗುವ ಬದಲು ಕೊಟ್ಟು ಹೋಗುವದು ಒಳ್ಳೆಯ ಕಾರ್ಯವೆಂದು ತಿಳಿದು ಕೊರೋನಾ ವಾರಿಯರ‍್ಸಗೆ ಹಾಗೂ ವೈದ್ಯ್ಯರಿಗೆ ಸನ್ಮಾನ ಜೊತೆಗೆ ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರ ವಿತರಣೆ ಕಾರ್ಯ ಮಾಡಲಾಗುತ್ತಿದ್ದು ಇಂತಹ ಕಾರ್ಯಗಳನ್ನು ಮುಂದುವರೆಸಿಕೊಂಡು ಹೊಗುತ್ತೇನೆ ಮತ್ತು ತಾಲೂಕಿನಲ್ಲಿ ಶಿಥಿಲಿಗೊಂಡ ಶಾಲೆಯನ್ನು ದತ್ತು ಪಡೆದು ಅದನ್ನು ಮಾದರಿ ಶಾಲೆಯನ್ನಾಗಿಸುವ ಗುರಿ ಹೊಂದಿದ್ದೇನೆ ಈ ಉದ್ದೇಶದಿಂದ ನಾನು ಶಾಲೆಯನ್ನು ಕೇಳಿದ್ದು ಇಲ್ಲಿವರೆಗೂ ಕೊಟ್ಟಿಲ್ಲ ಕೊಟ್ಟರೆ ಮಾಧರಿ ಶಾಲೆಯನ್ನು ಮಾಡುವೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಸ್.ರಾಘವೇಂದ್ರಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪಿ.ಆ .ಹಾವನೂರ, ಜಿಲ್ಲಾ ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ. ಸುರೇಶ ಪೂಜಾರ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.  ನಿಲೇಶ ಎಂ.ಎನ್, ತಾಲೂಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಹನುಮಂತಪ್ಪ ಪಿ.ಹೆಚ್, ರೈತದ್ವನಿ ಟಿ ವಿ ಸಂಪಾದಕ ಬಸವರಾಜ ಕುರಗೋಡಿ ಮಾತನಾಡಿದರು.

ಕಾರ್ಯಕ್ರಮದಲ್ಲಿ 10 ಕ್ಷಯರೋಗಿಗಳಿಗೆ ಸಾಂಕೇತಿಕವಾಗಿ ವಿತರಣೆ ಮಾಡಿ ನಂತರ ಪೌಷ್ಠಿಕ ಆಹಾರ ಡಬ್ಬವನ್ನು ಜಿಲ್ಲಾ ಕ್ಷಯರೋಗ ನಿಯಂತ್ತಣಾಧಿಕಾರಿ ಡಾ. ನಿಲೇಶ ಅವರಿಗೆ ಶಶಿಧರ ಯಲಿಗಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ತಾಲೂಕ ಆರೋಗ್ಯಾಧಿಕಾರಿ ಡಾ. ಹನುಮಂತಪ್ಪ ಕುಡಚಿ, ಶ್ರೀಕಾಂತ ಸರ್ಜಾಪೂರ, ಮಲ್ಲಿಕಾರ್ಜುನಸ್ವಾಮಿ, ಲಕ್ಷ್ಮಣ , ದೀಪಾ, ಆನಂದ ಹಿರೇಗೌಡರ, ಮೋಹನ, ಕುಮಾರ, ಕಿರಣ ಸೇರಿದಂತೆ ಕ್ಷಯರೋಗಿಗಳು ಉಪಸ್ಥಿತರಿದ್ದರು.

ಸುದ್ದಿ ಓದಿ