ಬಳ್ಳಾರಿ

ಜಿಲ್ಲಾ ಗೃಹರಕ್ಷಕರ ತಂಡಕ್ಕೆ ವಿವಿಧ ಕ್ರೀಡೆಗಳಲ್ಲಿ ಚಾಂಪಿಯನ್ ಶಿಪ್

ಜಿಲ್ಲಾ ಗೃಹರಕ್ಷಕರ ತಂಡಕ್ಕೆ ವಿವಿಧ ಕ್ರೀಡೆಗಳಲ್ಲಿ ಚಾಂಪಿಯನ್ ಶಿಪ್

ಬಳ್ಳಾರಿ,ಡಿ.8 : ಬಳ್ಳಾರಿ ಜಿಲ್ಲೆಯ ಗೃಹರಕ್ಷಕರ ಈಶಾನ್ಯ ವಲಯ ತಂಡವು “ಕರ್ನಾಟಕ ರಾಜ್ಯದ ಗೃಹರಕ್ಷಕರ ವೃತ್ತಿಪರ ಮತ್ತು ಆಟೋಟಗಳ ಸ್ಪರ್ಧೆ”ಗಳಲ್ಲಿ ಚಾಂಪಿಯನ್ ಶಿಪ್ ಪಡೆದಿರುತ್ತದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಗೃಹರಕ್ಷಕದಳದ ಸಮಾದೇಷ್ಟರಾದ ಎಂ.ಎ.ನಟರಾಜ್ ಅವರು ತಿಳಿಸಿದ್ದಾರೆ. 

ಬೆಂಗಳೂರಿನ ಗೃಹರಕ್ಷಕ ಮತ್ತು ಪೌರ ರಕ್ಷಣಾ ತರಬೇತಿ ಅಕಾಡೆಮಿ ಮತ್ತು ಆರ್‌.ಎಂ.ಮುಂಡ್ಕೂರು ಅಗ್ನಿಶಮನ ತರಬೇತಿ ಅಕಾಡೆಮಿಯಲ್ಲಿ 07 ದಿನಗಳ ಕಾಲ ನಡೆದ “ಗೃಹರಕ್ಷಕರ ರಾಜ್ಯ ಮಟ್ಟದ ವೃತ್ತಿಪರ ಹಾಗೂ ಕ್ರೀಡಾಕೂಟ”ದಲ್ಲಿ ಬಳ್ಳಾರಿ ಜಿಲ್ಲೆಯ ಗೃಹರಕ್ಷಕರ ಈಶಾನ್ಯ ವಲಯ ತಂಡವು ಕ್ರೀಡಾಕೂಟದಲ್ಲಿ ಭಾಗವಹಿಸಿ ಗೃಹರಕ್ಷಕರ ವೃತ್ತಿಪರ ಸ್ಪರ್ಧೆಗಳಾದ ಅಗ್ನಿಶಮನ, ರೈಫ್‌ಲ್ ಸಹಿತ ಸ್ಕಾ-್ವಡ್ ಡ್ರಿಲ್‌ನಲ್ಲಿ ಪ್ರಥಮ ಸ್ಥಾನ ಹಾಗೂ ಲೈಟ್ ರೆಸ್ಕ್ಯೂ, ಪ್ರಥಮ ಚಿಕಿತ್ಸೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಮತ್ತು ಆಟೋಟಗಳಾದ ಕಬಡ್ಡಿ, ಮಹಿಳೆಯರ 100 ಮೀಟರ್ ಓಟ ಮತ್ತು 4*100 ರಿಲೆ, ಪುರುಷರ ಉದ್ದ ಜಿಗಿತ, ಗುಂಡು ಎಸೆತ ಪ್ರಥಮ ಸ್ಥಾನ ಮತ್ತು ಪುರುಷರ 4*100 ರಿಲೆ, ವಾಲಿಬಾಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿ ಚಾಂಪಿಯನ್ ಶಿಪ್ ಪಡೆದಿರುತ್ತದೆ. ಜಿಲ್ಲೆಗೆ ಕೀರ್ತಿ ತಂದಿರುವ ಗೃಹರಕ್ಷಕರ ದಳದ ಬಿ.ಕೆ.ಬಸವಲಿಂಗ ಮತ್ತು ಹೆಚ್‌.ಲಕ್ಷ್ಮೀನಾರಾಯಣ ಇವರ ತಂಡದ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. 


ಸುದ್ದಿ ಓದಿ