ಲೇಖನಗಳು

ಹೊಸ ಶಿಕ್ಷಣ ನೀತಿಯ ಸವಾಲುಗಳು

ಹೊಸ ಶಿಕ್ಷಣ ನೀತಿಯ ಸವಾಲುಗಳು

ಕೇಂದ್ರಸರಕಾರ  ಮುವತ್ನಾಲ್ಕು ವರುಷಗಳ ನಂತರ ಹೊಸ ಶಿಕ್ಷಣ ನೀತಿಯೊಂದನ್ನು ಪಾಸುಮಾಡಿ. ಈ  ಶೈಕ್ಷಣಿಕ ವರುಷದಿಂದ ಅನುಷ್ಠಾನಗೊಳಿಸಲಿದೆ. ಈ ಶಿಕ್ಷಣ ನೀತಿಯ ಮುಖ್ಯ ಉದ್ದೇಶ ವಿದ್ಯಾಥರ್ಿಗಳಲ್ಲಿ  ಆಲೋಚನಾ ಶಕ್ತಿ, ಜ್ಞಾನ, ಚೈತನ್ಯ, ಕೌಶಲ್ಯಾಭಿವೃದ್ಧಿ ಮತ್ತು ಜವಾಬ್ದಾರಿಯನ್ನು ಹೆಚ್ಚಿಸಿ ಪೂರ್ಣ ವ್ಯಕ್ತಿತ್ವ ರೂಪಿಸುವುದಾಗಿದೆ.

     ಆ ಸಂಬಂಧ. ಸಂಶೋಧನೆ ಮತ್ತು ಹೊಸ ಬದಲಾವಣೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ..ಶಿಕ್ಷಣ ರಂಗದಲ್ಲಿ ಹೊಸತನವ್ನು ಅಳವಡಿಸಲು  ಕಲಿಕೆ,ಜ್ಞಾನಸಂಪಾದನೆ ಮತ್ತು ಮೌಲ್ಯಾಂಕನ ಕ್ರಮಗಳನ್ನು ಅಳವಡಿಸಲಾಗಿದೆ.ಹಿಂದಿನ 10+2 ಶಿಕ್ಷಣ ಪದ್ಧತಿಯನ್ನು ತೆಗೆದು ಶಿಕ್ಷಣ ನೀತಿಯನ್ನು 5+3+3+4 ಎಂದು  ನಾಲ್ಕು ಹಂತವಾಗಿ ವಿಂಗಡಿಸಿರುತ್ತಾರೆ..ಅದರಲ್ಲಿ 5 ವರ್ಷದ  ವರೆಗೆ ಪೂರ್ವ ಶಾಲೆ,6 ರಿಂದ 8 ಮಧ್ಯಂತರ ಶಾಲೆ, 9 ರಿಂದ 11 ಫ್ರೌಢ ಶಾಲೆ ಮತ್ತು 12 ರಿಂದ ಪದವಿ          ಪದವಿ ಶಿಕ್ಷಣವು ಒಟ್ಟು ನಾಲ್ಕು ವರುಷದಾಗಿರುತ್ತದೆ. ಎಲ್ಲಾ ಪದವಿ ಕೋಸರ್್ಗಳಿಗೆ ಮೇಜರ್ ಮತ್ತು  ಮೈನರ್ ವಿಷಯಗಳು ಇರುತ್ತವೆ. ವಿದ್ಯಾಥರ್ಿಗಳು ಯಾವದೆ ಸಂಯೋಜನೆಯನ್ನು  ಆಯ್ಕೆಮಾಡುವ ಮತ್ತು 6ನೆ ತರಗತಿಯಿಂದ  ವೃತ್ತಿಪರ ಕೊಸರ್್ಗೆ ಅವಕಾಶ.ನೀಡಿರುವ ಪ್ರಕ್ರಿಯೆ ಸ್ವಾಗತಾರ್ಹ.

ಹಾಗೇನೆ ಹೊಸ ಶಿಕ್ಷಣ ನೀತಿಯ ಸಂಚಾಲಕರು ಪಠ್ಯವನ್ನು ನಿಮರ್ಿಸುವಾಗ ಸದ್ಯ ಇರುವ ಎಲ್ಲಾ ಸಾಮಾನ್ಯ ವಿಷಯಗಳ ಜತೆಯಲ್ಲಿಯೆ ವಿವಿಧ ಭಾಷೆಗಳು, ಸಂಗೀತ, ತತ್ವಶಾಸ್ತ್ರ, ಕಲೆ, ನೃತ್ಯ, ರಂಗಭೂಮಿ, ಶಿಕ್ಷಣ, ಸಮಾಜ ಶಾಸ್ತ್ರ, ಅರ್ಥಶಾಸ್ತ್ರ, ಕ್ರೀಡೆ, ಅನುವಾದ, ವ್ಯಾಖ್ಯಾನ, ಮುಂತಾದ  ವಿಷಯಗಳನ್ನು ಅಳವಡಿಸಿರುವದು ವಾಸ್ತವಿಕತೆಯ ಲಕ್ಷಣ. ಕಾರಣ ಇಷ್ಟು ವರುಷ ವಿದ್ಯಾಥರ್ಿಗಳಿಗೆ ತಮ್ಮ ಇಷ್ಟದ ವಿಷಯಗಳ ಆಯ್ಕೆಗೆ ಅವಕಾಶಗಳೆ ಪಡುವ ಬಹಳಷ್ಟು ವಿಷಯಗಳು ಕಡ್ಡಾಯವಾದವುಗಳಾಗಿದ್ದವು.ಹಾಗೇನೆ ಅದರಿಂದಾಗಿ ಶಾಲೆ ಬಿಡುವವರ ಸಂಖ್ಯೆ ಕೂಡ ಹೆಚ್ಚಿಗೆನೆ ಇತ್ತು.ಇನ್ನು ಮುಂದೆ ಈ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು. ಐದನೆಯ ತರಗತಿಯ ವರೆಗೆ ಮಾತ್ರಭಾಷೆಯಲ್ಲಿಯೆ ಶಿಕ್ಷಣ ನೀಡುವ ಪ್ರಸ್ತಾಪ ನಿಜವಾಗಿಯು ಒಳ್ಳೆಯದೆನಿಸುತ್ತದೆ. ಅದರಿಂದಾಗಿ ವಿದ್ಯಾಥರ್ಿಗಳಿಗೆ ವಿಷಯದ ಪರಿಪೂರ್ಣಜ್ಞಾನ ಸಿಗುವದು.

ಗ್ಯಾರಂಟಿ ಬಡ ವಿದ್ಯಾಥರ್ಿಗಳ ಅನುಕೂಲತೆಯ ದೃಷ್ಟಿಯಿಂದ ಪದವಿ ವ್ಯಾಸಂಗ ಮಾಡುವವರಿಗೆ  ಶೈಕ್ಷಣಿಕ ಸಾಲದ ವ್ಯವಸ್ಥೆಯನ್ನು ಮಾಡಿರುವದು ತುಂಬಾ ಅನುಕೂಲಕರ.ಹಾಗಾಗಿ ಬಡತನದಿಂದಾಗಿ ತಮ್ಮ ಇಷ್ಟದ ಕೋಸರ್್ ಮಾಡಲಾಗದೆ  ಆಸಕ್ತಿ ಇಲ್ಲದ ಶಿಕ್ಷಣವನ್ನು ಮುಂದು ವರೆಸಿ ಪಶ್ಚಾತಾಪಪಡುವ ಪರಿಸ್ಥಿತ ಈಗ ಒದಗಿ ಬರಲಾರದು ಅದರಂತೆಯೆ ಮೊದಲಿನ ಹಾಗೆ ಪಠ್ಯಕ್ರಮ ಇಲ್ಲದಿರುವುದರಿಂದ ಮತ್ತು ಕೇವಲ ಮುಖ್ಯ ವಿಷಯಗಳಿಗೆ ಮಾತ್ರ ಸಂಭಂಧ ಪಟ್ಟಿರುವುದರಿಂದ ಮಣ ಭಾರ ಚೀಲ ಹೊತ್ತು ಶಾಲೆಗೆ ಹೋಗುವ  ಭಯವಿಲ್ಲ. ಇದು ಮಕ್ಕಳಲ್ಲಿ ಶಾಲೆಗೆ ಹೋಗುವ ಉತ್ಸಾಹವನ್ನು ಹೆಚ್ಚಿಸುವುದರಲ್ಲಿ ಸಂದೇಹವೆ ಇಲ್ಲ.

ಇನ್ನು 2025 ರ ಹೊತ್ತಿಗೆ ಶಾಲೆ ಕಾಲೇಜುಗಳಲ್ಲಿ ಕಲಿಯುವ ಶೇ.50 ರಷ್ಟು ವಿದ್ಯಾಥರ್ಿವೃಂದ ವೃತ್ತಿಪರ ಶಿಕ್ಷಣಕ್ಕೆ ಹೊಂದಿಕೊಳ್ಳುವರೆಂಬ ಭರವಸೆಯನ್ನು ಇರಸಿಕೊಳ್ಳಲಾಗಿದೆ.ಶಿಕ್ಷಣ ನೀತಿಯು 2030 ರ ನಂತರ  ಜಿಲ್ಲೆಗೊಂದರಂತೆ ಬಹು ಶಿಸ್ತಿನ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡುವ ಉದ್ದೇಶ ಹೊಂದಿದೆ.ಅದರಿಂದಾಗಿ ವೃತ್ತಿಪರ ಶಿಕ್ಷಣವನ್ನು  ಮುಂದಿನ ದಶಕಗಳಲ್ಲಿ ಎಲ್ಲಾ ಶಾಲೆ ಮತ್ತುಉನ್ನತ ಶಿಕ್ಷಣಸಂಸ್ಥೆಗಳಲ್ಲಿಹಂತ ಹಂತವಾಗಿ ಅಳವಡಿಸುವ ಗುರಿ ಇದೆ...ಅದರಂತೆಯೆ 2040 ರ ಹೊತ್ತಿಗೆ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು  ಬಹು ಶಿಸ್ತಿನ ಸಂಸ್ಥೆಗಳಾಗಿ ಮಾರ್ಪಡುವುದರಲ್ಲಿ ಸಂದೇಹವೆ ಇಲ್ಲ.ಆಗ ಎಲ್ಲಾ ಜಿಲ್ಲೆಗಳು ಉನ್ನತ ಶಿಕ್ಷಣದ ಸೌಲಭ್ಯ ಹೊಂದುವುದರಿಂದ ಶಿಕ್ಷಣರಂಗದಲ್ಲಿ ಒಂದು ಕ್ರಾಂತಿಕಾರಕ ಬದಲಾವಣೆ ಉಂಟಾಗುವದು. ನಿಶ್ಚಯ. ಅದು ವಿಶ್ವ ವಿದ್ಯಾಲಯಗಳ ವಿಕೇಂದ್ರಿಕರಣ ಮಾಡುವುದರಿಂದ ಶಿಕ್ಷಣರಂಗದಲ್ಲಿ ಹೆಚ್ಚಿನ ಪಾರದರ್ಶಕತೆಗೆ ತುಂಬಾ ಅವಕಾಶ.

ಇದರಲ್ಲಿ  ಹೊಸ ಬದಲಾವಣೆ ಏನೆಂದರೆ ಪೋಷಕಕರಿಗಾಗಿಯೆ ತಮ್ಮ ಮಕ್ಕಳನ್ನು ಮೂರುವರುಷಗಳಿಂದ ಹಿಡಿದು 6 ರ ವರೆಗೆ ಕಲಿಸುವ ಸಲುವಾಗಿ. ಒಂದು ಹೊಸ ಮೂಲಭೂತ ಕಲಿಕೆಯ ಕಾರ್ಯಕ್ರಮವಿದೆ.  ಅದರಿಂದ ವಿಧಿತವಾಗುವುದೇನೆಂದರೆ ಮನೆಯೆ ಮೊದಲು ಪಾಠ ಶಾಲೆ ಜನನಿ ತಾನೆ  ಮೊದಲ ಗುರು ಎಂಬ ಹಾಡಿನ ಧ್ವನಿ ಪುನ: ಮರುಕಳಿಸಲಿದೆ.

     ಪದವಿಯಲ್ಲಿ ವಿದ್ಯಾಥರ್ಿಗಳ ಆಸಕ್ತಿಗನುಗುಣವಾಗಿ ವಿಷಯದ ಆಯ್ಕೆಗೆ ಅವಕಾಶವಿದೆ. ಹಾಗಾಗಿ ಯಾವದೆ ಒತ್ತಾಯದ ಓದಿಗೆ ಕಡಿವಾಣ ಬಿದ್ದಿರುವುದರಿಂದ ವಿದ್ಯಾಥರ್ಿಗಳಿಗೆ ಸಂಪಾದಿಸಿದ ಜ್ಞಾನವನ್ನು ಕೊನೆತನಕ ರೂಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಅದರಲ್ಲಿ ಒಂದು ಮೇಜರ್ ಮತ್ತು. ಒಂದು ಮೈನರ್. ಆ ತರಹದ ಸಂಯೋಜನೆಯಲ್ಲಿ ಯಾವುದೇ ವಿಷಯವನ್ನು ಆಯ್ಕೆ ಮಾಡಬಹುದು. ಉದಾ ಓರ್ವ ಅರ್ಥಶಾಸ್ತ್ರವನ್ನು ಮುಖ್ಯ ವಿಷಯವನ್ನಾಗಿ ಆಯ್ದುಕೊಂಡರೆ ಮೈನರ್ ಎಂದು ಆಟೋಟ ಅಥವಾ ರಂಗಭೂಮಿಯನ್ನು  ಕೂಡ ಆಯ್ದುಕೊಳ್ಳಬಹುದು.  

ಹಾಗೇನೆ  ಯಾವದೇ ವಿದ್ಯಾಥರ್ಿ ಡ್ರಾಪೌಟ್ ಆದರೆ ತೊಂದರೆಯಾಗಲಾರದು. ಕಾರಣ. ಯಾವುದೆ ಪದವಿ ಪರೀಕ್ಷೆಯಲ್ಲಿ ವಿದ್ಯಾಥರ್ಿ ಒಂದು ವರುಷ ಮುಗಿಸಿದರೆ ಅವನಿಗೆ ಬೇಜಿಕ್ ಪ್ರಮಾಣಪತ್ರವನ್ನು, ಎರಡು ವರುಷ ಮುಗಿಸಿದರೆ ಡಿಪ್ಲೋಮಾ ಪ್ರಮಾಣಪತ್ರ ಮತ್ತು ಮೂರು ವರುಷ ಮುಗಿಸಿದರೆ ಪದವಿ ಸಟರ್ಿಫಿಕೆಟ್ ನೀಡಲಾಗುವದು.ಹೊಸ ಶಿಕ್ಷಣ ನೀತಿಯಲ್ಲಿ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವದು ಸ್ವಾಗತಾರ್ಹ.ಅದರಂತೆಯೆ ಆಟೋಟ ಮತ್ತು ಪ್ರಾಯೋಗಿಕ ಕಲಿಕೆಗೆ ಬಹಳೆ ಮಹತ್ವ ಕೂಟ್ಟಿರುವುದು ವಿದ್ಯಾಥರ್ಿಗಳಲ್ಲಿ ಕಲಿಕೆಯಲ್ಲಿ ಆಸಕ್ತಿ,ಮತ್ತು ಕಲಿಯುವ ಹುಮ್ಮಸ ಹೆಚ್ಚುವವುದರಲ್ಲಿ ಸಂದೇಹವೆ ಇಲ್ಲ. ಎಲ್ಲಾ ತರಗತಿಗಳಿಗೂ ಎರಡು ಸೆಮಿಸ್ಟರ್ ಪರೀಕ್ಷೆ ಕಡ್ಡಾಯ. ಅದರಿಂದಾಗಿ ವಿದ್ಯಾಥರ್ಿಗಳಲ್ಲಿಯ ನಿಜವಾದ ಪ್ರತಿಭೆ ಹೊರತರಲು ಶಕ್ಯ.

ಚಿಕ್ಕ ಮಕ್ಕಳ ಪ್ರಗತಿ ವರದಿಯಲ್ಲಿ ಅವರ ಜೀವನ ಕೌಶಲ್ಯವನ್ನು ಸೇರಿಸುವ ಕಾರ್ಯಕ್ರಮದಿಂದಾಗಿ ಕೇವಲ ಓದಿಗಷ್ಟೆ ಮಕ್ಕಳಲ್ಲಿ ಶಿಕ್ಷಣ ಸೀಮಿತವಾಗಿರದಂತೆ ನಿಮರ್ಿಸಲಾಗಿದೆ..ಅದರಂತೆ 2030 ನೇ ಇಸ್ವಿಯ ಒಳಗಾಗಿ ಎಲ್ಲಾ ಮಕ್ಕಳಿಗೂ ಶಿಕ್ಷಣ ನೀಡುವದು ಒಂದು ಧೋರಣೆಯಾಗಿದೆ.ಶಿಕ್ಷಣ ನೀತಿಯ ವಿಶೇಷತೆ ಏನೆಂದರೆ ಶಾಲಾ ಮಕ್ಕಳಿಗೆ ಮುಂಜಾವಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಇರುತ್ತದೆ.ಅದರಿಂದಾಗಿ ಶಾಲೆಗೆ ವಿಳಂಬವಾಗಿ ತಲುಪುವ ಪ್ರಮೇಯ ತಪ್ಪುವದು. ಹೀಗೆ ಹೊಸ ಶಿಕ್ಷಣ ನೀತಿಯಿಂದ ಸರಕಾರ ಈಡೇರಿಸಲಿರುವ ಉದ್ಧೇಶಗಳನ್ನು ಹೀಗೆ ಪಟ್ಟಿಮಾಡಬಹುದೇನೋ?

* ಕೌಶಲ್ಯವನ್ನು ಹೆಚ್ಚಿಸಿ ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಆಸ್ಪದ ನೀಡುವದು.  

* ಶಿಕ್ಷಣವನ್ನು ಆದಷ್ಟು ಆಧುನಿಕ, ವೃತ್ತಿಪರ ಮತ್ತು ಪ್ರಾಯೋಗಿಕವಾಗಿರುವಂತೆ ನೋಡಿಕೊಳ್ಳುವದು

* ವಿದ್ಯಾಥರ್ಿಗಳಲ್ಲಿ ಶ್ರಮ ಗೌರವ ಭಾವನೆಯನ್ನು ಉದ್ದೀಪನ ಗೊಳಿಸುವದು.. 

* ನಿರುದ್ಯೋಗ ಸಮಸ್ಯೆಗೆ ಪೂರ್ಣ ವಿರಾಮ ಹಾಕುವದು. 

* ವಿದೇಶಿದಲ್ಲಿ ಸಿಗುವ ಶಿಕ್ಷಣವನ್ನು ನಮ್ಮಲ್ಲಿಯೆ ಒದಗಿಸುವದು. ಮತ್ತು                                                                                                  * ಪ್ರಗತಿ ಪಥದಲ್ಲಿ ಶಿಕ್ಷಣವೆ ಒಂದು ಶಕ್ತಿ ಎಂದು ಪರಿಗಣಿಸಿ ಪ್ರೋತ್ಸಾಹಿಸುವದು.

ಹೀಗೆ ಹೊಸ ಶಿಕ್ಣಣ ನೀತಿಯು ಹಿಂದೆ ಇದ್ದ  ಹಲವಾರು ದೋಷಪೂರಿತ ಕಲಿಕೆಗೆ ತಿಲಾಂಜಲಿ ಇತ್ತಿದೆ. ಅಷ್ಟೆ ಅಲ್ಲ  ವಿದ್ಯಾಥರ್ಿವೃಂದಕ್ಕೆ  ಒಂದು ಉದಾರ ಕಲೆಗಳ ಪದವಿ ಗಿಟ್ಟಿಸಲು ತುಂಬಾ ಅನುಕೂಲಕರವಾಗಿದೆ ಅಂತ ಹೇಳಬಹುದು. ಮತ್ತು ಶಿಸ್ತುಭರಿತ,. ಆಧುನಿಕ, ವೈಜ್ಞಾನಿಕ, ವೃತ್ತಿಪರ,  ಮತ್ತು ವಾಸ್ತವಿಕ ವಿಷಯಗಳನ್ನು ಒಳಗೊಂಡ ಒಂದು ಸುಂದರ ಕರಡು ಪತ್ರವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದಗರೆ ಕೆಲವರು ಈ ಶಿಕ್ಷಣ ನೀತಿಯ ಕರಿತು ಈಗ ಅಂದರೆ ಎಣ್ಣೆ ಬರುವಾಗ ಗಾಣ ಮುರಿದರು ಎಂಬ ಗಾದೆಯಂತೆ ತಕರಾರು ಮಾಡುತ್ತಿರುವದು ಸರಿಯಲ್ಲ.ಈ ಒಂದು ಶಿಕ್ಷಣ ನೀತಿಯನ್ನು ಹಲವಾರು ಶಿಕ್ಷಣ ತಜ್ಞರು ಕೂಡಿ ಮಾಡಿದ್ದು ಇತುತ್ತದೆ ವಿದ್ಯಾಥರ್ಿಗಳ ಸರ್ವತೋಮುಖ ಅಭಿವೃದ್ಧಿಯನ್ನು ಬಿಟ್ಟು ಈ ಕರಡುಜ್ಯಕ್ಕು, ನೀತಿಯಲ್ಲಿ ಬೇರೆ ಯಾವದೆ ಉದ್ದೇಶವಿಲ್ಲ. ಆದರು ಕೂಡ ಕೆಲವು ಶಡ್ಯಂತ್ರ ನಡೆಸುತ್ತಿರುವದು ಕಂಡು ಬಂದಿದೆ.

ನಮ್ಮವರದೆ ಆದ ಬಾಹ್ಯಕಾಶ ವಿಜ್ಞಾನಿ ಮತ್ತು ಅವರ ತಂಡದವರ ಸುಮಾರು ಐದುವರೆ ವರ್ಷಗಳ ಅವಿರತ ಶ್ರಮದ ಫಲದಿಂದ ಈ ಒಂದು ಶಿಕ್ಷಣ ನೀತಿ ಮೂರ್ತರೂಪ ತಳೆದಿದೆ. ಅವರಾದೂ ಈ ಒಂದು ಕರಡು ನೀತಿಯನ್ನು ತಮ್ಮಷ್ಟಕ್ಕೆ ತಾವೆ ತಯರಿಸದೆ ಸುಮಾರು ಮೂರು ಲಕ್ಷಕ್ಕಿಂತ ಹೆಚ್ಚಿನ ಪರಿಣತರ ಸಲಹೆ ಸೂಚನೆಗಳನ್ನು ಬಳಸಿ ಸಿದ್ದಪಡಿಸಿದ ನೀತಿಯ ಗುಚ್ಚವಿದು. ಆದರೂ ಕೆಲ ವಿರೋಧಪಕ್ಷದ ನಾಯಕರು ಈ ಕುರಿತು ವಿಚಾರಮಾಡದೆ ಅದೊಂದು ಕೇಶರಿಕರಣದ ನೀತಿಗೆ ಸಾಕ್ಷಿ ಎಂದು ತೆಗಳಿರುವದು ಅಂತವರ ಅಜ್ಞಾನದ ಪರಮಾವಧಿಯನ್ನು ತೋರಿಸುತ್ತದೆ.

ಇನ್ನೂ ಕೆಲವರು ಶಿಕ್ಷಣ ನೀತಿಯನ್ನು ಹರಾತುರಿಯಲ್ಲಿ ಜಾರಿಗೆ ತರಲಾಗುತ್ತಿದೆ ಅಂತ ಹೇಳುತ್ತಿದ್ದಾರೆ. ಲಭ್ಯವಿರುವ ಮಾಹಿತಿಯಂತೆ 2019 ರಲ್ಲಿಯೇ ಶಿಕ್ಷಣ ನೀತಿಯನ್ನು ಅಂತಿಮಗೊಳಿಸಿ 2021ರಿಂಲೆ ಅನುಷ್ಟಾನಕ್ಕೆ ತರುವ ಕುರಿತು ಸುತ್ತೋಲೆಯನ್ನು ಹೊರಡಿಸಲಾಗಿದೆ.

ಆ ನಿಟ್ಟಿನಲ್ಲಿ ಕನರ್ಾಟಕ ಸರಕಾರವು 2020 ರಿಂದಲೆ ಸಂಪೂರ್ಣ ತಯರಿ ನಡೆಸಿ ಅಗಷ್ಟ 2021ರಿಂದಲೆ ಅನುಷ್ಟಾನಗೊಳಿಸಿದೆ.

ಯಾರಾದರೂ ಈ ಶಿಕ್ಷಣ ನೀತಿಯು ಪರಾವಲಂಭನೆಯನ್ನು ಮುಂದುವರೆಸುವ ಶಿಕ್ಷಣ ನೀತಿ ಅಂತ ಟೀಕಿಸಿದ್ದೆ ಆದರೆ ಅವರಷ್ಟು ಅಜ್ಞಾನಿಗಳು ಬೇರೊಬ್ಬರಿಲ್ಲ ಅಂತ ಘಂಟಾಘೋಷವಾಗಿ ಹೇಳಬಹುದು.

ಇದು ಬಹಳೆ ಪಾರದರ್ಶಕ, ವಿದ್ಯಾಥರ್ಿಗಳಿಗೆ ಪ್ರೋತ್ಸಾಹದಾಯಕ, ಮತ್ತು ಅವರ ಮನಸ್ಥಿತಿಗೆ ಹೊಂದುವಂತಹದು. ಇರುತ್ತದೆ ಆದುದರಿಂದ ಆ ಕುರಿತು ಅನಾವಶ್ಯಕವಿರೋಧ ವ್ಯಕ್ತ ಪಡಿಸುವುದರಲ್ಲಿ ಅರ್ಥವಿಲ್ಲ. ನಮ್ಮ ಶಿಕ್ಷಣತಜ್ಞರು ಈ ಒಂದು ಸಂಹಿತೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಿರುವುದರಿಂದ ಬ್ರಿಟಿಷ ಅಧಿಕಾರಿ ಮೆಕೆಲೆ ಯವರ ಯಾವ ತತ್ವವು ಇಲ್ಲಿ ಇಲ್ಲ. ಅಂದಾವಾಗ ಅನವಶ್ಯಕ ವಾದವಿವಾದಕ್ಕೆ ಆಸ್ಪದ ಮಾಡಿಕೊಟ್ಟರೆ ತುಂಬಾನ ಬೇಸರವೆನಿಸುತ್ತದೆ.

ದಯಮಾಡಿ ಪ್ರತಿಯೊಂದು ವಿಷಯಕ್ಕು ವಿಚಾರಮಾಡದೆ ರಾಜಕಿಯ ನಂಜನ್ನು ಮೆತ್ತಿಸಬೇಡಿ. ಕಾರಣ ಹೊಸ ಶಿಕ್ಷಣ ನೀತಿಯು ಯಾವು ರಾಜಕೀಯ ಪಕ್ಷದ ತತ್ವದ ಮೇಲಾಗಲಿ ಅಥವಾ ಮಕ್ಕಳ  ವಿರುದ್ಧವಾಗಲಿ ಇಲ್ಲ. ಹೊಸ ಶಿಕ್ಷಣ ನೀತಿಯ ಫಲವನ್ನು ಭೋಗಿಸುವ ಫಲಾನುಭವಿಗಳು ನಮ್ಮ ನಿಮ್ಮ ಮನೆಯ ಮುದ್ದು ಕಂದಮ್ಮಗಳೆ ಹೊರತು ಹೊರದೇಶದವರಲ್ಲ. ತಮಗೆಲ್ಲ ಗೊತ್ತಿದೆ ಇಷ್ಟು ವರುಷ ಬ್ರಿಟಿಷರು ಪಾಸುಮಾಡಿ ಅನಯಷ್ಠಾನಕ್ಕೆ ತಂದ ಶಿಕ್ಷಣ ನೀತಿಯು ನಮ್ಮ ಯುವ ಜನಾಂಗ ಕೇವಲ ಕಾರಕೂನರಾಗಿ ದುಡಿಯುವ ಸಂಸ್ಕೃತಿಯನ್ನು ನಿಮರ್ಿಸಿತು.ಅಷ್ಟೆ ಅಲ್ಲ ಕಲಿತವರಲ್ಲಿ ಬಹುಪಾಲು ಮಂದಿ  ದಂಡ ಪಿಂಡರಾಗಿ ಉದ್ಯೋಗವಿಲ್ಲದೆ ಅಲೆದಾಡಬೇಕಾಗುತಿತ್ತು.

ಆದರೆ ಈ ಒಂದು ಶಿಕ್ಷಣ ನೀತಿಯಲ್ಲಿ ಅಂತಹ ಪರಿಸ್ಥಿತಿ ಉಂಟಾಗಲು ಶಕ್ಯವೆ ಇಲ್ಲ. ಕಾರಣ ಆರನೆಯ ತರಗತಿಯಿಂದಲೆ ವೃತ್ತಿಪರ ಕೋಸರ್್ಗೆ ಅವಕಾಶವಿರುತ್ತದೆ. ಅದರಂತೆಯೆ ಪದವಿತರಗತಿಗಳಲ್ಲಿ ಬಹು ಬಗೆಯ ವಿಷಯದ ಆಯ್ಕೆಗೆ ಅವಕಾಶವಿರುವುದರಿಂದ ಒತ್ತಾಯದ ಶಿಕ್ಷಣಕ್ಕಾಗಲಿ ಒಪ್ಪದ ಮನಸ್ಕನಾಗಿ ವಿಷಯದ ಆಯ್ಕೆಗೆ ಅವಕಾಶವಿಲ್ಲದಿರುವುದರಿಂದ 

ತುಂಬಾ ಅನುಕೂಲಕರ.

          21ನೇ ಶತಮಾನ ಅಂದರೆ ಜ್ಞಾನದ ಶತಮಾನ.ಎಲ್ಲಾ ರಾಜ್ಯಗಳು ಇಂದು ಹೊಸ ಶಿಕ್ಷಣ ನೀತಿಯನ್ನು ಅಪ್ಪಿ ಒಪ್ಪಿಕೊಂಡಿವೆ.ಅಂದಾವಾಗ ವಿರೋಧಪಕ್ಷದವರಿಗೇನು ಮತ್ಸರ.ಒಂದೆ ಮಾತಿನಲ್ಲಿ ಹೇಳುವುದಾದರೆ ಭವಿಷ್ಯದ ಪ್ರಜೆಗಳನ್ನು ಅವರಲ್ಲಿರುವ ಕೌಶಲ್ಯಗಳನ್ನು ಬಳಸಿ ಆಸ್ತಿಯನ್ನಾಗಿಪರಿವತರ್ಿಸುವ ಕಾಲ ಮತ್ತು ಸಮಯ ಒದಗಿ ಬಂದಿದೆ.

      ನಮ್ಮ ಹೊಸ ಶಿಕ್ಷಣ ನೀತಿಯು . ಕೇವಲ ದೇಶಕ್ಕಷ್ಟೆ ಅಲ್ಲ ಎಲ್ಲಾ ರಾಜ್ಯಕ್ಕು ಅನ್ವಯಿಸುತ್ತಿರುವದು ತುಂಬಾ ಶ್ಲಾಘನೀಯ. ಬಹು ಮುಖ್ಯ ಉದ್ದೇಶವೆಂದರೆ ವಿಕಾಶ.ಅಥರ್ಾರ್ತ  ಅಭಿವೃದ್ಧಿ.ತದ್ನಿಮಿತ್ತ ಇದರಲ್ಲಿ ವಿಜ್ಞಾನವನ್ನು ಮೆಳವಿಸಿ ಮುಂದುವರೆಯುವ ರೀತಿಯೆ ಬಹಳ ಮಹತ್ವವಾದದು. ಇದು ಅನೇಕತೆಯಲ್ಲಿ ಏಕತೆಯನ್ನು ಸಾಧಿಸುತ್ತದೆ ಎಂದರಲ್ಲಿ ಅನುಮಾನವೆ ಇಲ್ಲ ಕಾರಣ ಇಲ್ಲಿ ಸರಕಾರಿ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳ ನಡುವೆ ಶಿಕ್ಷಣೊದಗಿಸುವ ವಿಷಯದಲ್ಲಿ ಭೇದವೆ ಇಲ್ಲ.ಅದರಿಂದಾಗಿ ನಾವು ಅನೇಕತೆಯಲ್ಲಿ ಏಕತೆಯನ್ನು ಸಾಧಸಿದಂತೆಯೆ.

ಕೊನೆಯ ಹನಿ.ಹೀಗೆ ಸರಕಾರ ರೂಪಿಸಿದ ಹೊಸ ಶಿಕ್ಷಣ ನೀತಿ ನಮ್ಮ ದೇಶದ ಮಟ್ಟಿಗೆ ಒಂದು ಮೈಲಿಗಲ್ಲಾಗಲಿದೆ ಎನ್ನುವ ಬಗ್ಗೆ ಎರಡು ಮಾತೆ ಇಲ್ಲ.ಆದರೆ ಇಲ್ಲಿ ಏಳುವ ಕೆಲವು ಸವಾಲುಗಳೆಂದರೆ  ನಮ್ಮದು ವಿಶಾಲವಾದ ಮತ್ತು ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರ.ಅಷ್ಟೆ ಅಲ್ಲ ಈಗಾಗಲೆ ಜನಸಂಖ್ಯೆ 135 ಕೋಟಿಗೆ ತಲುಪಿದೆ.ಇಷ್ಟೆಲ್ಲ ಜನಸಂಖೆಗೆ ನಾವು ಹೊಸ ಶಿಕ್ಷಣ ನೀತಿಗೆ ಪೂರಕವಾಗುವ ಮೂಲ ಸೌಕರ್ಯಗಳನ್ನು ಒಮ್ಮೇಲೆ ಒದಗಿಸಲು ಶಕ್ಯವೇ?

      ಎರಡನೆಯದಾಗಿ ಹೊಸ ಶಿಕ್ಷಣ ನೀತಿಗೆ  ಹೊಂದಿಕೆಯಾಗುವ  ಶಿಕ್ಷಕರು ನಮ್ಮಲ್ಲಿ ಇದ್ದಾರೆಯೆ?  ಅದರಂತೆಯೆ  ಐದನೆಯ ವರುಷದ ವರೆಗೆ ಮಕ್ಕಳಿಗೆ ಪಾಲಕರೆ ಮೂಲ ಶಿಕ್ಷಣ ಒದಗಿಸಬೇಕಾಗುವದು.ಆ ಕುರಿತು ಎಷ್ಟರ ಮಟ್ಟಿಗೆ ನಮ್ಮ ಸರಕಾರ ತಯಾರಿ ನಡೆಸಿದೆ?

ಈ ವಿಷಯದಲ್ಲಿ ಗ್ರಾಮೀಣಭಾಗದಲ್ಲಿರುವ ಕೆಲ ಅಶಿಕ್ಷಿತ  ಪಾಲಕರ ಸಮಸ್ಯೆಯನ್ನು ಪರಿಹರಿಸುವದು ಸ್ವಲ್ಪ ಕಷ್ಟಕರವೆ.ಅದನ್ನು  ಬಗೆ ಹರಿಸುವದು ಹೇಗೆ? ಹಾಗೇನೆ ಈ ಕರೋನಾದ ಸಮಸ್ಯೆ ಇನ್ನೂ ಕೂಡ ಪರಿಹಾರಗೊಂಡಹಾಗೇ ಇಲ್ಲ.ಅದರಿಂದ ಮುಂದೆ ಏನಾದರು ಸಮಸ್ಯೆ ಉಲ್ಭಣಗೊಂಡರೆ ಪರಿಹಾರದ ಮಾರ್ಗ ಏನು ಇತ್ಯಾದಿ ಪ್ರಶ್ನೆಗಳು ಉದ್ಭವಿಸುವುದು ಸಹಜ.ಆ ನಿಟ್ಟಿನಲ್ಲಿಯು ನಾವಿಂದು ವಿಚಾರಮಡುವ ಪರಿಸ್ಥಿತಿ ಒದಗಿ ಬಂದಿದೆ..ಕಾದು ನೋಡೋಣವೆ?

- ಡಾ.ಎಸ್.ಡಿ.ನಾಯ್ಕ

ಕೆ.ಎಚ್.ಬಿ. ಕಾರವಾರ

 

ಸುದ್ದಿ ಓದಿ