ಅಟಲ್ ಜನ್ಮದಿನ – ರೈತರಿಗೆ ಕೇಂದ್ರದ ಕಿಸಾನ್ ಸಮ್ಮಾನ್ ನಿಧಿ ಬಂಪರ್ ಕೊಡುಗೆ
ನವದೆಹಲಿ,
ಡಿಸೆಂಬರ್ 25 : ಮಾಜಿ ಪ್ರಧಾನಿ ಮತ್ತು
ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 96 ನೇ ಜನ್ಮದ ಪ್ರಯುಕ್ತ ರೈತರ ಖಾತೆಗಳಿಗೆ ಶುಕ್ರವಾರ 7 ನೇ ಕಂತಿನ ಪಿಎಂ ಕಿಸಾನ್ ಸಮ್ಮಾನ್ ನಿಧಿ ಹಣ
ಜಮೆಯಾಗಲಿದೆ.
ಪಿಎಂ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವನ್ನು ಪಿಎಂ ನರೇಂದ್ರ ಮೋದಿ ಅವರು ಇಂದು 9 ಕೋಟಿಗೂ ಹೆಚ್ಚು ಫಲಾನುಭವಿ
ರೈತ ಕುಟುಂಬಗಳಿಗೆ ನೀಡಲಿದ್ದಾರೆ. ಸುಮಾರು 12 ಗಂಟೆಗೆ ದೇಶದ ಕೋಟ್ಯಾಂತರ ರೈತರ ಬ್ಯಾಂಕ್ ಖಾತೆಗಳಿಗೆ
ಹಣ ನೇರವಾಗಿ ಜಮಾವಣೆಯಾಗಲಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ಇಂದು ಏಳನೇ ಕಂತಿನ ಹಣ ಬಿಡುಗಡೆಯಾಗಲಿದ್ದು, 9 ಕೋಟಿ ರೈತರ ಖಾತೆಗೆ 18ಸಾವಿರ ಕೋಟಿ ರೂಪಾಯಿಗಳನ್ನು ನೇರ ವರ್ಗಾವಣೆ ಮಾಡಲಾಗುತ್ತಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ 6 ರಾಜ್ಯಗಳ ನೂರಾರು ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.
ಪಿಎಂ
ಕಿಸಾನ್ ಯೋಜನೆ ಅಡಿಯಲ್ಲಿ ದೇಶದ ರೈತರಿಗೆ ಒಂದು ವರ್ಷದಲ್ಲಿ 6000 ರೂಪಾಯಿಗಳನ್ನು ನೀಡಲಾಗುತ್ತದೆ.
ಒಂದು ಕಂತಿನಲ್ಲಿ 2000 ರೂ.ಗಳಂತೆ ವರ್ಷಕ್ಕೆ ಮೂರು ಬಾರಿ ನೀಡಲಾಗುವುದು. ಪಿಎಂ ಕಿಸಾನ್ ಯೋಜನೆ
2018 ರ ಡಿಸೆಂಬರ್ 1 ರಂದು ಜಾರಿಗೆ ಬಂದಿದೆ. ಈ ಯೋಜನೆಯ
ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ನೇರ ವರ್ಗಾವಣೆ ಮಾಡಲಾಗುತ್ತಿದೆ.
ಯುಎನ್‌ಐ ಕೆಎಸ್ ಆರ್