ಹುಯಿಲಗೋಳ ಗ್ರಾಮದಲ್ಲಿ ಸಂಪ್ರದಾಯಿಕ ಜೋಕುಮಾರ ಹಬ್ಬ ಆಚರಣೆ
ಲೋಕದರ್ಶನ ವರದಿ
ಗದಗ, ಸೆ. 23: ಭಾದ್ರಪದ ಮಾಸದಲ್ಲಿ ಗಣೇಶ ವಿಸರ್ಜನೆಯ ನಂತರ ಗ್ರಾಮೀಣ ಭಾಗದಲ್ಲಿ ಜನಪದ ಜೋಕುಮಾರ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತದೆ. ಜನಪದ ಕಥೆಗಳ ಪ್ರಕಾರ ಜೋಕುಮಾರಸ್ವಾಮಿಯ ಆಯುಷ್ಯ ಕೇವಲ ಏಳು ದಿನಗಳಾಗಿದ್ದು, ಈ ಅವಧಿಯಲ್ಲಿ ಆತನ ಜನನ, ಯೌವನ, ಮೆರವಣಿಗೆ ಹಾಗೂ ಅಂತ್ಯ ಸಂಭವಿಸುತ್ತದೆ. ಜೋಕುಮಾರಸ್ವಾಮಿಯನ್ನು ಪೂಜಿಸುವುದರಿಂದ ಕೃಷಿಭೂಮಿಗೆ ಉತ್ತಮ ಮಳೆಯಾಗಿ, ಬೆಳೆಗಳಿಗೆ ಬರುವ ರೋಗರುಜಿನಗಳು ದೂರವಾಗುತ್ತವೆ ಎಂಬ ನಂಬಿಕೆ ಗ್ರಾಮೀಣ ಜನರಲ್ಲಿದೆ.