ಬಳ್ಳಾರಿ

SUCI ಕಮ್ಯುನಿಸ್ಟ್‌ ಪಕ್ಷದ ಸಂಸ್ಥಾಪನಾ ದಿನ ಆಚರಣೆ

SUCI ಕಮ್ಯುನಿಸ್ಟ್‌ ಪಕ್ಷದ ಸಂಸ್ಥಾಪನಾ ದಿನ ಆಚರಣೆ

ಬಳ್ಳಾರಿ 24: ಕಮ್ಯುನಿಸ್ಟ್‌ ಪಕ್ಷದ 74ನೇ ಸಂಸ್ಥಾಪನಾ ದಿನವನ್ನು ಪಕ್ಷದ ಜಿಲ್ಲಾ ಕಛೇರಿಯಲ್ಲಿ ದಿ. 24ರಂದು ಆಚರಿಸಲಾಯಿತು.   ಖಗಅಋ ಕಮ್ಯುನಿಸ್ಟ್‌ ಪಕ್ಷದ ಸಂಸ್ಥಾಪಕ ಕಾಮ್ರೇಡ್ ಶಿವದಾಸ್ ಘೋಷ್ ರವರ ಭಾವಚಿತ್ರಕ್ಕೆ ಜಿಲ್ಲಾ ಕಾರ್ಯದರ್ಶಿಗಳಾದ ಕಾಮ್ರೇಡ್ ರಾಧಕೃಷ್ಣ ಅವರು ಮಾಲಾರೆ​‍್ಣ ಮಾಡಿದರು. 

ನಂತರ  SUCI ಕಮ್ಯುನಿಸ್ಟ್‌ ಪಕ್ಷದ ವತಿಯಿಂದ ಆನ್ ಲೈನ್ ಮೂಲಕ ಸಭೆ ನಡೆಸಲಾಯಿತು. ಈ ಸಭೆಯನ್ನುದ್ದೇಶಿಸಿ ರಾಜ್ಯ ಸೆಕ್ರೆಟರಿಯಟ್ ಸದಸ್ಯರಾದ ಕಾಮ್ರೇಡ್ ಕೆ. ಸೋಮಶೇಖರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ “ಇಂದು ಕೇವಲ ಶೇ 1ಅ ಭಾರತೀಯರು ದೇಶದ 73ಅ ಸಂಪತ್ತಿನ ಒಡೆಯರಾಗಿದ್ದಾರೆ ಎಂದರು. “ಸ್ವಾತಂತ್ರ ಸಂಗ್ರಾಮದಲ್ಲಿ ಕ್ರಾಂತಿಕಾರಿ ಹೋರಾಟಗಾರರಾಗಿದ್ದ, ಈ ಯುಗದ ಮಹಾನ್ ಮಾರ್ಕ್ಸ್‌ವಾದಿ ಚಿಂತಕರಾದ ಶಿವದಾಸ್ ಘೋಷ್‌ರವರು, ಬ್ರಿಟಿಷರು ಸ್ವಾತಂತ್ರ್ಯ ನೀಡುವುದು ಅಂದರೆ, ಈ ದೇಶದ ಬಂಡವಾಳಶಾಹಿಗಳಿಗೆ ಅಧಿಕಾರ ಹಸ್ತಾಂತರ ಎಂದು  ಮನಗಂಡರು. ಅದರಂತೆಯೇ 1948ರ ಏಪ್ರಿಲ್ 24ರಂದು ನಮ್ಮ ಪಕ್ಷ ಸೋಷಲಿಸ್ಟ್‌ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್‌) ಪಶ್ಚಿಮ ಬಂಗಾಳದಲ್ಲಿ ಜನ್ಮತಾಳಿತು. ಇಂದು ಈ ಪಕ್ಷ ಬೃಹದಾಕಾರವಾಗಿ ಬೆಳೆದು ನಿಂತಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಾವಿರಾರು ಜನರ ಸದಸ್ಯತ್ವ ಹೊಂದಿದೆ ಮತ್ತು ಲಕ್ಷಾಂತರ ಬೆಂಬಲಿಗರನ್ನು ಪಡೆದುಕೊಂಡಿದೆ. ಹೀಗಾಗಿ, ಪ್ರತಿ ವರ್ಷ ಏಪ್ರಿಲ್ 24ರಂದು, ಈ ದೇಶದಲ್ಲಿ ಸಮಾಜವಾದಿ ಕ್ರಾಂತಿಯ ಮೂಲಕ ಶೋಷಿತ ಜನತೆಯನ್ನು ಬಂಡವಾಳಶಾಹಿಗಳ ಶೋಷಣೆಯಿಂದ ಮುಕ್ತಗೊಳಿಸುವ ಸಂಕಲ್ಪ ತೊಡುವ  ದಿನವಾಗಬೇಕಾಗಿದೆ. ಪಕ್ಷದ ಸಂಸ್ಥಾಪನಾ ದಿನವನ್ನು ಆಚರಿಸುವುದು ಒಂದು ಸಂಪ್ರದಾಯವಲ್ಲ, ಬದಲಿಗೆ, ಶಿವದಾಸ್ ಘೋಷ್‌ರವರ ಚಿಂತನೆಗಳ ಆಧಾರದ ಮೇಲೆ ನಮ್ಮಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿಕೊಂಡು, ಕ್ರಾಂತಿಕಾರಿ ಹೋರಾಟದಲ್ಲಿ ನಮ್ಮನ್ನು ನಾವು ಹೆಚ್ಚು ತೊಡಗಿಸಿಕೊಳ್ಳಲು ಸಂಕಲ್ಪ ತೊಡುವ ದಿನವಾಗಬೇಕು ಎಂದು ಹೇಳಿದರು. 

ಜಿಲ್ಲಾ ಸಮಿತಿ ಸದಸ್ಯರು, ವಿದ್ಯಾರ್ಥಿ-ಯುವಜನರು, ಮಹಿಳೆಯರು, ರೈತಹಿಕಾರ್ಮಿಕರು ಆನ್ ಲೈನ್ ಸಭೆಯಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ