ನಿಖಿಲ್ ಕುಮಾರಸ್ವಾಮಿಯವರ ಹುಟ್ಟು ಹಬ್ಬ ಆಚರಣೆ
ಬಳ್ಳಾರಿ 22: ಜಿಲ್ಲಾ ಜನತಾದಳ (ಜಾತ್ಯಾತೀತ) ಕಛೇರಿಯಲ್ಲಿ ದಿ. 22ರಂದು ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಯವರ ಹುಟ್ಟು ಹಬ್ಬವನ್ನು ಬೃಹತ್ ಕೇಕ್ ಕಟ್ ಮಾಡುವದರ ಮೂಲಕ ಜಿಲ್ಲಾಧ್ಯಕ್ಷ ಮೀನಹಳ್ಳಿ ತಾಯಣ್ಣ ಇವರ ನೇತೃತ್ವದಲ್ಲಿ ಸಂಭ್ರಮ ಆಚರಿಸಲಾಯಿತು. ಕೇಕ್ ಕಟ್ ಮಾಡಿದ ನಂತರ ಜಿಲ್ಲಾಧ್ಯಕ್ಷರು ಮುಂದಿನ ದಿನಗಳಲ್ಲಿ ನಿಖಿಲ್ ಕುಮಾರಸ್ವಾಮಿ ಮುಂದಾಳತ್ವದಲ್ಲಿ ರಾಜ್ಯದಲ್ಲಿ ಪಕ್ಷ ಸಂಘಟನೆಯಾಗಿ ಅಧಿಕಾರಕ್ಕೆ ಬರುವಂತೆ ಜಿಲ್ಲೆಯ ಎಲ್ಲಾ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಈ ಹುಟ್ಟು ಹಬ್ಬದ ಸಮಾರಂಭದಲ್ಲಿ ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಶ್ರೀಮಾನ್ ಮುನ್ನಬಾಯಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಚುನಾವಣಾಧಿಕಾರಿ ಕೆ.ವಾದಿರಾಜ ಶೆಟ್ಟಿ, ಕಂಪ್ಲಿ ವಿಧಾನಸಭ ಅಧ್ಯಕ್ಷ ಮದಿರೆ ವಿಜಯಕುಮಾರ ಗೌಡ, ಉಪಾಧ್ಯಕ್ಷ ಬಂಡೆ ಗೌಡ, ರಸುಲ್ ಸಾಬ್, ಲಕ್ಷ್ಮಿಕಾಂತ ರೆಡ್ಡಿ, ಎಸ್.ಎಲ್ಲನ ಗೌಡ, ವಂಡ್ರಿ, ಬಸಪ್ಪ, ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಕೆ.ಶಿವನಾರಯಣ ಹಾಗೂ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು ನಂತರ ಸಿರುಗುಪ್ಪ ವಿಧಾನಸಭ ಕ್ಷೇತ್ರದ ಎಲ್ಲಾ ಕಾರ್ಯಕರ್ತರ ಸಭೆಕರೆದು, ಸರ್ವ ಸದಸ್ಯರ ಅಭಿಪ್ರಾಯ ಪಡೆದು ಸಭೆಯಲ್ಲಿ ಹಾಜರಿದ್ದ ಎಲ್ಲಾ ಕಾರ್ಯಕರ್ತರು ಕೈ ಎತ್ತುವುದರ ಮೂಲಕ ಕೆ.ಶಿವನಾರಾಯಣ ಇವರನ್ನು ಸಿರುಗುಪ್ಪ ಅಧ್ಯಕ್ಷರಾಗಿ ಒಮ್ಮತದಿಂದ ಆಯ್ಕೆ ಮಾಡಲಾಯಿತು. ತದನಂತರ ಕಂಪ್ಲಿ ವಿಧಾನಸಭ ಕ್ಷೇತ್ರದ ಕಾರ್ಯಕರ್ತರ ಸಭೆ ಕರೆದು ಈ ಹಿಂದೆ ಅಧ್ಯಕ್ಷ ಮದಿರೆ ವಿಜಯಕುಮಾರ್ ಇವರನ್ನು ಅಧ್ಯಕ್ಷರನ್ನಾಗಿ ಮುಂದುವರಿಸಲು ಒಮ್ಮತದಿಂದ ಎಲ್ಲಾ ಮುಖಂಡರು ತೀರ್ಮಾನ ಕೈಗೊಂಡರು. ಸಭೆ ವಂದನಾರೆ್ಣ ದೊಂದಿಗೆ ಮುಕ್ತಾಯವಾಯ್ತು.