ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿಯಲ್ಲಿ ಮಹಿಳಾ ಕಿಸಾನ ದಿನಾಚರಣೆ
ಲೋಕದರ್ಶನ ವರದಿ
ಹುಲಕೋಟಿ 15: ಅಕ್ಟೋಬರ್ 15ರಂದು ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಹಿಳಾ ಕಿಸಾನ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಹುಲಕೋಟಿಯ ಗ್ರಾಮ ಪಂಚಾಯತಿಯ ಅಧ್ಯಕ್ಷತರಾದ ನಾಗರತ್ನಾ ಬಾಳಿಹಳ್ಳಿಮಠ ಅವರು ಉಧ್ಘಾಟಿಸಿದರು. ಮಹಿಳಾ ಕಿಸಾನ್ ದಿನಾಚರಣೆಯ ಹಿನ್ನಲೆ ಮತ್ತು ಮಹತ್ವದ ಕುರಿತು ಡಾ.ಮಂಜುಪ್ರಕಾಶ್ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೃಷಿ ವಿಜ್ಞಾನ ಕೇಂದ್ರದಲ್ಲಿ ತರಬೇತಿ ಪಡೆದು ವಿಜ್ಞಾನಿಗಳ ಮಾರ್ಗದರ್ಶನದಿಂದ ಯಶಸ್ವಿ ಮಹಿಳಾ ಉಧ್ಯಮಿಗಳಾದ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ಶ್ರೀಮತಿ ಶ್ಯಾಮಲಾ ಕರೂರ ಅವರು ತಮ್ಮ ಉದ್ಯಮ ಮತ್ತು ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ನೆರವಿನ ಕುರಿತು ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಶಿವಕುಮಾರ, ನಿರ್ದೇಶಕರು, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಹುಲಕೋಟಿ ಅವರು ಮಾತನಾಡಿ ಜನಸಾಮಾನ್ಯರ ಹಸಿವನ್ನು ನೀಗಿಸುವಲ್ಲಿ ರೈತರ ಮತ್ತು ರ್ಯತ ಮಹಿಳೆಯರ ಪಾತ್ರವನ್ನು ಶ್ಲಾಗಿಸಿದರು.
ಮಹಿಳಾ ಸಾಧಕರಾದ ಶ್ರೀಮತಿ ನಾಗರತ್ನಾ ಬಾಳಿಹಳ್ಳಿಮಠ ಹಾಗೂ ಶ್ಯಾಮಲಾ ಕರೂರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಸುಧಾ ವಿ. ಮಂಕಣಿ ಅವರು ಮಾತನಾಡಿ, ಕೃಷಿಯಲ್ಲಿ 70-80 ಪ್ರತಿಶತದಷ್ಟು ಮಹಿಳೆಯರು ನಿರಂತರವಾಗಿ ತೊಡಗಿಕೊಂಡು ಕೃಷಿಯ ಪ್ರತಿಯೊಂದು ಹಂತದಲ್ಲಿ ಜವಾಬ್ದಾರಿಯಿಂದ ಕೆಲಸವನ್ನು ನಿಭಾಯಿಸುತ್ತಿದ್ದಾರೆ, ಹೀಗಾಗಿ ಮಹಿಳಾ ಕಿಸಾನ ದಿನಾಚರಣೆ ಬಹಳ ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.