ಕೃಷಿ ಭಾರತ ದೇಶದ ಸಂಪತ್ತು : ಸುರೇಶ ಕುಂಬಾರ
ಗದಗ 15: ಕೃಷಿಯೇ ಭಾರತದ ಅತ್ಯಮೂಲ್ಯ ಸಂಪತ್ತಾಗಿದೆ. ಇಂದಿನ ರೈತರು ವೈಜ್ಞಾನಿಕ ಕೃಷಿಯನ್ನು ಎಂದು ತೋಟಗಾರಿಕೆ ಇಲಾಖೆಯ ನಿವೃತ್ತ ಸುರೇಶ ಕುಂಬಾರ ಅವರು ಹೇಳಿದರು.ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಆಯೋಜಿಸಿದ್ದ ಎನ್ಎಸ್ಎಸ್ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಭೂಮಿಗೆ ರಾಸಾಯನಿಕ ಗೊಬ್ಬರಗಳ ಬದಲು ಜೈವಿಕ/ ಸಾವಯವ ಗೊಬ್ಬರವನ್ನು ಬಳಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ. ಪ್ರತಿಯೊಬ್ಬ ರೈತನು ಕೃಷಿಯಲ್ಲಿ ಯಶಸ್ಸು ಕಂಡಾಗ ಮಾತ್ರ ಗ್ರಾಮೀಣ ಅಭಿವೃದ್ಧಿ ಆಗಲು ಸಾಧ್ಯ ಎಂದರು.ಮುಖ್ಯೊಪಾದ್ಯಾಯನಿ ಶ್ರೀಮತಿ ಶಾಂತಾ ಕರಡಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ಹೆಚ್ಚು ಹೈನುಗಾರಿಕೆಯಲ್ಲಿ ತೊಡಗಿರುವ ಸಂತೋಷದ ವಿಷಯ ಹಾಗೂ ವಿದ್ಯಾರ್ಥಿಗಳು ಹೆಚ್ಚು ಹಾಲಿನ ಪದಾರ್ಥಗಳನ್ನು ಸೇವಿಸಬೇಕು ಎಂದು ಹೇಳಿದರು. ನಂತರ ಕಡಕೋಳದ ಕಿರಣ ಹರ್ಲಾಪೂರ ಅವರಿಂದ ಜಾನಪದ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಪ್ರಭುರಾಜ ಗೂಳರಡ್ಡಿ, ಶಂಕರಗೌಡ ಕಾಶಿ ಗೌಡ್ರ, ಯಲ್ಲಪ್ಪ ಭೋವಿ , ಕಾಲೇಜಿನ ಪ್ರಾಚಾರ್ಯರಾದ ಎಸ್ ಬಿ ಹಿರೇಮಠ ಹಾಗೂ ಕಾರ್ಯಕ್ರಮ ಅಧಿಕಾರಿ ಜಿ.ಎಸ್.ವೀರಘಂಟಿ ಇದ್ದರು.