ಭ. ಮಹಾವೀರ ಜನ್ಮಕಲ್ಯಾಣೋತ್ಸವ ಸಂಭ್ರಮದಿಂದ ಆಚರಣೆ

ಮುದ್ದೇಬಿಹಾಳ 22: ಪಟ್ಟಣದ ಅರಿಹಂತ ಚಾರಿಟೇಬಲ್ ಟ್ರಸ್ಟ್ಟಿನ ಪಿ.ಯು.ಸಿ. ಮತ್ತು ಬಿ.ಎಸ್‌.ಡಬ್ಲ್ಯೂ ಕಾಲೇಜು ಹಾಗೂ ಎಂ.ಬಿ.ಎಸ್‌. ಕಲಾ ಪ್ರಥಮ ದರ್ಜೆ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಭಗವಾನ ಗೋಮ್ಮಟೇಶ ಬಾಹುಬಲಿ ಸ್ವಾಮಿಯ ಸನ್ನಿದಾನದ ಅರಿಹಂತಗಿರಿಯಲ್ಲಿ 2623ನೇ ಮಹಾವೀರ ಸ್ವಾಮಿಯ ಜನ್ಮಕಲ್ಯಾಣೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.  

 ಅರಿಹಂತ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಮಹಾವೀರ ಸಗರಿಯವರು ಮಹಾವೀರ ಭಗವಾನರ್ ಭಾವಚಿತ್ರಕ್ಕೆ ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ ಮಹಾವೀರ ಭಗವಾನರ ತತ್ವಗಳು ಇಂದಿನ ಮನಕುಲಕ್ಕೆ ಮಹಾವೀರ ಸ್ವಾಮಿಯ ದಿವ್ಯ ಸಂದೇಶಗಳಾದ ಅಹಿಂಸೆ, ಸತ್ಯ, ಜ್ಞಾನ, ತ್ಯಾಗ, ಅಪರಿಗ್ರಹ. ಅಹಿಂಸೆಯಿಂದ ಜೀವಿಗಳ ರಕ್ಷಣೆಯಾಗುತ್ತದೆ, “ಅಹಿಂಸಾ ಪರಮೋ ಧರ್ಮ” ಎಂದು ಸಾರಿದ ಭನವಾನ ಮಹಾವೀರರ ತತ್ವಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಪರಿಶುದ್ಧದ ಜೊತೆಗೆ ಸನ್ಮಾರ್ಗದ ಕಡೆಗೆ ನಡೆದಂತಾಗುತ್ತದೆಂದರು. ಮಹಾವೀರ ತತ್ವಗಳು ಲೋಕೋದ್ಧಾರಕ್ಕೆ ಮಾರ್ಗಗಳಾಗಿವೆ ಮತ್ತು ಮಹಾವೀರ ಭಗವಾನರು ಆದಿನಾಥ ತೀರ್ಥಂಕರರ ಮೊಮ್ಮಗನಾಗಿದ್ದು ದಿಗಂಬರ ಮುನಿಯಾಗಿ ಅವರು ಮೋಕ್ಷಗಾಮಿಯಾಗಲು 23 ಬವಗಳು ಬೇಕಾಯಿತು. 24 ನೇ ತೀರ್ಥಂಕರಾಗಿ ತಾಯಿ ತ್ರಿಶಲಾದೇವಿ ತಂದೆ ಸಿದ್ದಾರ್ಥ ಪುತ್ರನಾಗಿ ಬಿಹಾರ ರಾಜ್ಯದ ಕುಂಡಲಪುರದಲ್ಲಿ ಜನಿಸಿ ರಾಜ್ಯವೈಭವವಿದ್ದರು ಅದೆಲ್ಲವನ್ನು ತ್ಯಾಗಮಾಡಿ ದೀರ್ಘ ತಪಸ್ಸಿನಿಂದ ಕೇವಲ ಜ್ಞಾನವನ್ನು ಪಡೆದು ಮೋಕ್ಷಗಾಮಿಗಳಾದರು. ಸಹಬಾಳ್ವೆಯೇ ಭಾರತದ ಜೀವಾಳ ಗಾಢ ಧರ್ಮನಿಷ್ಠ ಸಮುದಾಯಗಳು ಮತ್ತು ಸಂಸ್ಕೃತಿಯನ್ನು ಹೊಂದಿರುವ ಭಾರತ ವಿಶ್ವದಲ್ಲೇ ಅತ್ಯಂತ ಹೆಚ್ಚು ಧಾರ್ಮಿಕ ವೈವಿಧ್ಯತೆಯುಳ್ಳ ದೇಶ. ಇಲ್ಲಿನ ಬಹುತೇಕ ಜನರ ಬದುಕಿನಲ್ಲಿ ಇಂದಿಗೂ ಧರ್ಮ ಮಹತ್ವದ ಪಾತ್ರ ವಹಿಸಿದ್ದರೂ, ನಾಸ್ತಿಕರು ಮತ್ತು ಆಜ್ಞೇಯತಾವಾದಿಗಳೂ ಕೂಡ ಒಟ್ಟಿಗೆ ಬದುಕುತ್ತಿದ್ದಾರೆ. ವಿವಿಧ ಧರ್ಮೀಯರ, ಧರ್ಮಗಳ ನಡುವೆ ಸಾಮರಸ್ಯದ ಸಹಬಾಳ್ವೆ ಭಾರತೀಯ ಸಂಸ್ಕೃತಿ ಭಗವಾನ್ ಮಹಾವೀರ ಸ್ವಾಮಿಯ ದಿವ್ಯ ಸಂದೇಶ.” ಪರಪಸ್ಪರ ಸಹಕಾರದಿಂದ ಪ್ರಗತಿ ಸಾಧ್ಯ. ಇನ್ನೊಬ್ಬರಿಗೆ ಕೇಡನ್ನು ಬಯಸುವದರಿಂದ ಕರ್ಮವು ಬಿಡದೆ ಬೆಂಬತ್ತಿ ಬರುವುದು, ತನಗಿಂತ ಕನಿಷ್ಟರಾದವರ ಬಗ್ಗೆ ಪಶು-ಪಕ್ಷಿ, ಪ್ರಾಣಿ ಸಸ್ಯ ಸಂಕುಲದ ಬಗ್ಗೆ ಜೀವ ದಯೇ ಇರಲಿ, ಅನ್ನದಾನ, ಅಭಯದಾನ ಶಾಸ್ತ್ರದಾನ, ವಿದ್ಯಾದಾನ ಶ್ರೇಷ್ಠದಾನಗಳು ಎಂದು ಭಗವಾನ್ ಮಹಾವೀರರು ಸಾರಿದ ಮಹಾನ ಸನ್ಯಾಸಿ ಎಂದರು.  

ನಿವೃತ್ತ ಗ್ರಂಥಪಾಲಕ ಮಾಣಿಕ ಸಗರಿ, ಡಿ.ಸಿ.ಸಿ. ಬ್ಯಾಂಕಿನ ಕಂಪ್ಯೂಟರ ಇಂಜನಿಯರ್ ಅನಿಲಕುಮಾರ ಸಗರಿ, ಸುನಿತಾ ಸಗರಿ, ರಾಜೇಶ್ವರಿ, ಮಹಾವೀರ ಮಂಕಣಿ ಕಾಲೇಜಿನ ಪ್ರಾಚಾರ್ಯರಾದ ವಿಪುಲ್ ಸಗರಿ, ಸಿಬ್ಬಂದಿ ವರ್ಗದವರಾದ ನಮ್ರತಾ ಸಗರಿ, ಜಿ.ಡಿ.ಬಡಿಗೇರ, ಅಶೋಕ ಹಡಪದ, ಹೆಚ್‌.ಎಸ್‌.ಗೌಡರ್, ಬಸವರಾಜ ಬಡಿಗೇರ, ಶ್ರೀಶೈಲ್ ಹತ್ತಿ, ರಮೇಶ ಮಡಿವಾಳರ, ಸಮೀರ್, ದೀಪಾ, ರೋಹಿನಿ, ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.