ಬಳ್ಳಾರಿ

ಕಾರ್ಗಿಲ್ ವಿಜಯ ದಿವಸ ಆಚರಣೆ

ಕಾರ್ಗಿಲ್ ವಿಜಯ ದಿವಸ ಆಚರಣೆ

ಬಳ್ಳಾರಿ: ಕಾರ್ಗಿಲ್ ಯುದ್ಧದ ಸಮಯದಲ್ಲಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅಪರ್ಿಸಿದ ಧೈರ್ಯಶಾಲಿ ಸೈನಿಕರಿಗೆ ಹೃತ್ಪೂರ್ವಕ ಗೌರವ ಸಲ್ಲಿಸಲು, ಬಳ್ಳಾರಿಯ 34 ಕನರ್ಾಟಕ ಬಟಾಲಿಯನ್ ಎನ್ಸಿಸಿ ತಂಡದ ವತಿಯಿಂದ, ಎನ್ಸಿಸಿ ಗ್ರೂಪ್ ಹೆಡ್ ಕ್ವಾರ್ಟಸರ್್ ಅಡಿಯಲ್ಲಿ ಬರುವ 09 ಬಟಾಲಿಯನ್ಗಳಿಗೆ "ವೆಬಿನಾರ್ನ್ನು ನಗರದ ಎನ್ಸಿಸಿ ಕಾಯರ್ಾಲಯದಲ್ಲಿ ಕಾಗರ್ಿಲ್ ವಿಜಯ ದಿವಸದಂದು ಆಯೋಜಿಸಲಾಗಿತ್ತು.

ರಾಯಚೂರು, ಗದಗ, ದಾವಣಗೆರೆ, ವಿಜಯಪುರ, ಬಾಗಲಕೋಟೆ, ಕಲಬುರಗಿ ಹಾಗು ಬೀದರ್ ಜಿಲ್ಲೆಗಳಿಂದ ಸುಮಾರು 10 ಎನ್ಸಿಸಿ ಅಧಿಕಾರಿಗಳು ಹಾಗೂ 90 ಎನ್ಸಿಸಿ ಕೆಡೆಟ್ಗಳು ಈ ವೆಬಿನಾರ್ನಲ್ಲಿ ಭಾಗವಹಿಸಿದ್ದರು.

        90 ನಿಮಿಷಗಳು ನಡೆದ ಈ ಕಾರ್ಯಕ್ರಮದಲ್ಲಿ ರಸಪ್ರಶ್ನೆ ಸ್ಪಧರ್ೆ, ಕವನ ವಾಚನ ಹಾಗು ಕಾಗರ್ಿಲ್ ಯುದ್ಧದ ವಿಸ್ಮಯ ದೃಶ್ಯಗಳನ್ನು ತೋರಿಸಿ, ಯುವ ಪೀಳಿಗೆಯಲ್ಲಿ ದೇಶಭಕ್ತಿಯನ್ನು ಪ್ರೇರೇಪಿಸಲಾಯಿತು.

 ಕಾಗರ್ಿಲ್ ಯುದ್ಧದ ಸಮಯದಲ್ಲಿ ದೇಶಕ್ಕಾಗಿ ಪ್ರಾಣತೆತ್ತ ವೀರಯೋಧರಿಗೆ ನಮನ ಸಲ್ಲಿಸುವುದು ಹಾಗು ರಾಷ್ಟ್ರ ನಿಮರ್ಾಣ ಮತ್ತು ಏಕೀಕರಣಕ್ಕಾಗಿ ತಮ್ಮನ್ನು ತೊಡಗಿಸಿಕೊಳ್ಳಲು ಯುವಪೀಳಿಗೆಯನ್ನು ವಿಶೇಷವಾಗಿ ಪ್ರೇರೇಪಿಸಲಾಯಿತು. 

        ಈ ವರ್ಷದಲ್ಲಿ ಕೊವೀಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ, ನಮ್ಮ ವೀರಯೋಧರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ದೇಶದ ಗಡಿಯನ್ನು ಕಾಪಾಡುವುದರ ಜೊತೆಗೆ ದೇಶದ ಶಾಂತಿ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಈ ರಾಷ್ಟ್ರಕ್ಕೆ ಸಶಸ್ತ್ರ ಪಡೆಗಳ ನಿಸ್ವಾರ್ಥ ಸೇವೆಗಾಗಿ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಲಾಯಿತು.

         ಈ ವೆಬಿನಾರ್ನಲ್ಲಿ ಗ್ರೂಪ್ ಕಮಾಂಡರ್ ಕರ್ನಲ್ ಬೀರೆಂದ್ರ, ಕಮಾಂಡಿಗ್ ಅಧಿಕಾರಿ ಕರ್ನಲ್ ರಾಜೇಂದ್ರ, ಎಎನ್ಒ ಅಧಿಕಾರಿಗಳಾದ ರಾಜಶೇಖರ್, ಬಾಬು ಜಯಕುಮಾರ್, ಹಫೀಜ್ ಬೇಗಂ, ಆಥೋನಿ.ಡಿ., ಅಧೀಕ್ಷಕರಾದ ಹಸೀನ್ ಬಾಬು ಅವರು ಇದ್ದರು.


ಸುದ್ದಿ ಓದಿ