ತಾಳಿಕೋಟಿ

ವಿಜ್ರಂಭಣೆಯಿಂದ ಗ್ರಾಮದೇವತೆ ಜಾತ್ರಾಮಹೋತ್ಸವ ಆಚರಣೆ

ವಿಜ್ರಂಭಣೆಯಿಂದ ಗ್ರಾಮದೇವತೆ ಜಾತ್ರಾಮಹೋತ್ಸವ ಆಚರಣೆ

ತಾಳಿಕೋಟಿ31: ಸಮೀಪದ ಬೊಮ್ಮನಹಳ್ಳಿ ಗ್ರಾಮದ ಆರಾಧ್ಯಧೈವಶ್ರೀ ಗ್ರಾಮದೇವತೆಯ ಜಾತ್ರಾ ಮಹೋತ್ಸವವು ಸಕಲ ಸಡಗರ ಸಂಭ್ರಮ ಹಾಗೂ ವಿಜ್ರಂಭಣೆಯಿಂದ ಜರುಗಿತು. 

ಕಳೆದ ಎರಡು ವರ್ಷಗಳಿಂದ ಕೊರೊನಾ ಪ್ರಭಾವದಿಂದಾಗಿ ಆಚರಿಸಲಾಗದೆ ಜಾತ್ರೆಯನ್ನು ಈ ಬಾರಿ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುತ್ತಾ ವಿಜೃಂಭಣೆಯಿಂದ ಆಚರಿಸಲು ಜಾತ್ರಾ ಮಹೋತ್ಸವ ಸಮಿತಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. 

ಜಾತ್ರಾ ದಿನವಾದ ನಿನ್ನೆ ಬೆಳಿಗ್ಗೆ 10 ಘಂಟೆಯಿಂದ ಆರಂಭವಾದ ಗ್ರಾಮದೇವತೆ ಮೂರ್ತಿಯ ಮೆರವಣಿಗೆಯು ಸಕಲ ವಾದ್ಯವೃಂದಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಸಮೀಪದ ಗ್ರಾಮಗಳಿಂದ ಆಗಮಿಸಿದ ಭಕ್ತರು ತಮ್ಮ ಆರಾಧ್ಯ ದೇವತೆಯ ದರ್ಶನ ಪಡೆದು ಪುನೀತರಾದರು. 

ಜಾತ್ರೆಯು ಯಾವುದೇ ರೀತಿಯ ಆತಂಕವಿಲ್ಲದೆ ನೇರವೇರಲು ಸ್ಥಳೀಯ ಗ್ರಾಮ ಪಂಚಾಯತ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗವು ಜಾತ್ರಾ ಸಮಿತಿಗೆ ಎಲ್ಲ ರೀತಿಯಿಂದಲೂ ಸಹಕಾರ ನೀಡಿತು. 

ಈ ಸಂದರ್ಭದಲ್ಲಿ ಭಗೀರಥ ಸಮಾಜದ ತಾಲೂಕಾ ಅಧ್ಯಕ್ಷ ಮಲಕಣ್ಣ ಮಸರಕಲ್ಲ, ಗ್ರಾ.ಪಂ. ಸದಸ್ಯಯ ಮನಪ್ಪ ಮಸರಕಲ್ಲ (ಸಾಹುಕಾರ) ಪಿಡಿಓ ನಿಂಗನಗೌಡ ದೊಡಮನಿ, ಸಂಗಪ್ಪ ಚಿಂಚೋಳ್ಳಿ, ಶಿವು ಕಲಬುರ್ಗಿ, ಪುರಾಣಿಕ ಬಡಿಗೇರ, ಸಿದ್ದಯ್ಯ ಹಿರೇಮಠ, ಶಾಂತಪ್ಪ ಕನ್ನೋಳ್ಳಿ, ಅಶೋಕ ಕಲಬುರ್ಗಿ, ಸದಾಶಿವ ಗೊಟಖಂಡ್ಕಿ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ