ಸ್ವಾತಂತ್ಯ್ಯೋತ್ಸದ ಅಮೃತ ಮಹೋತ್ಸವ ಆಚರಣೆ
ಲೋಕದರ್ಶನ ವರದಿ
ಬಳ್ಳಾರಿ 16: ಸ್ವಾತಂತ್ರ ಸಂಗ್ರಾಮದಲ್ಲಿ ತ್ಯಾಗ ಬಲಿದಾನಗಳಿಂದ ಸ್ವಾತಂತ್ರವನ್ನು ದೊರಕಿಸಿಕೊಟ್ಟ ಮಹನೀಯರಿಗೆ ಗೌರವಪೂರ್ವಕ ಶತ ಕೋಟಿ ನಮನಗಳನ್ನು ಸಲ್ಲಿಸುವ ಮೂಲಕ ಇಂದು ಬೆಳಿಗ್ಗೆ ನಗರದ 11ನೇ ವಾರ್ಡ್ನ ತೇರು ಬೀದಿಯಲ್ಲಿ 75ನೇ ಸ್ವಾತಂತ್ರ್ಯ ದಿನೋತ್ಸವದ ಧ್ವಜಾರೋಹಣವನ್ನು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ನೆರವೇರಿಸಿದರು.
ಧ್ವಜಾರೋಹಣ ನಂತರ ಮಾತನಾಡಿದ ಜಿ.ಸೋಮಶೇಖರರೆಡ್ಡಿ ಅವರು ಇಂದಿನ ಅಮೃತ ಮಹೋತ್ಸವವನ್ನು ಇಡೀ ವಿಶ್ವವೇ ಭಾರತ ದೇಶದ ಎತ್ತ ತಿರುಗಿ ನೋಡುವಂತಹ ಸಂಭ್ರಮ ಆಚರಣೆ ಆಗಬೇಕಾಗಿತ್ತು. ಆದರೆ ಮಹಾಮಾರಿ ಕರೋಣ ಕಾರಣದಿಂದ ಇಡೀ ದೇಶದಲ್ಲಿ ಅಮೃತ ಮಹೋತ್ಸವವನ್ನು ಸರಳವಾಗಿ ಆಚರಿಸುವಂತಹ ಪರಿಸ್ಥಿತಿ ಪ್ರಕೃತಿ ನಮಗೆ ಎಚ್ಚರಿಸಿದೆ. ಪ್ರಕೃತಿಯನ್ನು ನಾವು ರಕ್ಷಿಸಿದರೆ ಇಂತಹ ಘಟನೆಗಳು ಮರುಕಲಿಸುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸವಿತಾ ಸಮಾದ ರಾಜ್ಯ ಕಾರ್ಯಕಾರಿ ಸದಸ್ಯರು ಹಾಗೂ ಬಿಜೆಪಿ ಓಬಿಸಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಯಾಳ್ಪಿ ಹೆಚ್.ತಿಪ್ಪಣ್ಣನವರು, ನಮ್ಮ ದೇಶದ ಸವಾಂರ್ಗೀಣ ಅಭಿವೃದ್ಧಿಯಾಗಬೇಕು ಎಂದರೆ ಯುವಕರ ಪಾತ್ರ ಬಹುಮುಖ್ಯವಾಗಿದೆ. ದೇಶದಲ್ಲಿ ಶೈಕ್ಷಣಿಕವಾಗಿ ಸಾಮಾಜಿಕ ದೀನದಲಿತರ ಅಭಿವೃದ್ಧಿ ಸರ್ವರಿಗೂ ಸಮಪಾಲು ನಮ್ಮ ಹಕ್ಕುಗಳನ್ನು ನಾವು ಪಡೆದಾಗ ಮಾತ್ರ ನಮ್ಮ ಸ್ವಾತಂತ್ರ್ಯಕ್ಕೆ ಅರ್ಥವಿದೆ ಎಂದು ಹೇಳಿದರು. ಇಂದಿನ ಯುವಕರಿಗೆ ಸ್ವಾತಂತ್ರ್ಯಪೂರ್ವದ ಚರಿತ್ರೆಗಳ ಅರಿವಾಗಬೇಕಿದೆ. ಆಧುನಿಕ ಜಗತ್ತಲ್ಲಿ ಪ್ರತಿಯೊಬ್ಬ ಯುವಕರು ಮೊಬೈಲಿ ಹಾವಳಿಗೆ ಬಿದ್ದು, ದೇಶದ ಇತಿಹಾಸವನ್ನು ಮರೆಯುತ್ತಿರುವುದು ಶೋಚನೀಯ ಸಂಗತಿಯೆಂದು ಬೇಸರ ವ್ಯಕ್ತಪಡಿಸಿದರು. ಸುಮಾರು 230 ವರ್ಷಗಳ ಹಿಂದಿನಿಂದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಟ ಮಾಡಿ ತ್ಯಾಗ ಬಲಿದಾನಗಳಿಂದ ನಮಗೆ ಕೊಟ್ಟ ಈ ಸ್ವಾತಂತ್ರ್ಯದಲ್ಲಿ ನಾವು ಸ್ವತಂತ್ರವಾಗಿ ಬದುಕಬೇಕು ಎಂದರೆ ಉತ್ತಮ ಯೋಜನೆಗಳನ್ನು ಅಳವಡಿಸಿಕೊಂಡು ಶೈಕ್ಷಣಿಕವಾಗಿ ಯುವಕರು ಮುಂದೆ ಬರಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಹೇಮಣ್ಣ, ಮೋತ್ಕರ್ ಶ್ರೀನಿವಾಸ್, ಈರಮ್ಮ ಚಂದ್ರ, ಕೆ.ಎಂ.ಎಫ್. ನಿರ್ದೇಶಕ ವೀರಶೇಖರರೆಡ್ಡಿ, ಸಹಾಯಕ ಪ್ರಾಧ್ಯಾಪ್ಲಕ ಕೆ.ಎಂ.ಶಿವಕುಮಾರ್, ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷ ಆರ್.ಶೇಖಣ್ಣ, ತಾಲ್ಲೂಕು ಪ್ರತಿನಿಧಿ ಸಣ್ಣ ತಿಮ್ಮಪ್ಪ, ಮುಖಂಡರಾದ ಭಾಸ್ಕರ್, ತ್ಯಾಗರಾಜ್, ರಮಣ, ತಿಲಕ್ ರಾಮು, ಬಿ.ಆರ್.ಪಟೇಲ್, ಶಂಕರ್, ಪ್ರಕಾಶ್, ಸೋಡ ವೆಂಕಟೇಶ್, ಮೆಡಿಕಲ್ ವಿಜಯಕುಮಾರ್, ಫೋಟೋ ರವಿವರ್ಮ, ಸೋಮು, ಪಟೇಲ್, ದುರುಗಪ್ಪ, ಶಿವಕುಮಾರ್, ಕೆಎಸ್ಆರ್ಟಿಸಿ ಸೀನಪ್ಪ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.