ಬಾಬು ಜಗಜೀವನರಾಮ ಜಯಂತಿ ಆಚರಣೆ
ನಿಡಗುಂದಿ: ಪಟ್ಟಣದ ಬಸ್ ನಿಲ್ದಾಣದ ಬಳಿ ಬಾಬು ಜಗಜೀವನರಾಮ ಅವರ 115 ನೇ ಜಯಂತಿಯನ್ನು ಯುವಕರು ಮಂಗಳವಾರ ಆಚರಿಸಿದರು.
ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಮುಖಂಡ ವಸಂತ ಹೊಳೆಯಣ್ಣವರ ಹಾಗೂ ಶ್ರೀನಾಥ ಭೈರವಾಡಗಿ, ತುಳಿತಕ್ಕೊಳಗಾದ ಜನಸಮುದಾಯವನ್ನು ಮೇಲೆತ್ತಲು ವಿಶೇಷ ಕೊಡುಗೆ ನೀಡಿರುವ ಡಾ. ಬಾಬು ಜಗಜೀವನರಾಮ ಅಪರೂಪದ ವ್ಯಕ್ತಿ ಎಂದರು. ಸ್ವಾತಂತ್ರ್ಯ ಹೋರಾಟಗಾರ, ಪ್ರಗತಿಪರ ಚಿಂತಕ, ಹಸಿರುಕ್ರಾಂತಿಯ ಹರಿಕಾರ ಆದ ಬಾಬು ಅವರ ಜಯಂತಿ ವಿಶಿಷ್ಟವಾಗಿ ನಿಡಗುಂದಿಯಲ್ಲಿ ಆಚರಿಸುತ್ತಿದ್ದೇವೆ ಎಂದರು.
ಮುಖಂಡರಾದ ಪ್ರಹ್ಲಾದ ಕರಿಯಣ್ಣವರ, ಲಕ್ಷ್ಮಣ ಗುಂಡಿನಮನಿ, ಪರಶುರಾಮ ಗುಂಡಿನಮನಿ, ಬಾಬು ಜಗಜೀವನರಾಮ್ ಅಟೋ ಸಂಘದ ಸದಸ್ಯರು ಇದ್ದರು.
ತಾಲೂಕು ಆಡಳಿತ:
ತಾಲ್ಲೂಕು ಆಡಳಿತದ ವತಿಯಿಂದ ಜರುಗಿದ ಜಯಂತಿಯಲ್ಲಿ ತಹಶೀಲ್ದಾರ್ ಸತೀಶ ಕೂಡಲಗಿ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ರಮೇಶ ಮಾಡಬಾಳ, ಶ್ರೀನಾಥ ಭೈರವಾಡಗಿ, ವಿ.ವೈ. ಅಂಬಿಗೇರ ಇನ್ನೀತರರು ಇದ್ದರು.